Vastu Tips: ವ್ಯಾಲೆಟ್ ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ, ಆರ್ಥಿಕ ಪ್ರಗತಿ ನಿಂತುಹೋಗುತ್ತದೆ
Vastu Tips: ಸಾಮಾನ್ಯವಾಗಿ ಜನರು ತಮ್ಮ ಪರ್ಸ್ ನಲ್ಲಿ ಹಣದ ಹೊರತಾಗಿ ದೀರ್ಘಕಾಲದವರೆಗೆ ಬಳಕೆಯಲ್ಲಿಲ್ಲದ ವಸ್ತುಗಳನ್ನು ಕೂಡ ಇಟ್ಟಿರುತ್ತಾರೆ.
Vastu Tips: ನವದೆಹಲಿ: ಸಾಮಾನ್ಯವಾಗಿ ಜನರು ತಮ್ಮ ಪರ್ಸ್ ನಲ್ಲಿ ಹಣದ ಜೊತೆಗೆ ದೀರ್ಘಕಾಲದವರೆಗೆ ಬಳಕೆಯಾಗದ ವಸ್ತುಗಳನ್ನು ಕೂಡ ಇರಿಸಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇವುಗಳಲ್ಲಿನ ಕೆಲವು ವಸ್ತುಗಳನ್ನು ಪರ್ಸ್ ನಿಂದ ಕೂಡಲೇ ಹೊರಹಾಕಬೇಕು. ಏಕೆಂದರೆ ಈ ವಸ್ತುಗಳ ಅಕ್ಕ ಪಕ್ಕ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ನಿಮಗೆ ವೈಯಕ್ತಿಕವಾಗಿ ಆರ್ಥಿಕ ಹಾನಿಯನ್ನುಂಟು ಕೂಡ ಮಾಡಬಹುದು. ಆದರೆ, ಕೆಲ ಸಂಗತಿಗಳನ್ನು ಪರ್ಸ್ ನಲ್ಲಿಡುವುದರಿಂದ ಆರ್ಥಿಕ ಪ್ರಗತಿ ಕೂಡ ಸಾಧಿಸಬಹುದು.
ಪರ್ಸ್ ನಲ್ಲಿ ಹರಿದ ನೋಟುಗಳು, ಫೋಟೋಗಳು ಅಥವಾ ಹಾಳಾದ ಕಾಗದಗಳನ್ನಿಡಬೇಡಿ. ಇದರಿಂದ ಹಣ ಬರುವಿಕೆ ವಿಳಂಬವಾಗುತ್ತದೆ. ನಿಮ್ಮ ಪರ್ಸ್ ಎಷ್ಟು ಸ್ವಚ್ಛವಾಗಿರುತ್ತದೆಯೋ ಅಷ್ಟೇ ಅದರಲ್ಲಿರುವ ವಸ್ತುಗಳು ಕೂಡ ಸ್ವಚ್ಛವಾಗಿರುತ್ತವೆ.
ದೇವಿ ಲಕ್ಷ್ಮಿಯ ಭಾವಚಿತ್ರ - ಪರ್ಸ್ ನಲ್ಲಿ ದೇವಿ ಲಕ್ಷ್ಮಿಯ ಚಿಕ್ಕ ಛಾಯಾಚಿತ್ರ ಇಡಲು ಮರೆಯಬೇಡಿ ಹಾಗೂ ಕಾಲಕಾಲಕ್ಕೆ ಅದನ್ನು ಬದಲಾಯಿಸುತ್ತಾ ಇರಿ. ಇದರಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿ ಉಳಿಯುವುದಿಲ್ಲ. ಇದರ ಹೊರತಾಗಿ ನೀವು ನಿಮ್ಮ ಪರ್ಸ್ ನಲ್ಲಿ ಶ್ರೀಯಂತ್ರ ಕೂಡ ಇಡಬಹುದು. ಏಕೆಂದರೆ ಶ್ರೀಯಂತ್ರವನ್ನು ಲಕ್ಷ್ಮಿಯ ರೂಪ ಎಂದು ಭಾವಿಸಲಾಗುತ್ತದೆ.
ಅಶ್ವತ್ಥ ಎಲೆ - ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಶ್ವತ್ಥ ಮರಕ್ಕೆ ಭಾರಿ ಮಹತ್ವವಿದೆ. ತಾಜಾ ಅಶ್ವತ್ಥ ಮರದ ಎಳೆಯನ್ನು ತೆಗೆದುಕೊಂಡು ಅದನ್ನು ಗಂಗಾಜಲದಲ್ಲಿ ತೊಳೆದು ಅದರ ಮೇಲೆ ಕೇಸರಿಯಿಂದ 'ಶ್ರೀಕಾರ' ಬರೆದು ಅದನ್ನು ಅರಸ್ ನಲ್ಲಿಡಿ. ಇದನ್ನು ಕೂಡ ಕಾಲಕಾಲಕ್ಕೆ ಬದಲಾಯಿಸುತ್ತಾ ಇರಿ. ಇದು ಕೂಡ ಆರ್ಥಿಕ ಪ್ರಗತಿಯ ಮಾರ್ಗಗಳನ್ನು ತೆರೆಯುತ್ತದೆ.
ಇದನ್ನು ಓದಿ-Religious Beliefs: ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಗುರುವಾರ ಈ ಕೆಲಸ ತಪ್ಪದೆ ಮಾಡಿ
ಅಕ್ಕಿ ಕಾಳು - ಕಾಗದದ ಒಂದು ತುಣುಕನ್ನು ತೆಗೆದುಕೊಂಡು ಅದರಲ್ಲಿ 21 ಅಕ್ಕಿ ಕಾಳುಗಳನ್ನು ಇತ್ತು ಪರ್ಸ್ ನಲ್ಲಿಡಿ. ಇದು ಅನಗತ್ಯ ಖರ್ಚು ತಗ್ಗಿಸುತ್ತದೆ.
ಇದನ್ನು ಓದಿ- ವಿಸ್ಮಯ..! ಪಾರ್ವತಿ, ಪರಮೇಶ್ವರರ ಕಲ್ಯಾಣ ನಡೆದ ಈ ಪವಿತ್ರ ನೆಲದಲ್ಲಿ ಈಗಲೂ ಉರಿಯುತ್ತಿದೆ ಹವನಕುಂಡ.!
ಆಶಿರ್ವಾದದ ರೂಪದಲ್ಲಿ ಪಡೆದ ಹಣ - ಗುರು-ಹಿರಿಯರು ಪ್ರೀತಿ-ಆಶಿರ್ವಾದದ ರೂಪದಲ್ಲಿ ನಿಮಗೆ ಕೊಟ್ಟ ಹಣವನ್ನು ಕೂಡ ಪರ್ಸ್ ನಲ್ಲಿಡಿ. ಇದನ್ನು ಖರ್ಚು ಮಾಡಬೇಡಿ. ಇದು ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ, ನಿಮ್ಮ ಪರ್ಸ್ ಯಾವಾಗಲು ತುಂಬಿರುವಂತೆ ನೋಡಿಕೊಳ್ಳುತ್ತದೆ.
ಇದನ್ನು ಓದಿ- Sunday Remedies: ಭಾನುವಾರ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ
ಬೆಳ್ಳಿ ನಾಣ್ಯ- ನಿಮ್ಮ ಬಳಿ ಬೆಳ್ಳಿ ನಾಣ್ಯವಿದ್ದರೆ ಅದನ್ನು ನಿಮ್ಮ ಪರ್ಸ್ ನಲ್ಲಿಡಿ. ನಿಮ್ಮ ಪರ್ಸ್ ನಲ್ಲಿಡುವ ಮುನ್ನ ಆ ನಾಣ್ಯವನ್ನು ದೇವಿ ಲಕ್ಷ್ಮಿಗೆ (Godess Lakshmi) ಅರ್ಪಿಸಿ. ಬಳಿಕ ಅದನ್ನು ನೀವು ನಿಮ್ಮ ಪರ್ಸ್ ನಲ್ಲಿಡಿ.
ಇದನ್ನು ಓದಿ-Vastu Tips : ಶಾಂತಂ ಪಾಪಂ..! ತಪ್ಪಿಯೂ ದೇವರ ಮನೆಯಲ್ಲಿ ಹೀಗೆಲ್ಲಾ ಮಾಡಬೇಡಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.