ನವದೆಹಲಿ: ಅನೇಕ ಬಾರಿ ಹುಡುಗಿಯರನ್ನು ಮೆಚ್ಚಿಸಲು ಪ್ರಯತ್ನಿಸುವಾಗ ಹುಡುಗರು ತಪ್ಪುಗಳನ್ನು ಮಾಡುತ್ತಾರೆ. ಹುಡುಗರ ಕೆಲವು ಕೆಟ್ಟ ಅಭ್ಯಾಸಗಳು ಹುಡುಗಿಯರಿಗೆ ಕೋಪ ತರಿಸುತ್ತವೆ. ಹೀಗಾಗಿ ಹುಡುಗಿಯರು ತುಂಬಾ ಇಷ್ಟಪಡುವ ಅಭ್ಯಾಸಗಳು ಯಾವುವು ಎಂಬುದರ ಬಗ್ಗೆ ನೀವು ತಿಳಿದಿರಬೇಕು? ಕೆಲವು ಹುಡುಗರು ಹುಡುಗಿಯರೊಂದಿಗೆ ಮಾತನಾಡುವುದು ಸುಲಭ ಎಂದು ಭಾವಿಸಿರುತ್ತಾರೆ. ಆದರೆ ಅದು ನಿಜವಲ್ಲ. ಹುಡುಗಿಯರು ಮಾತನಾಡುವಾಗ ಅನೇಕ ವಿಷಯಗಳನ್ನು ಗಮನಿಸುತ್ತಾರೆ. ದೇಹ ಭಾಷೆಯಿಂದಲೇ ಅವರಿಗೆ ಹುಡುಗ ಹೇಗಿದ್ದಾನೆಂದು ಅರ್ಥವಾಗುತ್ತದೆ.


COMMERCIAL BREAK
SCROLL TO CONTINUE READING

ಹುಡುಗಿಯರು ತಮ್ಮತ್ತ ಆಕರ್ಷಿತರಾಗಲು ಹುಡುಗರು ಏನು ಮಾಡಬೇಕು ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಹುಡುಗಿಯರು ಏನು ಇಷ್ಟಪಡುತ್ತಾರೆ? ಅವರಿಗಾಗಿ ಏನು ಮಾಡಬೇಕು? ಅನ್ನೋದರ ಬಗ್ಗೆ ಹುಡುಗರು ತಿಳಿದುಕೊಳ್ಳಬೇಕು. ಹುಡುಗರಲ್ಲಿನ ಯಾವ ಗುಣಗಳು ಹುಡುಗಿಯರಿಗೆ ಇಷ್ಟವಾಗುತ್ತವೆ ಅನ್ನೋದರ ಬಗ್ಗೆಯೂ ತಿಳಿದುಕೊಳ್ಳಬೇಕು. ಹಾಗಾದ್ರೆ ಹುಡುಗರಲ್ಲಿನ ಯಾವ ಗುಣಗಳು ಮತ್ತು ಅಭ್ಯಾಸಗಳು ಹುಡುಗಿಯರಿಗೆ ಇಷ್ಟವಾಗುತ್ತವೆ ಅನ್ನೋದರ ಬಗ್ಗೆ ತಿಳಿದುಕೊಳ್ಳಿರಿ.


ತಮಾಷೆ ಸ್ವಭಾಗದ ಹುಡುಗರನ್ನು ಇಷ್ಟಪಡುತ್ತಾರೆ


ಪ್ರತಿಯೊಬ್ಬರೂ ತಮಾಷೆಯ ಜನರನ್ನು ಇಷ್ಟಪಡುತ್ತಾರೆ. ಯಾರಾದರು ನಗುವುದು ಮತ್ತು ತಮಾಷೆ ಮಾಡದಿದ್ದರೆ ಅಂತಹ ವ್ಯಕ್ತಿಯೊಂದಿಗೆ ಸಮಯ ಕಳೆಯುವುದು ನೀರಸವಾಗುತ್ತದೆ. ಹುಡುಗಿಯರು ಹೆಚ್ಚಾಗಿ ನಗುವ ಮತ್ತು ಸುತ್ತಮುತ್ತಲಿನ ಜನರನ್ನು ನಗಿಸುವ ಹುಡುಗರನ್ನು ಇಷ್ಟಪಡುತ್ತಾರಂತೆ.


ಆತ್ಮವಿಶ್ವಾಸದ ಹುಡುಗರು ಇಷ್ಟವಾಗುತ್ತಾರೆ


ಹುಡುಗಿಯರ ಮುಂದೆ ಮನಸಿನ ಮಾತು ಹೇಳಲು ನಾಚಿಕೆಪಡುವ ಕೆಲವು ಹುಡುಗರಿದ್ದಾರೆ. ಹುಡುಗಿಯರು ಇಂತಹ ಸ್ವಭಾವದ ಹುಡುಗರನ್ನು ಇಷ್ಟಪಡುವುದಿಲ್ಲ. ವಾಸ್ತವವಾಗಿ ಹುಡುಗಿಯರು ಆತ್ಮವಿಶ್ವಾಸದ ಹುಡುಗರನ್ನು ಇಷ್ಟಪಡುತ್ತಾರೆ. ಹುಡುಗಿಯ ಮುಂದೆ ನೀವು ಆತ್ಮವಿಶ್ವಾಸವನ್ನು ತೋರಿಸಿದರೆ, ಅವರು ನಿಮ್ಮನ್ನು ಖಂಡಿತ ಇಷ್ಟಪಡುತ್ತಾರೆ.


ಇದನ್ನೂ ಓದಿ: ಈ ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಬುಧ


ಶುಚಿತ್ವಕ್ಕೆ ಮಹತ್ವ ಕೊಡುವ ಹುಡುಗರು 


ಹುಡುಗರು ತಾವು ವಾಸಿಸುವ ಸ್ಥಳದ ಸ್ವಚ್ಛತೆ ಮತ್ತು ಶುಚಿತ್ವದಲ್ಲಿ ಸಾಮಾನ್ಯವಾಗಿ ನಿರ್ಲಕ್ಷ್ಯ ವಹಿಸುತ್ತಾರೆ. ಕೆಲವರು ಪ್ರತಿದಿನ ಸ್ನಾನವನ್ನೇ ಮಾಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹುಡುಗರ ಕೆಟ್ಟ ಅಭ್ಯಾಸಗಳು ಹುಡುಗಿಯರಿಗೆ ಇಷ್ಟವಾಗುವುದೇ ಇಲ್ಲ.


ಮಾತು ಕೇಳುವ ಹುಡುಗರು ಇಷ್ಟವಾಗುತ್ತಾರೆ


ಹುಡುಗಿಯರು ತಮ್ಮ ಮಾತುಗಳನ್ನು ಕೇಳುವ ಹುಡುಗರನ್ನು ಇಷ್ಟಪಡುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಹುಡುಗಿಯರು ತುಂಬಾ ಭಾವುಕರಾಗಿರುತ್ತಾರೆ. ಹುಡುಗಿಯರು ಕಲ ವಿಷಯಗಳ ಬಗ್ಗೆ ಭಾವುಕರಾಗಿರುತ್ತಾರೆ, ಈ ವೇಳೆ ಅವರು ಯೋಚಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ನೀವು ಅವರ ಮಾತುಗಳನ್ನು ಆಲಿಸಿ ಸಮಾಧಾನ ಮಾಡಿದರೆ ಅವರು ನಿಮ್ಮನ್ನು ಇಷ್ಟಪಡುತ್ತಾರೆ.   


ಒಳ್ಳೆಯ ಡ್ರೆಸ್ಸಿಂಗ್ ಸೆನ್ಸ್ ಇಷ್ಟ


ಹುಡುಗಿಯರು ಹುಡುಗರ ಡ್ರೆಸ್ಸಿಂಗ್ ಸೆನ್ಸ್ ಅನ್ನು ಸಹ ಗಮನಿಸುತ್ತಾರೆ. ನೀವು ಡೇಟಿಂಗ್ ಪ್ರಾರಂಭಿಸಿದ್ದರೆ ಅಥವಾ ಪ್ರಾರಂಭಿಸಲಿದ್ದರೆ ನೀವು ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಡ್ರೆಸ್ಸಿಂಗ್ ಸೆನ್ಸ್ ಮೂಲಕ ಹುಡುಗನು ತನ್ನ ಬಗ್ಗೆ ಎಷ್ಟು ಗಮನಹರಿಸುತ್ತಾನೆ ಅನ್ನೋದರ ಬಗ್ಗೆ ಹುಡುಗಿಯರು ಊಹಿಸುತ್ತಾರಂತೆ.


ಇದನ್ನೂ ಓದಿ: ಈ ರಾಶಿಯವರ ಯಶಸ್ಸಿಗೆ ಕಾರಣವಾಗಲಿದ್ದಾನೆ ವಕ್ರಿಯಾಗಲಿರುವ ಗುರು


ಫಿಟ್ನೆಸ್ ಬಗ್ಗೆ ಗಮನ ಹರಿಸುತ್ತಾರೆ


ಹೆಚ್ಚಿನ ಹುಡುಗಿಯರು ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸುವ ಹುಡುಗರನ್ನು ಇಷ್ಟಪಡುತ್ತಾರೆ. ಹುಡುಗ ಫಿಟ್‌ನೆಸ್‌ಗಾಗಿ ಎಷ್ಟು ಕಾಳಜಿ ವಹಿಸುತ್ತಾನೆ, ಆರೋಗ್ಯದ ವಿಚಾರದಲ್ಲಿ ಆತ ತೆಗೆದುಕೊಳ್ಳುವ ನಿರ್ಧಾರಗಳು ಬಹುತೇಕ ಹುಡುಗಿಯರಿಗೆ ಇಷ್ಟವಾಗುತ್ತವಂತೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ