ಬೆಂಗಳೂರು : ಇರುವೆ ನಮಗೆ ಕಚ್ಚಿದರೆ ಸಾಕು ಒಮ್ಮೊಮ್ಮೆ ಪ್ರಾಣವೇ ಹೋದ ಹಾಗೆ ಆಗುತ್ತದೆ. ಇರುವೆ ಕಡಿದ ಜಾಗವೆಲ್ಲಾ ತುರಿಕೆ, ಉರಿ ಕಾಣಿಸಿಕೊಳ್ಳುತ್ತದೆ.ಆದರೆ ಇದೇ ಇರುವೆಯನ್ನು ಹುರಿದು ಅರೆದು ಚಟ್ನಿ ಮಾಡಿ ಸೇವಿಸುವುದೂ ಇದೆ. ಮಲೆನಾಡ ಭಾಗದಲ್ಲಿ ಈ ಇರುವೆಯ ಚಟ್ನಿ ಮಾಡಲಾಗುತ್ತದೆ. ಈ ಚಟ್ನಿ ಸೇವಿಸುವುದಕ್ಕೆ ಭಾರೀ ರುಚಿ ಎಂದು ಹೇಳಲಾಗುತ್ತದೆ.ಇದರ ಜೊತೆಗೆ ಇದು ನಾನಾ ರೀತಿಯಲ್ಲಿ ಆರೋಗ್ಯಕ್ಕೆ ಕೂಡಾ ಸಹಕಾರಿ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಇರುವೆ ಚಟ್ನಿಯ ಪ್ರಯೋಜನಗಳು :
ಇದನ್ನು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಭಕ್ಷ್ಯವೆಂದು ಕರೆಯಲಾಗುತ್ತದೆ. ಈ ಖಾದ್ಯದ ಸುವಾಸನೆಯು ಬ್ರಿಟಿಷ್ ಬಾಣಸಿಗ ಬೋರ್ಡೆನ್ ರಾಮ್ಸೆ ಅವರ ನೆಚ್ಚಿನ ಖಾದ್ಯಗಳ ಲಿಸ್ಟ್ ಕೂಡಾ ಸೇರಿದೆ. ಕೆಂಪು ಇರುವೆ ಚಟ್ನಿಯು ಫಾರ್ಮಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ-12 ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಇದು ನಮ್ಮ ಹೃದಯ ಮತ್ತು ಕಣ್ಣುಗಳ ಆರೋಗ್ಯಕ್ಕೂ ಇದು ಪರಿಣಾಮಕಾರಿಯಾಗಿದೆ. ಒಂದು ವೇಳೆ ನಮ್ಮ ದೇಹದಲ್ಲಿ ಈ ವಿಟಮಿನ್ ಗಳ ಕೊರತೆಯಾದಾಗ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಆದರೆ  ಮಾತ್ರೆಗಳ ಬದಲಿಗೆ ಈ 'ಅದ್ಭುತ ಚಟ್ನಿ' ತಿನ್ನುವುದರಿಂದ ದೇಹದ ಅಪೌಷ್ಕತೆ ದೂರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎನ್ನಲಾಗಿದೆ.


ಇದನ್ನೂ ಓದಿ :  ದಾಸವಾಳ ಹೂವನ್ನು ಹೀಗೆ ಬಳಸಿದರೆ ಕೂದಲು ಸದೃಢ, ಕಡುಕಪ್ಪಾಗಿ ಮೊನಕಾಲುದ್ದ ಬೆಳೆಯುತ್ತೆ! ಒಂದೇ ವಾರದಲ್ಲಿ ಫಲಿತಾಂಶ!


ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಗಳಲ್ಲಿ ಯಾರಿಗೂ ದೃಷ್ಟಿ ದೋಷ ಎದುರಾಗುವುದೇ ಇಲ್ಲವಂತೆ.ಇಲ್ಲಿ ಹಣ್ಣು ಹಣ್ಣು ಮುದುಕರು ಕೂಡಾ ಕನ್ನಡಕ ಧರಿಸುವುದಿಲ್ಲವಂತೆ. ಇವರ ದೃಷ್ಟಿ ಈ ಮಟ್ಟಕ್ಕೆ ಚುರುಕಾಗಿರಲು ಅವರು ಸೇವಿಸುವ ಈ ಕೆಂಪು ಇರುವೆ ಚಟ್ನಿಯೇ ಕಾರಣ ಎಂದು ಹೇಳಲಾಗುತ್ತದೆ. 


ಮಾವಿನ ಮರವೇ ಇರಲಿ ಅಥವಾ ಇನ್ನಾವುದೇ ಮರವೇ ಇರಲಿ, ಈ ಇರುವೆಗಳು ತಮ್ಮ ಗೂಡು ಸಿದ್ಧಪಡಿಸುತ್ತವೆ.ಇವು ಎಷ್ಟು ಅಪಾಯಕಾರಿ ಎಂದರೆ ಇತರ ಜಾತಿಯ ಇರುವೆಗಳು ಇವುಗಳಿಂದ ದೂರ ಉಳಿಯುತ್ತವೆ. 


ಇದನ್ನೂ ಓದಿ : ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಗೋಡೆ ಕುಸಿತ


ಇರುವೆ ಚಟ್ನಿ ಹೇಗೆ ತಯಾರಿಸಲಾಗುತ್ತದೆ? :
ಚಟ್ನಿ ಮಾಡಲು, ಕೊಂಬೆಗಳನ್ನು ಒಡೆಯುವ ಮೂಲಕ ಕೆಂಪು ಇರುವೆಗಳನ್ನು ಮೊಟ್ಟೆಗಳೊಂದಿಗೆ ಸಂಗ್ರಹಿಸಲಾಗುತ್ತದೆ.ಇವುಗಳನ್ನು ಪುಡಿಮಾಡಿ ಒಣಗಿಸಲಾಗುತ್ತದೆ.ನಂತರ ಟೊಮೆಟೊ,ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ, ಪುದೀನಾ ಮತ್ತು ಉಪ್ಪನ್ನು ಬೆರೆಸಿ ಚಟ್ನಿ ತಯಾರಿಸಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.