Vastu Plant: ದೀಪಾವಳಿ ಹಬ್ಬ ಹತ್ತಿರ ಬರುತ್ತದೆ, ಬೆಳಕಿನ ಹಬ್ಬ ತಮ್ಮ ಜೀವನವನ್ನು ಕೂಡ ಬೆಳಕಿನಿಂದ ತುಂಬಿರುವಂತೆ ಮಾಡಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ನೀವು ಕೆಲವು ಟಿಪ್ಸ್‌ ಪಾಲಿಸಬೇಕು. ದೀಪಾವಳಿ ಹಬ್ಬದಂದು ನೀವು ನಿಮ್ಮ ಮನೆಯಲ್ಲಿ ಈ ಗಿಡವನ್ನು ನೆಡುವುದರಿಂದ ಸಕಲ ಸಂಪತ್ತು, ಐಶ್ವರ್ಯ ನಿಮ್ಮದಾಗುತ್ತದೆ. ಇದರಿಂದ ನಿಮಗೆ ಎಂದಿಗೂ ಹನದ ಕೊರತೆಯಾಗಲಿ, ಸಮಸ್ಯೆಯಾಗಲಿ ಎದುರಾಗುವುದಿಲ್ಲ.


COMMERCIAL BREAK
SCROLL TO CONTINUE READING

ಈ ಸಸ್ಯವನ್ನು ವಾಸ್ತು ಶಾಸ್ತ್ರದ ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಯಶಸ್ಸನ್ನು ತರುತ್ತದೆ.ಮನೆಯ ಆಗ್ನೇಯ ದಿಕ್ಕಿನಲ್ಲಿ ಈ ಗಿಡವನ್ನು ಇಡುವುದರಿಂದ ಆರ್ಥಿಕ ಬೆಳವಣಿಗೆ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಇದರ ದುಂಡಗಿನ ಎಲೆಗಳು ಧನಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ. ಇದಲ್ಲದೆ, ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸಲು ಮತ್ತು ಮನೆಯ ಪರಿಸರವನ್ನು ಸ್ವಚ್ಛವಾಗಿ ಮತ್ತು ತಾಜಾವಾಗಿಡಲು ಸಹಾಯ ಮಾಡುತ್ತದೆ. ಅಷ್ಟಕ್ಕೂ ಇಷ್ಟೆಲ್ಲಾ ಉಪಯೋಗಗಲಿರುವ ಈ ಸಸ್ಯ ಯಾವುದು..? ತಿಳಿಯಲು ಮುಂದೆ ಓದಿ...


ಅಷ್ಟಕ್ಕೂ ನಾವು ಇಲ್ಲಿ ಹೇಲುತ್ತಿರುವುದು ಬೇರಾವುದು ಅಲ್ಲ, ಹೊರತಾಗಿ ರಬ್ಬರ್‌ ಗಿಡ. ಈ ರಬ್ಬರ್ ಸಸ್ಯವನ್ನು ಫಿಸ್ಕಸ್ ಎಲಾಸ್ಟಿಕಾ ಎಂದೂ ಕರೆಯುತ್ತಾರೆ. ಇದರ ಎಲೆಗಳು ಹೊಳಪಿನಿಂದ ತುಂಬಿರುತ್ತದೆ ಹಾಗೂ ಇದು ಮೆನಯಲ್ಲಿ ಆಧ್ಯಾತ್ಮೀಕತೆಯನ್ನು ಹೆಚ್ಚಿಸುತ್ತದೆ. ಈ ಗಿಡವನ್ನು ನೀವು ನಿಮ್ಮ ಮನೆಯಲ್ಲಿ ನೆಡುವುದರಿಂದ ನಿಮಗೆ ಹಲವಾರು ಪ್ರಯೋಜನೆಗಳು ಆಗುತ್ತವೆ ಎಂದು ವಾಸ್ತು ಶಾಸತ್ರ ಹೇಳುತ್ತದೆ. ಇದರ ಪ್ರಕಾರ, ನೀವು ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಕ, ಶಾಂತಿ, ನೆಮ್ಮದಿ ಸದಾ ನೆಲಸಿರುತ್ತದೆ.


ಜೋತಿಷ್ಯ ಶಾಸ್ತ್ರದ ಪ್ರಕಾರ ರಬ್ಬರ್‌ ಗಿಡ, ಹನವನ್ನು ಆಕರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ಸರಿಅಯದ ದಿಕ್ಕಿನಲ್ಲಿ ನಡುವುದರಿಂದ ಆರ್ಥಿಕ ಸಮೃದ್ದೀ ದೊರೆಯುತ್ತದೆ. ಇದು ಮನೆಯಲ್ಲಿನ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮನೆಯನ್ನು ಸುಕ ಸಂತೋಷದಿಂದ ತುಂಬಿರುವಂತೆ ಮಾಡುತ್ತದೆ. ರಬ್ಬರ್‌ ಗಿಡ ಕೇವಲ ನಿಮ್ಮನ್ನು ಆರ್ಥಿಕವಾಗಿ ಅಷ್ಟೆ ಅಲ್ಲ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಸಹ ಸಹಾಯ ಮಾಡುತ್ತದೆ.


ರಬ್ಬರ್‌ ಬಿಡ ನಿಮ್ಮ ಮನೆಗೆ ಪ್ರವೇಶಿಸುವ ಅಶುದ್ಧ ಅಥವಾ ಕಲ್ಮಶ ಗಾಳಿಯನ್ನು ಸ್ವಚ್ಛ ಮಾಡಿ ಪರಿಶುದ್ದ ಗಾಳಿಯನ್ನು ಕೊಟ್ಟು ನಿಮಗೆ ಸ್ವಚ್ಛ ಗಾಳಿಯನ್ನು ಉಸಿರಾಡಲು ಸಹಾಯ ಮಾಡುತ್ತದೆ. ಈ ಗಿಡವನ್ನು ನೀವು ಮನೆಯ ಒಂದು ಕುಂಡದಲ್ಲಿ ಹಾಕಿ ನೆಟ್ಟು ಇಡಬಹುದು ಅಥವಾ ಒಂದು ವೇಳೆ ನಿಮ್ಮ ಮನೆಯ ಮುಂದೆ ಕಾಲಿ ಜಾಗವಿದ್ದಲ್ಲಿ ನೀವು ಮಣ್ಣಿಗೆ ಗೊಬ್ಬರ ಹಾಕಿ ಈ ಗಿಡವನ್ನು ನೆಡಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.