Raw Milk For Glowing Skin: ಹಾಲು ಒಂದು ಡೈರಿ ಉತ್ಪನ್ನವಾಗಿದ್ದು, ವಿಟಮಿನ್‌, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಪ್ರೋಟೀನ್ ಮತ್ತು ಲ್ಯಾಕ್ಟಿಕ್ ಆಸಿಡ್‌ ಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ಹಾಲು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ. 


COMMERCIAL BREAK
SCROLL TO CONTINUE READING

ಹಸಿ ಹಾಲನ್ನು ಮುಖಕ್ಕೆ ಹಚ್ಚುವ ಸರಿಯಾದ ವಿಧಾನ ತಿಳಿದರೆ ಸಾಕು, ಕಾಂತಿಯುತ ಚರ್ಮ ಪಡೆಯಬಹುದು. ನೀವು ಪ್ರತಿದಿನ ನಿಯಮಿತವಾಗಿ ಮುಖಕ್ಕೆ ಹಸಿ ಹಾಲನ್ನು ಬಳಸಿದರೆ, ಅದು ನಿಮ್ಮ ಚರ್ಮಕ್ಕೆ ಆಂತರಿಕ ಪೋಷಣೆಯನ್ನು ಒದಗಿಸುತ್ತದೆ. ಇದು ನಿಮ್ಮ ತ್ವಚೆಯನ್ನು ಸುಧಾರಿಸುವುದಲ್ಲದೆ, ನಿಮ್ಮ ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Mushroom Benefits: ಚಳಿಗಾಲದಲ್ಲಿ ಬಿಪಿ ಜೊತೆ ಈ 5 ಕಾಯಿಲೆಗಳಿಗೆ ರಾಮಬಾಣ ಮಶ್ರೂಮ್‌.! 


ಹಸಿ ಹಾಲು : ಮೊದಲು ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ನಂತರ ಒಂದು ಬಟ್ಟಲಿನಲ್ಲಿ ಸ್ವಲ್ಪ ಹಸಿ ಹಾಲು ತೆಗೆದುಕೊಳ್ಳಿ. ಹತ್ತಿ ಉಂಡೆಯನ್ನು ಹಾಲಿನಲ್ಲಿ ಅದ್ದಿ ಮತ್ತು ನಿಮ್ಮ ಮುಖವನ್ನು ಮಸಾಜ್ ಮಾಡಿ. ಇದು ನಿಮ್ಮ ಮುಖದಲ್ಲಿರುವ ಡೆಡ್ ಸ್ಕಿನ್ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಂತರ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ.


ಹಾಲು ಮತ್ತು ಅರಿಶಿನ : ಒಂದು ಬಟ್ಟಲಿನಲ್ಲಿ ಹಸಿ ಹಾಲನ್ನು ತೆಗೆದುಕೊಂಡು ಅದರಲ್ಲಿ 1 ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿ. ನಂತರ ಹತ್ತಿ ಉಂಡೆಯ ಸಹಾಯದಿಂದ ಮುಖಕ್ಕೆ ಹಚ್ಚಿ 1-2 ನಿಮಿಷ ಮಸಾಜ್ ಮಾಡಿ. ಅದನ್ನು 10 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.  


ಹಸಿ ಹಾಲಿನ ಫೇಸ್ ಸ್ಕ್ರಬ್ : ಒಂದು ಬಟ್ಟಲಿನಲ್ಲಿ ಹಸಿ ಹಾಲನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಕಡಲೆ ಬೇಳೆ ಹಿಟ್ಟನ್ನು ಬೆರೆಸಿ ಪೇಸ್ಟ್ ಮಾಡಿ. ಈ ಸ್ಕ್ರಬ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಸುಮಾರು 2-3 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ತೊಳೆಯಿರಿ. ಇದು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ನಿಮ್ಮ ಕೂದಲು ಬೆಳೆಯಬೇಕೆ? ಆರೋಗ್ಯಕರ ಕೂದಲಿಗಾಗಿ ಇಲ್ಲಿದೆ ಹಲವು ಪಾನಿಯಗಳು! 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.