Benefits of Red Banana: ನಮ್ಮ ಪೂರ್ವಜರು ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸಿದ ನಂತರ ಬಾಳೆಹಣ್ಣುಗಳನ್ನು ತಿನ್ನುತ್ತಿದ್ದರು. ಆ ಕಾಲದಲ್ಲಿ ಬಾಳೆಹಣ್ಣನ್ನು ದಿನವೂ ಊಟದ ಜೊತೆಗೆ ತಿನ್ನುವ ಪದ್ಧತಿ ಇತ್ತು. ಅಂದಿನಿಂದ ಇಲ್ಲಿಯವರೆಗೆ ಅನೇಕರು ಅದೇ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಊಟದ ನಂತರ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತದೆ ಎನ್ನುತ್ತಾರೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದಲ್ಲದೆ,  ಹೊಟ್ಟೆಯ ಸಮಸ್ಯೆಗಳಿಂದ ದೂರವಿರಬಹುದು.


COMMERCIAL BREAK
SCROLL TO CONTINUE READING

ಅದರಲ್ಲೂ ಕೆಂಪು ಬಣ್ಣವಿರುವ ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಗುಣಗಳು ತೀವ್ರತರವಾದ ಕಾಯಿಲೆಗಳಿಂದಲೂ ಪರಿಹಾರ ನೀಡಬಲ್ಲವು. ಹಾಗಾದರೆ ಈ ಕೆಂಪು ಬಾಳೆ ಹಣ್ಣಿನ ಪ್ರಯೋಜನದ ಬಗ್ಗೆ  ತಿಳಿಯೋಣ.


ಇದನ್ನೂ ಓದಿ: Ayurvedic Tips: ಬೆಳಗಿನ ಉಪಾಹಾರಕ್ಕಾಗಿ ಫೀನಟ್‌ ಬಟರ್‌ ತಿನ್ನುವುದು ಒಳ್ಳೆಯದ? ತಿಳಿಯಿರಿ


ಕೆಂಪು ಬಣ್ಣದ ಬಾಳೆಹಣ್ಣು ಪೊಟ್ಯಾಸಿಯಮ್, ಬೀಟಾ ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಕೂಡ ಲಭ್ಯವಿದೆ. ಹಾಗಾಗಿ ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಇದು ಆರೋಗ್ಯ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಅಲ್ಲದೇ ದೃಷ್ಟಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. 


ಇದಲ್ಲದೇ ಪದೇ ಪದೇ ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರೂ ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಇದು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಸಹ ಹೊಂದಿರುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಜೊತೆಗೆ ಹೃದಯಕ್ಕೆ ರಕ್ತ ಪೂರೈಕೆಯನ್ನು ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. 


ಇದನ್ನೂ ಓದಿ: White Hair Remedy : ಈ ತರಕಾರಿಯಲ್ಲ ಇದರ ಸಿಪ್ಪೆಯೇ ಸಾಕು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು


ಕೆಂಪು ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು:


* ಅದರಲ್ಲೂ ಗರ್ಭಿಣಿಯರು ಇದನ್ನು ಪ್ರತಿದಿನ ಸೇವಿಸಿದರೆ ಹುಟ್ಟುವ ಮಗು ಆರೋಗ್ಯವಾಗಿ ಹುಟ್ಟುತ್ತದೆ.
* ಇದರ ಗುಣಲಕ್ಷಣಗಳು ದೇಹದಲ್ಲಿನ ಶಾಖವನ್ನು ಸಹ ಕಡಿಮೆ ಮಾಡುತ್ತದೆ. 
* ನರಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಂಪು ಬಾಳೆಹಣ್ಣು ತುಂಬಾ ಒಳ್ಳೆಯದು.


ಇದನ್ನೂ ಓದಿ: ಒಗ್ಗರಣೆ ಡಬ್ಬಿಯಲ್ಲಿನ ಈ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವುದು!


* ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.
* ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ.
* ಮೂತ್ರದ ತೊಂದರೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. 


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.