ನವದೆಹಲಿ : ಶನಿವಾರದಂದು ಅಮವಾಸ್ಯೆ (Shani amavasye) ಬಂದರೆ ಅದನ್ನು 'ಶನಿ ಅಮಾವಾಸ್ಯೆ' ಎಂದು ಕರೆಯಲಾಗುತ್ತದೆ. 04 ಡಿಸೆಂಬರ್ ಅಂದರೆ ಇಂದಿನ ಶನಿ ಅಮಾವಾಸ್ಯೆ ಹಲವು ರೀತಿಯಲ್ಲಿ ವಿಶೇಷವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಶನಿದೇವ (Shani deva) ಅನುರಾಧಾ ನಕ್ಷತ್ರದಲ್ಲಿರುತ್ತಾನೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿ ಅಮಾವಾಸ್ಯೆಯು ಶನಿದೇವನ ಆರಾಧನೆಗೆ ವಿಶೇಷವಾಗಿದೆ. ಶನಿದೇವನ ಆರಾಧನೆಯಿಂದ ಶನಿಯ ದೋಷದಿಂದ (Shani dosha) ಮುಕ್ತಿ ಸಿಗುತ್ತದೆ. ಇದರೊಂದಿಗೆ ಕೆಲಸದಲ್ಲಿನ ಸಮಸ್ಯೆಯೂ ದೂರವಾಗುತ್ತದೆ. 


COMMERCIAL BREAK
SCROLL TO CONTINUE READING

ಶನಿ ದೇವರನ್ನು ಮೆಚ್ಚಿಸಲು ಈ ವಿಶೇಷ ಕ್ರಮಗಳನ್ನುಅನುಸರಿಸಿ : 
1.ಶನಿ ಅಮಾವಾಸ್ಯೆಯ (Shani amavasye) ದಿನ ಅಶ್ವಥ ಮರಕ್ಕೆ ಹಸಿ ಹಾಲನ್ನು ನೈವೇದ್ಯ ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಸಿಗುತ್ತದೆ.  
2.ಸಾಸಿವೆ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚಿ. 
3. ಅಶ್ವಥ ಮರಕ್ಕೆ (Peepal tree) ಪೂಜೆ ಸಲ್ಲಿಸಿದ ನಂತರ, ಅಶ್ವಥ ಮರಕ್ಕೆ ಪ್ರದಕ್ಷಿನೆ ಹಾಕಬೇಕು. ಹೀಗೆ ಮಾಡುವುದರಿಂದ ಎರಡೂವರೆ ಶನಿ ಮತ್ತು ಏಳೂವರೆ  ಶನಿ (saadesaati) ಎರಡರಿಂದಲೂ ಮುಕ್ತಿ ಸಿಗುತ್ತದೆ. 
4. ಶನಿದೇವನ ಭಯವನ್ನು ಹೋಗಲಾಡಿಸಲು, ಯಾವುದೇ ಶನಿ ದೇವಸ್ಥಾನದಲ್ಲಿ 'ಓಂ ಪ್ರಾಂ ಪ್ರಿಂ ಪ್ರೌಂ ಸ: ಶನಿಶ್ಚರಾಯ ನಮಃ' ಎಂಬ ಈ ಮಂತ್ರವನ್ನು ಜಪಿಸಿ. 
5.ಶನಿ ದೇವನನ್ನು (Shani dev) ಪೂಜಿಸುವುದರ ಜೊತೆಗೆ, ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಿ ಮತ್ತು 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ನಂತರ ಶಿವನ ಅಭಿಷೇಕ ಮಾಡಿ. 
6. ಆಂಜನೇಯನ (Lord Hanuman) ಆರಾಧನೆಯಿಂದ ಶನಿ ದೋಷದ  ಪರಿಣಾಮವನ್ನು ಕಡಿಮೆ ಮಾಡಬಹುದು. ಆದ್ದರಿಂದ, ಶನಿ ದೇವರನ್ನು ಪೂಜಿಸುವುದರ ಜೊತೆಗೆ ಅನ್ಜನೆಯನನ್ನು ಕೂಡಾ ಪೂಜಿಸಿ. 


ಇದನ್ನೂ ಓದಿ : ಹೊಸ ವರ್ಷದಲ್ಲಿ ಈ ಒಂದು ರಾಶಿಯವರಿಗೆ ಉದ್ಯೋಗ ವ್ಯಾಪಾರದಲ್ಲಿ ಸಿಗಲಿದೆ ಅದ್ಬುತ ಯಶಸ್ಸು


ಈ ಕೆಲಸವನ್ನು  ತಪ್ಪಿಯೂ ಮಾಡದಿರಿ :
1.ಶನಿ ಅಮವಾಸ್ಯೆಯಂದು ಕಪ್ಪು ಎಳ್ಳು, ಕಪ್ಪು ಉಂಡೆ, ಕಪ್ಪು ಬಣ್ಣದ ಪಾದರಕ್ಷೆಗಳು ಮತ್ತು ಚಪ್ಪಲಿಗಳು ಮತ್ತು ಕಪ್ಪು ಉದ್ದಿನ ಬೇಳೆಯನ್ನು ಖರೀದಿಸಬೇಡಿ. ಇದರಿಂದ ಶನಿ ದೋಷದ (Shani dosha) ಪ್ರಭಾವ ಕಡಿಮೆಯಾಗುವ ಬದಲು ಹೆಚ್ಚಾಗತೊಡಗುತ್ತದೆ. 
2. ಮನೆಯಲ್ಲಿ ಕಬ್ಬಿಣದ ವಸ್ತುಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಆರ್ಥಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. 
3. ಇಂದು ಅಂದರೆ ಶನಿ ಅಮವಾಸ್ಯೆಯಂದು ಮನೆಯಲ್ಲಿ ತಂದೆ-ತಾಯಿ ಅಥವಾ ಹಿರಿಯರನ್ನು ಅವಮಾನಿಸಬೇಡಿ. ಈ ದಿನ ಜೀವನದಲ್ಲಿ ಹಿರಿಯರ ಅವಮಾನದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 


ಇದನ್ನೂ ಓದಿ : Solar Eclipse 2021: ಗ್ರಹಣ ದೋಷ ನಿವಾರಣೆಗೆ ಸೂರ್ಯ ಗ್ರಹಣ ತುಂಬಾ ಮಹತ್ವದ್ದು, ಈ ವಿಶೇಷ ಉಪಾಯ ಇಂದೇ ತಿಳಿದುಕೊಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.