Relationship Tips: ನಿಮ್ಮ ಸಂಗಾತಿಗೆ ಅಪ್ಪಿ-ತಪ್ಪಿಯೂ ಕೂಡ ಈ ಸಿಕ್ರೆಟ್ ಹೇಳಬೇಡಿ, ಇಲ್ದಿದ್ರೆ...?
Relationship Secrets - ಸಂಬಂಧಗಳು (Relationships) ಸಂಪೂರ್ಣ ಪ್ರಾಮಾಣಿಕವಾಗಿರಬೇಕು ಎಂದು ಹೇಳಲಾಗುತ್ತದೆ. ಇದರ ಹೊರತಾಗಿಯೂ ಕೂಡ ನಿಮ್ಮ ಸಂಗಾತಿಗೆ ಎಂದಿಗೂ ಹೇಳಲೇಬಾರದಂತಹ ಕೆಲವು ವಿಷಯಗಳಿವೆ. ಅವುಗಳಿಂದ ನಿಮ್ಮ ಸಂಬಂಧಕ್ಕೆ ಕುತ್ತು ಬರುವ ಸಾಧ್ಯತೆ ಇದೆ.
Relationship Tips: ಸಂಬಂಧಗಳು ಸಂಪೂರ್ಣ ಪ್ರಾಮಾಣಿಕವಾಗಿರಬೇಕು ಎಂದು ಹೇಳಲಾಗುತ್ತದೆ. ಯಾವುದೇ ವಿಷಯವನ್ನು ಸಂಗಾತಿಯಿಂದ ಬಚ್ಚಿಡಬಾರದು ಎನ್ನಲಾಗುತ್ತದೆ. ಆದರೆ, ಪ್ರತಿ ಬಾರಿ ಇದು ಸರಿಯಾದ ವಿಧಾನ ಅಲ್ಲ ಎನ್ನಲಾಗುತ್ತದೆ. ಹಲವು ಬಾರಿ ಈ ಪ್ರಾಮಾಣಿಕತೆ ಸಂಬಂಧ ಮುಂದುವರೆಸುವ ಬದಲು ಸಂಬಂಧ ಮುರಿಯುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತದೆ.
ಸಂಬಂಧ ತಜ್ಞರ ಪ್ರಕಾರ, ಅಂತಹ ಅನೇಕ ವಿಷಯಗಳಿದ್ದು, ಅವುಗಳನ್ನು ಯಾವತ್ತು ಕೂಡ ಸಂಗಾತಿಯೊಂದಿಗೆ ಮರೆತು ಹಂಚಿಕೊಳ್ಳಬಾರದು ಎನ್ನಲಾಗಿದೆ. ಇದು ನಿಮ್ಮ ಪರಸ್ಪರ ಸಂಬಂಧಗಳ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಕೆಲವೊಮ್ಮೆ ನಿಮ್ಮ ಸಂಬಂಧದ ವಿಘಟನೆಗೆ ಕಾರಣವೂ ಆಗುವ ಸಾಧ್ಯತೆ ಇದೆ. ಸಂಗಾತಿಯ ಮುಂದೆ ಯಾವತ್ತೂ ಹೇಳಬಾರದ ಆ ವಿಷಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹಳೆಯ ಲೈಂಗಿಕ ಜೀವನವನ್ನು ಉಲ್ಲೇಖಿಸಬೇಡಿ
ಅಂದ ಹಾಗೆ, ಪ್ರಸ್ತುತ ಪ್ರಪಂಚವು ಮೊದಲಿಗಿಂತ ಹೆಚ್ಚು ಧೈರ್ಯಶಾಲಿಯಾಗಿದೆ. ಇಂದು ಜನರು ತಮ್ಮ ಸಂಗಾತಿಯೊಂದಿಗೆ ಎಲ್ಲಾ ರೀತಿಯ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಅದರೂ ಕೂಡ ನಿಮ್ಮ ಸಂಗಾತಿಯ ಮುಂದೆ ಹಳೆಯ ಲೈಂಗಿಕ ಜೀವನವನ್ನು ಉಲ್ಲೇಖಿಸಬೇಡಿ. ಹೀಗೆ ಮಾಡುವುದರಿಂದ ಸಂಗಾತಿಯ ಮನಸ್ಸಿನಲ್ಲಿ ನಿಮ್ಮ ಸಮರ್ಪಣೆಯ ಬಗ್ಗೆ ಅನೇಕ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ಇದು ನಿಮ್ಮ ಸಂಬಂಧದ (Relation) ಮೇಲೆ ಪರಿಣಾಮ ಬೀರಬಹುದು.
ಸಂಗಾತಿಯ ಪೋಷಕರ ಕುರಿತು ಕೆಟ್ಟ ಮಾತುಗಳನ್ನು ಆಡಬೇಡಿ
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕೆಲವು ಒಳ್ಳೆಯ ಅಥವಾ ಕೆಟ್ಟ ಗುಣಗಳು ಇದ್ದೆ ಇರುತ್ತವೆ. ಈ ವಿಷಯ ಎಲ್ಲರಿಗೂ ಅನ್ವಯಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯ ಪೋಷಕರ ಬಗ್ಗೆ ನಿಮಗೆ ಏನೂ ಇಷ್ಟವಾಗದಿದ್ದರೆ, ಅವರ ದುರ್ನಡತೆಯ ಕುರಿತು ಮರೆತೂ ಕೂಡ ಸಂಗಾತಿಯ ಮುಂದೆ ಉಲ್ಲೇಖ ಮಾಡಬೇಡಿ. ಯಾವ ಮನುಷ್ಯನೂ ತನ್ನ ಹೆತ್ತವರ ದುರ್ನಡತೆಯಾ ಕುರಿತು ಕೆಟ್ಟ ಮಾತುಗಳನ್ನು ಸಹಿಸುವುದಿಲ್ಲ. ಇದನ್ನು ಮಾಡುವುದರಿಂದ, ನಿಮ್ಮ ಸಂಬಂಧಗಳು ಹುಳಿಯಾಗಬಹುದು, ಅದು ಕೆಲವೊಮ್ಮೆ ಸಂಬಂಧ ಅಂತ್ಯದ ರೂಪದಲ್ಲಿಯೂ ಕೂಡ ಕೊನೆಗೊಳ್ಳಬಹುದು.
ಪದೇ ಪದೇ ಸಂಗಾತಿಯಲ್ಲಿನ ದೋಷಗಳು ಎತ್ತಿ ತೋರಿಸಬೇಡಿ
ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆಯ್ಕೆಯ ಸಂಗಾತಿ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಜೀವನದಲ್ಲಿ ಹಲವಾರು ರಾಜಿ ಮತ್ತು ಹೊಂದಾಣಿಕೆಗಳೊಂದಿಗೆ ಮುನ್ನಡೆಯಬೇಕಾಗುತ್ತದೆ. ನಿಮ್ಮ ಸಂಗಾತಿಯು ಕೆಲವು ನ್ಯೂನತೆಗಳನ್ನು ಹೊಂದಿದ್ದರೆ ಮತ್ತು ಅದನ್ನು ಸರಿಪಡಿಸಲು ಸಾಧ್ಯವಾದರೆ, ನೀವು ಅವರಿಗೆ ಒಂದೆರಡು ಬಾರಿ ಹೇಳಬಹುದು. ಆದರೆ ಅದು ಗುಣವಾಗದ ಕೊರತೆಯಾಗಿದ್ದರೆ ಸಂಗಾತಿಯ ಮುಂದೆ ಪದೇ ಪದೇ ಅದನ್ನು ಉಲ್ಲೇಖಿಸಿ ಹೊಟ್ಟೆಕಿಚ್ಚು ಪಡಬಾರದು. ಇದು ನಿಮ್ಮ ಸಂಬಂಧದ ಅಂತ್ಯಕ್ಕೆ ಕಾರಣವಾಗಬಹುದು.
ಇದನ್ನೂ ಓದಿ-ಶೀಘ್ರದಲ್ಲಿಯೇ ಈ 4 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ, ಕಾರಣ ಇಲ್ಲಿದೆ
ಹಿಂದಿನ ಸಂಬಂಧಗಳನ್ನು (Love) ಉಲ್ಲೇಖಿಸಬೇಡಿ
ಇಂದಿನ ಕಾಲದಲ್ಲಿ, ಹೆಚ್ಚಿನ ಹುಡುಗರು ಮತ್ತು ಹುಡುಗಿಯರಲ್ಲಿ ಬಹುತೇಕರು ಹಳೆ ಪ್ರೇಮ ಸಂಬಂಧ ಹೊಂದಿರುತ್ತಾರೆ. ಹುಡುಗರಿಗೆ ಹಳೆಯ ಸಂಬಂಧವಿದೆ ಎಂದು ಹುಡುಗಿಯರಿಗೆ ತಿಳಿದರೆ, ಅವರು ಅದನ್ನು ಒಮ್ಮೆ ಸಹಿಸಿಕೊಳ್ಳುತ್ತಾರೆ. ಆದರೆ ಇದು ಹುಡುಗರ ವಿಷಯಗಳು ವ್ಯತಿರಿಕ್ತವಾಗಿದೆ. ಆದ್ದರಿಂದ, ನಿಮ್ಮ ಹಳೆಯ ಸಂಬಂಧವನ್ನು ಮರೆತು ಸಹ ನಿಮ್ಮ ಸಂಗಾತಿಗೆ ಹೇಳಬೇಡಿ. ಹೀಗೆ ಮಾಡುವುದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಬಹುದು.
ಇದನ್ನೂ ಓದಿ-LIC ಪಾಲಸಿ ಧಾರಾಕಾರ ಗಮನಕ್ಕೆ! ಈ ಎರಡು ಪಾಲಸಿಗಳಲ್ಲಿ ಭಾರಿ ಬದಲಾವಣೆ, ತಪ್ಪದೆ ತಿಳಿದುಕೊಳ್ಳಿ
ಹಳೆಯ ಮಾಜಿ ಗೆಳೆಯ/ಗೆಳತಿ ಬಗ್ಗೆ ಮಾತನಾಡಬೇಡಿ
ನೀವು ಈಗ ನಿಮ್ಮ ಮಾಜಿ ಸಂಗಾತಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದು ಮತ್ತು ಅವರು ಈಗ ನಿಮ್ಮೊಂದಿಗೆ ಸ್ನೇಹಿತರಾಗಿ ಮಾತ್ರ ಸಂಪರ್ಕದಲ್ಲಿದ್ದರೆ, ಇದನ್ನು ನಿಮ್ಮ ಸಂಗಾತಿಗೆ ಹೇಳಬೇಡಿ. ನಿಮ್ಮ ಸಂಗಾತಿ ನೀವು ಅವರಿಗೆ ಮೋಸ ಮಾಡುತ್ತಿದ್ದೀರಿ ಎಂದು ಭಾವಿಸಬಹುದು ಮತ್ತು ಇನ್ನೂ ಇಬ್ಬರೂ ಸಂಬಂಧದಲ್ಲಿರುವಿರಿ ಅಂದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ, ಈ ವಿಷಯವನ್ನು ಯಾವಾಗಲೂ ನಿಮ್ಮ ಸಂಗಾತಿಯಿಂದ ರಹಸ್ಯವಾಗಿಡಿ.
ಇದನ್ನೂ ಓದಿ-Share Market ಹೂಡಿಕೆದಾರರಿಗೊಂದು ಸಂತಸದ ಸುದ್ದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.