Rashi Parivartan May 2022 Horoscope: ಜ್ಯೋತಿಷ್ಯದ ಶಾಸ್ತ್ರದಲ್ಲಿ, ಗ್ರಹಗಳ ರಾಶಿ ಪರಿವರ್ತನೆ ತುಂಬಾ ಮಹತ್ವದ್ದು ಎಂದು ಪರಿಗಣಿಸಲಾಗುತ್ತದೆ. ಗ್ರಹಗಳ ಈ ರಾಶಿ ಬದಲಾವಣೆ ಎಲ್ಲಾ ರಾಶಿಗಳ ಜನರ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಬೀರುತ್ತವೆ. ಮೇ ತಿಂಗಳಲ್ಲಿ, ಸೂರ್ಯ, ಮಂಗಳ ಮತ್ತು ಶುಕ್ರ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸುತ್ತಿವೆ. ಮೇ 15 ರಂದು, ಸೂರ್ಯ ವೃಷಭ ರಾಶಿಗೆ ಸಾಗಲಿದ್ದಾನೆ. ಇದರ ನಂತರ, ಮೇ 17 ರಂದು, ಮಂಗಳ ಮೀನ ರಾಶಿಗೆ ಸಾಗಲಿದೆ. ಇದರ ನಂತರ ಶುಕ್ರ ಮೇಷರಾಶಿಗೆ ಪ್ರವೆಶಿಸಲಿದ್ದಾನೆ. ಸೂರ್ಯ, ಮಂಗಳ ಮತ್ತು ಶುಕ್ರರ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರಲಿದೆ. ಸೂರ್ಯ, ಮಂಗಳ ಮತ್ತು ಶುಕ್ರರ ಈ ರಾಶಿ ಪರಿವರ್ತನೆ ಯಾವ ರಾಶಿಗಳ ಮೇಲೆ ಏನು ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಮೇಷ - ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕುಟುಂಬದ ಬೆಂಬಲವೂ ಸಿಗಲಿದೆ. ಕೆಲಸ ಹೆಚ್ಚಾಗಲಿದ್ದು, ಗೌರವ ಸಿಗಲಿದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯವಹಾರದಲ್ಲಿ ನೀವು ಸ್ನೇಹಿತರ ಬೆಂಬಲವನ್ನು ಪಡೆಯಬಹುದು. ಕಟ್ಟಡ ಸುಖ ಪ್ರಾಪ್ತಿಯಾಗಲಿದ್ದು, ಪ್ರವಾಸದ ಯೋಗವಿದೆ.

ವೃಷಭ - ಮನಃಶಾಂತಿ ಇರುತ್ತದೆ. ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸಲಿವೆ. ಕೆಲಸದ ಸ್ಥಳದ ಬಗ್ಗೆ ಹೆಚ್ಚು ಗಮನವಿರಲಿ. ಮಕ್ಕಳ ಕಡೆಯಿಂದ ಕೆಲ ಶುಭ ಸಮಾಚಾರ ಪ್ರಾಪ್ತಿಯಾಗಬಹುದು. ತಾಯಿ ಕಡೆಯಿಂದ ಸಂಪತ್ತು ಬರುವ ಸಾಧ್ಯತೆ ಇದೆ. ನೀವು ವ್ಯಾಪಾರಕ್ಕಾಗಿ ಪ್ರವಾಸಕ್ಕೆ ಕೈಗೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಇರಲಿವೆ.

ಮಿಥುನ - ಮಾನಸಿಕ ಶಾಂತಿಗಾಗಿ ಪ್ರಯತ್ನಿಸಿ. ಧರ್ಮದ ಬಗ್ಗೆ ಗೌರವ ಹೆಚ್ಚಾಗಲಿದೆ. ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿ ಬರಬಹುದು. ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಖರ್ಚು ಹೆಚ್ಚಾಗಬಹುದು. ಅಧಿಕಾರಿಗಳೊಂದಿಗೆ ಸೌಹಾರ್ದಯುತ ಬಾಂಧವ್ಯವಿರುತ್ತದೆ. ಮನಸ್ಸು ಅಸಮಾಧಾನದಿಂದ ಕೂಡಿರಲಿದೆ. ಸ್ವಭಾವದಲ್ಲಿ ಮೊಂಡುತನ ಇರಲಿದೆ. ವಿವಾದಗಳಿಂದ ದೂರವಿರಿ.

ಕರ್ಕ - ಆತ್ಮವಿಶ್ವಾಸ ಹೆಚ್ಚಾಗಲಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಗಾತಿಯ ಬೆಂಬಲ ಸಿಗಲಿದೆ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಶೈಕ್ಷಣಿಕ ಮತ್ತು ಬೌದ್ಧಿಕ ಕೆಲಸಗಳ ಆಹ್ಲಾದಕರ ಫಲಿತಾಂಶಗಳು ಪ್ರಾಪ್ತಿಯಾಗಳಿವೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯ ದೊರೆಯಲಿದೆ.

ಸಿಂಹ - ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂತೋಷ ಅಥವಾ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಪೋಷಕರ ಬೆಂಬಲ ಸಿಗಲಿದೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಲಿದೆ. ಆಹಾರದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಇಚ್ಛೆಗೆ ವಿರುದ್ಧವಾಗಿ ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಕೆಲ ಹಳೆಯ ಸ್ನೇಹಿತರೊಂದಿಗೆ ಮರು-ಸಂಪರ್ಕ ಏರ್ಪಡುವ ಸಾಧ್ಯತೆ ಇದೆ.

ಕನ್ಯಾ - ಮನಸ್ಸು ಸಂತೋಷದಿಂದ ಕೂಎರಲಿದೆ. ಮನಸ್ಸಿನಲ್ಲಿ ಸಕಾರಾತ್ಮಕತೆಯ ಪರಿಣಾಮ ಹೆಚ್ಚಾಗಬಹುದು. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಬರಲಿವೆ. ವಾಹನ ಸುಖದಲ್ಲಿ ವೃದ್ಧಿಯಾಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ಪ್ರಯಾಣವು ಪ್ರಯೋಜನಕಾರಿಯಾಗಲಿದೆ, ಆದರೆ ಸಾಕಷ್ಟು ಕಠಿಣ ಪರಿಶ್ರಮ ಇರಲಿದ್ದು, ಖರ್ಚು ಹೆಚ್ಚಾಗಲಿದೆ.

ತುಲಾ - ಮನಸ್ಸು ಏರಿಳಿತಗಳಿಂದ ಕೂಡಿರಲಿದೆ. ವ್ಯಾಪಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ನೀವು ಬೇರೆ ಯಾವುದೇ ಸ್ಥಳಕ್ಕೆ ತೆರಳಬೇಕಾಗಬಹುದು. ಕೆಲಸ ಹೆಚ್ಚಾಗಲಿದೆ. ಇನ್ನೊಂದೆಡೆ ಆದಾಯ ಕೂಡ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಾತಿನಲ್ಲಿ ಮೃದುತ್ವ ಇರಲಿದೆ, ಆದರೆ ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ. ಕೋಪದ ಕ್ಷಣಗಳು ಮತ್ತು ಅಸಮಾಧಾನದ ಭಾವನೆಗಳು ಮನಸ್ಸಿನಲ್ಲಿ ಉಳಿಯಲಿವೆ.

ವೃಶ್ಚಿಕ - ಮನಃಶಾಂತಿ ಇರುತ್ತದೆ. ಕೆಲಸದ ವ್ಯಾಪ್ತಿಯಲ್ಲಿ ವಿಸ್ತರಣೆಯಾಗಬಹುದು. ಕಾರ್ಯನಿರತತೆ ಹೆಚ್ಚಾಗಲಿದೆ. ಶೈಕ್ಷಣಿಕ ಕೆಲಸಗಳಿಗೆ ಸಂಪೂರ್ಣ ಗಮನ ಕೊಡಿ. ಸ್ನೇಹಿತರಿಂದ ಹಣ ಪಡೆಯಬಹುದು. ಜೀವನವು ನೋವಿನಿಂದ ಕೂಡಿರಬಹುದು. ಪ್ರವಾಸಕ್ಕೆ ಹೋಗಬೇಕಾಗಬಹುದು. ಯೋಜನೇತರ ವೆಚ್ಚಗಳು ಹೆಚ್ಚಾಗಲಿವೆ. ಪೋಷಕರ ಬೆಂಬಲ ಸಿಗಲಿದೆ. ನಿಮಗೆ ಒಳ್ಳೆಯ ಸುದ್ದಿ ಪ್ರಾಪ್ತಿಯಾಗಲಿದೆ.

ಧನು  - ತಾಳ್ಮೆಯ ಕೊರತೆ ಇರಲಿದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಕಂಡುಬರಲಿವೆ. ನೀವು ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಸ್ನೇಹಿತರ ಬೆಂಬಲವನ್ನು ಪಡೆಯುವಿರಿ. ತಂದೆಯಿಂದ ಹಣ ಪಡೆಯಬಹುದು. ಕೋಪದ ಕ್ಷಣಗಳು ಮತ್ತು ತೃಪ್ತಿಯ ಭಾವನೆಗಳು ಇರಲಿವೆ. ಧರ್ಮದ ಬಗ್ಗೆ ಗೌರವ ಹೆಚ್ಚಾಗಲಿದೆ. ಸ್ನೇಹಿತರೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ ಇದೆ.

ಮಕರ - ಆತ್ಮವಿಶ್ವಾಸವು ಹೆಚ್ಚಾಗಲಿದೆ, ಇದರ ಜೊತೆಗೆ ಸೋಮಾರಿತನವು ಅಧಿಕವಾಗಬಹುದು. ಸ್ವಾವಲಂಬಿಯಾಗಿರಿ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮನೆಯಲ್ಲಿ  ಸಮಸ್ಯೆಗಳು ಇರಲಿವೆ. ಜೀವನ ಅಸ್ತವ್ಯಸ್ತವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನಸ್ಸಿಗೆ ತೊಂದರೆಯಾಗಬಹುದು. ಆದರೆ ಮುನ್ನಡೆಯುವ ಅವಕಾಶವಿರಲಿದೆ.


ಇದನ್ನೂ ಓದಿ-Chanakya Niti: ಈ ಮೂರು ಸಂಗತಿಗಳಿಂದ ಆದಷ್ಟು ದೂರವಿರಿ, ಜೀವನವೇ ಹಾಳು ಮಾಡುತ್ತವೆ

ಕುಂಭ - ಮಾತಿನಲ್ಲಿ ಮಧುರತೆ ಇರಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ನೀವು ಪೋಷಕರಿಂದ ಹಣಕಾಸಿನ ನೆರವು ಪಡೆಯಬಹುದು. ನೀವು ಒಡಹುಟ್ಟಿದವರ ಬೆಂಬಲವನ್ನು ಸಹ ಪಡೆಯುವಿರಿ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳ ಪ್ರಭಾವ ಇರಲಿದೆ. ವಿಪರೀತ ಕೋಪ ಇರಲಿದ್ದು, ನಿಯಂತ್ರಿಸಲು ಪ್ರಯತ್ನಿಸಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದ್ದು. ಮಕ್ಕಳ ಸಂತಸ ದ್ವಿಗುಣವಾಗಲಿದೆ.


ಇದನ್ನೂ ಓದಿ-Shani Amavasya 2022: ಶನಿಯ ಕೃಪೆಗೆ ಪಾತ್ರರಾಗಲು ತುಂಬಾ ವಿಶೇಷವಾಗಿದೆ ಶನಿ ಅಮಾವಾಸ್ಯೆ, ಈ ರೀತಿ ಲಾಭ ಪಡೆಯಿರಿ

ಮೀನ - ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರಲಿದೆ. ಉದ್ಯೋಗ ಸಂದರ್ಶನಗಳು ಉತ್ತಮ ಫಲಿತಾಂಶಗಳನ್ನು ನೀಡಬಹುದು. ಆಡಳಿತದಿಂದ ನೆರವು ಪ್ರಾಪ್ತಿಯಾಗಲಿದೆ. ಶಿಕ್ಷಣ ಸುಧಾರಿಸಲಿದೆ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಯೋಜನೆ ರೂಪಿಸಬಹುದು. ಸ್ಥಗಿತಗೊಂಡ ಹಣ ಮತ್ತೆ ಸಿಗಲಿದೆ. ಆತ್ಮವಿಶ್ವಾಸ ಕಡಿಮೆಯಾಗಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.