Religious Belief: ಈ ದಿನ ಹಾಗೂ ಈ ತಾರೀಖಿಗೆ ಸಾಲ ಪಡೆಯುವುದು ಬೇಡ... ಯಾಕೆ?
Religious Belief: ಋಣ ಅರ್ಥಾತ್ ಸಾಲ ಮಾನವನ ಜೀವನದ ಒಂದು ಅವಿಭಾಜ್ಯ ಅಂಗ ಎಂದೇ ಸಾಬೀತಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಜನರು ವಿವಾಹ ಅಥವಾ ಭೂಮಿ ಖರೀದಿಗಾಗಿ ಮಾತ್ರ ಸಾಹುಕಾರನ ಬಳಿ ಸಾಲ ಪಡೆಯುತ್ತಿದ್ದರು.
Religious Belief - ನವದೆಹಲಿ: ಋಣ ಅರ್ಥಾತ್ ಸಾಲ ಮಾನವನ ಜೀವನದ ಒಂದು ಅವಿಭಾಜ್ಯ ಅಂಗ ಎಂದೇ ಸಾಬೀತಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಜನರು ವಿವಾಹ ಅಥವಾ ಭೂಮಿ ಖರೀದಿಗಾಗಿ ಮಾತ್ರ ಸಾಹುಕಾರನ ಬಳಿ ಸಾಲ ಪಡೆಯುತ್ತಿದ್ದರು. ಬಳಿಕ ಬ್ಯಾಂಕಿಂಗ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಇಂದು ಸಾಲ ಪಡೆಯುವುದು ಒಂದು ಸಾಮಾನಿ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ. ಸಾಲ ಪಡೆದು ಮನೆ, ವಾಹನ ಇತ್ಯಾದಿಗಳನ್ನು ಖರೀದಿಸುವುದುಇಂದು ಸಾಮಾನ್ಯವಾಗಿದೆ. ಅಂದರೆ, ಇಂದಿನ ಜಗತ್ತಿಯಲ್ಲಿ ಯಾವುದೇ ಓರ್ವವ್ಯಕ್ತಿ ಯಾವುದಾದರೊಂದು ಸಾಲದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾನೆ. ಕೆಲ ಜನರು ಅತ್ಯಾವಶ್ಯಕ ಎನಿಸಿದಲ್ಲಿ ಮಾತ್ರ ಸಾಲ ಪಡೆಯುತ್ತಾರೆ ಹಾಗೂ ಇನ್ನುಳಿದ ಕೆಲವರು ಅನಾವಶ್ಯಕವಾಗಿ ಕೂಡ ಸಾಲ ಪಡೆದು ದೊಡ್ಡಸ್ತಿಕೆ ಮೆರೆಯಲು ಬಯಸುತ್ತಾತೆ.
ಜ್ಯೋತಿಷ್ಯಶಾಸ್ತ್ರದ ದೃಷ್ಟಿಕೋನದಿಂದ ನೋಡುವುದಾದರೆ, ಜಾತಕದ ಆರನೇ ಭಾವ ರೋಗ, ಸಾಲ ಹಾಗೂ ಶತ್ರುವಿನ ಭಾವವಾಗಿದೆ. ಈ ಆರನೇ ಭಾವದಲ್ಲಿ ರಾಹುವಿನ ಜೊತೆಗೆ ಮಂಗಳ, ಶನಿ ಅಥವಾ ಬುಧಗಳ ಪ್ರಭಾವವಿದ್ದರೆ ಅಂತಹ ವ್ಯಕ್ತಿಗಳು ಅನಾವಶ್ಯಕ ವೆಚ್ಚ ಮಾಡುವ ಪ್ರವೃತ್ತಿ ಹೊಂದಿರುತ್ತಾರೆ ಹಾಗೂ ಈ ಕಾರಣದಿಂದ ಅವರು ಜೀವನ ಪೂರ್ತಿ ಸಾಲ(Loan)ದಲ್ಲಿಯೇ ಜೀವನ ಕಳೆಯುತ್ತಾರೆ. ಶನಿ ಹಾಗೂ ಮಂಗಳ 6ನೇ ಅಥವಾ 12 ನೇ ಭಾವದಲ್ಲಿ ಶತ್ರು ರಾಶಿಯ ಜೊತೆಗೆ ಯುತಿ ಏರ್ಪಟ್ಟರೆ ಸಾಲದ ವಿಷಯದಲ್ಲಿ ವ್ಯಕ್ತಿಗೆ ತುಂಬಾ ಅವಮಾನ ಎದುರಾಗುತ್ತವೆ.
ಇದನ್ನು ಓದಿ- The Story of ShaniDev : ಸೂರ್ಯಪುತ್ರ ಶನಿಗೆ ಶನಿವಾರ ಎಳ್ಳೆಣ್ಣೆಅರ್ಪಿಸಿದರೆ ಏನು ಫಲ..?
ಸಾಲ ಪಡೆಯಲು ಶುಭ ಸಮಯ.
ಸೋಮವಾರ, ಬುಧವಾರ ಹಾಗೂ ಶುಕ್ರವಾರ ದಿನಗಳು ಸಾಲ ಪಡೆಯಲು ಉತ್ತಮ ದಿನಗಳಾಗಿವೆ. ಈ ದಿನಗಳಂದು ಪಡೆದ ಸಾಲ ಶೀಘ್ರದಲ್ಲಿಯೇ ತೀರಿಹೋಗುತ್ತದೆ. ಶನಿವಾರ, ಭಾನುವಾರ, ಗುರುವಾರ ಹಾಗೂ ಮಂಗಳವಾರ ದಿನಗಳಂದು ಸಾಲ ಪಡೆಯಬೇಡಿ. ಈ ದಿನಗಳಂದು ಪಡೆದ ಋಣ ಬೇಗನೆ ತೀರುವುದಿಲ್ಲ. ಈ ದಿನ ಬೇಕಾದರೆ ನೀವು ಸಾಲ ಮರುಪಾವತಿಸಿ. ಸಾಲ ಮರುಪಾವತಿಸಲು ಈ ದಿನಗಳನ್ನು ಶುಭ ದಿನಗಳು ಎಂದು ಪರಿಗಣಿಸಲಾಗಿದೆ.ಇದೇ ರೀತಿ ತಿಂಗಳಿನ 8, 17 ಹಾಗೂ 26 ನೇ ತಾರೀಖಿನಂದು ಸಾಲ ಪಡೆಯಬೇಡಿ. ಏಕೆಂದರೆ ಈ ದಿನಾಂಕಗಳ ಮೂಲಾಂಕ 8 ಆಗಿರುತ್ತದೆ ಹಾಗೂ ಇದು ಶನಿಯ ಅಂಕ. ಈದಿನಾಂಕಗಳಂದು ಪಡೆದ ಋಣ ಬೇಗನೆ ತೀರುವದಿಲ್ಲ.
ಇದನ್ನು ಓದಿ-ಪ್ರಳಯದ ಮುನ್ಸೂಚನೆ ಕೊಟ್ಟನಾ ಸೂರ್ಯ..? ಗವಿ ಗಂಗಾಧರೇಶ್ವರ ದೇಗುಲದ ಶಕುನ ಏನು..?
ಸಾಲ ಪಡೆದ ಪತ್ರದ ಮೇಲೆ ಕಪ್ಪು ಬಣ್ಣದ ಶಾಹಿ ಹೊಂದಿರುವ ಪೆನ್ನಿನಿಂದ ಹಸ್ತಾಕ್ಷರವಾಗಲಿ ಅಥವಾ ಬರೆಯುವುದಾಗಲಿ ಮಾಡಬೇಡಿ. ಸಾಲ ಪತ್ರದ ಮೇಲೆ ಸಹಿ ಮಾಡುವಾಗ ಮನಸ್ಸಿನಲ್ಲಿ 'ತ್ವದೀಯಃ ವಸ್ತು ಗೋವಿಂದಂ ತುಭ್ಯಮೇವ್ ಸಮರ್ಪಯೇತ್ ' ಮಂತ್ರವನ್ನು ಪಠಿಸಿ. ಈ ಮಂತ್ರದ ಪ್ರಭಾವದಿಂದ ನೀವು ಪಡೆದ ಸಾಲ ಬೇಗನೆ ತೀರಿಹೊಗುತದೆ. ಒಂದು ವೇಳೆ ಸಾಲ ಆವಶ್ಯಕತೆಗಿಂತ ಹೆಚ್ಚಾಗಿದ್ದು, ಹಲವು ಉಪಾಯಗಳನ್ನು ಮಾಡಿದ ಬಳಿಕವೂ ಕೂಡ ತೀರದಿದ್ದರೆ, ಮಂಗಳವಾರ ಮಧ್ಯರಾತ್ರಿ ಶ್ರೀ ಆಂಜನೇಯನ ಮೂರ್ತಿಯ ಎದುರು ಕುಳಿತುಕೊಂಡು ಚಮೇಲಿ ಎಣ್ಣೆಯ ದೀಪ ಉರಿಸಿ. ಬಳಿಕ 'ಹಂ ಹನುಮತೆ ರುದ್ರಾತ್ಮಕಾಯ ಹುಂ ಫಂಟ್'ಮಂತ್ರವನ್ನು ಸತತವಾಗಿ 11, 21 ಅಥವಾ 51 ಬಾರಿ ಪ್ರತಿ ಮಂಗಳವಾರ ಪಠಿಸಿ. ಸಾಲ ಮುಕ್ತಿಯ ಜೊತೆಗೆ ನಿಮ್ಮ ಆದಾಯ ಕೂಡ ಹೆಚ್ಚಳವಾಗಲಿದೆ.
ಇದನ್ನು ಓದಿ-Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.