Beauty Tips: ಬೇಸಿಗೆಯಲ್ಲಿ ಕೋಮಲ ತ್ವಚೆಗೆ ರೋಸ್ ವಾಟರ್ ಫೇಸ್ ಪ್ಯಾಕ್ಗಳು
Beauty Tips: ಸುಂದರವಾದ, ಹೊಳೆಯುವ ತ್ವಚೆ ನಮ್ಮದಾಗಬೇಕು ಎಂಬ ಬಯಕೆ ಬಹುತೇಕ ಜನರಿಗೆ ಇರುತ್ತದೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ರೋಸ್ ವಾಟರ್ ಬಳಕೆ ನಿಮಗೆ ತುಂಬಾ ಪಯೋಜನಕಾರಿ ಆಗಿದೆ.
Beauty Tips: ರೋಸ್ ವಾಟರ್ ಉತ್ತಮ ಸೌಂದರ್ಯವರ್ಧಕ. ಹಾಗಾಗಿಯೇ, ಪ್ರಾಚೀನ ಕಾಲದಿಂದಲೂ, ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಗುಲಾಬಿ ದಳಗಳನ್ನು ಬಳಸುತ್ತಿದ್ದರು. ಮಾತ್ರವಲ್ಲ, ಮಹಾರಾಣಿ, ರಾಜಕುಮಾರಿಯರಿಗೆ ಪನ್ನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಗುಲಾಬಿ ದಳಗಳಲ್ಲಿ ಚರ್ಮದ ಆರೋಗ್ಯಕ್ಕೆ ಬೇಕಾದ ವಿಟಮಿನ್ ಇ ಮತ್ತು ವಿಟಮಿನ್ ಕೆ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿಯೇ, ಇದನ್ನು ಸುಂದರ ತ್ವಚೆಗೆ ದಿವ್ಯೌಷಧ ಎಂದು ಹೇಳಲಾಗುತ್ತದೆ.
ಬೇಸಿಗೆ ಕಾಲದಲ್ಲಿ ರೋಸ್ ವಾಟರ್ ನಿಂದ ಫೇಸ್ ಮಾಸ್ಕ್ (Rose Water Face Pack) ತಯಾರಿಸುವುದರಿಂದ ಇದು ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ. ಹಾಗಿದ್ದರೆ, ಯಾವ ರೀತಿಯ ಚರ್ಮದ ಸಮಸ್ಯೆಗೆ ಯಾವ ಫೇಸ್ ಪ್ಯಾಕ್ ಬಳಸುವುದು ಉತ್ತಮ ಎಂದು ತಿಳಿಯೋಣ...
ರೋಸ್ ವಾಟರ್-ಶ್ರೀಗಂಧ:
ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ (Oily Skin) ಮತ್ತು ಮೊಡವೆಗಳು ಹೆಚ್ಚಾಗಿದ್ದರೆ ಒಂದು ಚಮಚ ರೋಸ್ ವಾಟರ್ (Rose Water), ಅರ್ಧ ಚಮಚ ಶ್ರೀಗಂಧದ ಪುಡಿ, ಅರ್ಧ ಚಮಚ ಗುಲಾಬಿ ದಳದ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಚರ್ಮದಲ್ಲಿ ಎಣ್ಣೆ ನಿವಾರಣೆಯಾಗುವ ಜೊತೆಗೆ ಮೊಡವೆಗಳು ಬೇಗನೆ ಗುಣವಾಗುತ್ತವೆ.
ಇದನ್ನೂ ಓದಿ- ಕೆಲವೇ ನಿಮಿಷಗಳಲ್ಲಿ ಸುಂದರ ತ್ವಚೆ ನಿಮ್ಮದಾಗಿಸಲು ಕಿತ್ತಳೆ ಹಣ್ಣನ್ನು ಈ ರೀತಿ ಬಳಸಿ
ಗುಲಾಬಿ ಮತ್ತು ಹಾಲು:
ಎರಡು ಗುಲಾಬಿ ಹೂಗಳನ್ನು ಪುಡಿ ಮಾಡಿ ಅರ್ಧ ಕಪ್ ಹಾಲಿನಲ್ಲಿ 30 ನಿಮಿಷಗಳ ಕಾಲ ನೆನೆಸಿ, ಇದನ್ನು ಪೇಸ್ಟ್ ಮಾಡಿ ಚರ್ಮದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಇದು ಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ.
ರೋಸ್ ಮತ್ತು ಓಟ್ಸ್:
ಅರ್ಧ ಗಂಟೆಗಳ ಕಾಲ ಗುಲಾಬಿ ದಳಗಳನ್ನು ನೀರಿನಲ್ಲಿ ನೆನೆಸಿ ಬಳಿಕ ಅದನ್ನು ರುಬ್ಬಿ ಇದಕ್ಕೆ ಓಟ್ಸ್ ಸೇರಿಸಿ. ಫೇಸ್ ವಾಶ್ ಮಾಡಿ ಇದನ್ನು ಚರ್ಮಕ್ಕೆ ಹಚ್ಚಿ. ಇದರಿಂದ ಡೆಡ್ ಸ್ಕಿನ್ (Dead Skin) ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ- White Hair Remedy: ಸಾಸಿವೆ ಎಣ್ಣೆಯಲ್ಲಿ ಈ 3 ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದ ಕಪ್ಪಾಗುತ್ತೆ ಬಿಳಿ ಕೂದಲು
ರೋಸ್ ಮತ್ತು ಗೋಧಿ ಮಾಸ್ಕ್:
2 ಚಮಚ ಗುಲಾಬಿ ಹೂವಿನ ಪುಡಿ, 1 ಚಮಚ ಗೋಧಿ ಹೊಟ್ಟು ಮತ್ತು ಎರಡು ಚಮಚ ಹಾಲನ್ನು ಹಾಕಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್ ನಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಗುಲಾಬಿ ಮತ್ತು ಕಡಲೆ ಹಿಟ್ಟು:
ಒಂದು ಚಮಚ ಕಡಲೆ ಹಿಟ್ಟಿನಲ್ಲಿ ಅರ್ಧ ಚಮಚ ಮೊಸಲು, ಸ್ವಲ್ಪ ಜೇನು ತುಪ್ಪ ಮತ್ತು ಒಂದು ಚಮಚ ಗುಲಾಬಿ ದಳದ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಫ್ರೆಶ್ ವಾಟರ್ ನಿಂದ ಮುಖ ತೊಳೆಯಿರಿ. ಇದು ಚರ್ಮದ ಕಲೆ, ದದ್ದು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.