Saffron Benefits: ‘ಕೇಸರಿ’ಯ ಬಗ್ಗೆ ನಿಮಗೆ ಬಹುತೇಕ ಸಂಗತಿಗಳು ತಿಳಿದಿರಬೇಕು. ಆಹಾರದಿಂದ ಹಿಡಿದು ಜೋತಿಷ್ಯ ಪರಿಹಾರದವರೆಗೆ ಇದನ್ನು ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೇಸರಿಯ ಕುರಿತು ಕೆಲ ಅದ್ಭುತ ಉಪಾಯಗಳನ್ನು ಹೇಳಲಾಗಿದೆ, ಇದನ್ನು ಬಳಸಿಕೊಂಡು ವ್ಯಕ್ತಿಯು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಬಹುದು. ಒಬ್ಬ ವ್ಯಕ್ತಿಯ ಜಾತಕದಲ್ಲಿ ದೇವ ಗುರು ಗುರುವು ಅಶುಭ ಸ್ಥಾನದಲ್ಲಿದ್ದರೆ, ಕೇಸರಿ ತಿಲಕ ಅನ್ವಯಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಗುರುವು ಇದರಿಂದ ಸಂತುಷ್ಟನಾಗುತ್ತಾನೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತಾನೆ.


COMMERCIAL BREAK
SCROLL TO CONTINUE READING

ಕೇಸರಿ ತಿಲಕ
ಯಾರೊಬ್ಬರ ಜಾತಕದಲ್ಲಿ ಗುರುವಿನ ಸ್ಥಾನ ದುರ್ಬಳನಾಗಿದ್ದರೆ, ಶುಕ್ಲ ಪಕ್ಷದ ಗುರುವಾರದಿಂದ ಇಡೀ ವರ್ಷ ಹಣೆ, ಹೃದಯ ಮತ್ತು ಹೊಕ್ಕುಳಕ್ಕೆ ಕೇಸರಿ ಹಚ್ಚಿ. ಇದನ್ನು ಮಾಡುವುದರಿಂದ, ದೇವಗುರು ಸಂತುಷ್ಟರಾಗುತ್ತಾರೆ ಮತ್ತು ವ್ಯಕ್ತಿಯ ಮೇಲೆ ತನ್ನ ಅಪಾರ ಅನುಗ್ರಹವನ್ನು ನೀಡುವ ಮೂಲಕ ಶುಭ ಫಲಿತಾಂಶಗಳನ್ನು ನೀಡುತ್ತಾನೆ ಎನ್ನಲಾಗುತ್ತದೆ.


ಕೆಟ್ಟ ದೃಷ್ಟಿ
ಒಬ್ಬ ವ್ಯಕ್ತಿಯು ತನ್ನ ಕುಟುಂಬದ ಮೇಲೆ, ಮನೆಯ ಮೇಲೆ ಯಾರದಾದರು ಕೆಟ್ಟ ದೃಷ್ಟಿ ಬಿದ್ದರೆ ಅಥವಾ ಅವನು ವಾಮಾಚಾರಕ್ಕೆ ಒಳಗಾಗಿದ್ದರೆ, ಆ ವ್ಯಕ್ತಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು,ಕೇಸರಿಯ ಜೊತೆಗೆ ಜಾವಿತ್ರಿ ಹಾಗೂ ಗುಗ್ಗುಳವನ್ನು ಬೆರೆಸಿ ಧೂಪ ತಯಾರಿಸಿಕೊಳ್ಳಿ. ಗುರುವಾರದಿಂದ 21 ದಿನಗಳ ಕಾಲ ನಿರಂತರವಾಗಿ ಮನೆಯಲ್ಲಿ ಈ ಧೂಪವನ್ನು ಉರಿಸಿ ಅದರ ಹೊಗೆಯನ್ನು ಮನೆಯಲ್ಲಿ ಹರಡಿ. ಹೀಗೆ ಮಾಡುವುದರಿಂದ ಕೆಟ್ಟ ದೃಷ್ಟಿ ಮತ್ತು ವಾಮಾಚಾರದಿಂದ ಮುಕ್ತಿ ಸಿಗುತ್ತದೆ.


ಶುಕ್ರ ಸಮಸ್ಯೆ
ತಮ್ಮ ಜಾತಕದಲ್ಲಿ ಶುಕ್ರನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು, ಪ್ರತಿದಿನ ಗಂಡನೊಂದಿಗೆ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ಹೊಂದಿದ್ದರೆ, ಅಂತಹ ಮಹಿಳೆಯರು, ಬೇರೊಂದು ಮಹಿಳೆ ಅಥವಾ ಯುವತಿಗೆ ಮೇಕಪ್ ಕಿಟ್ ಜೊತೆಗೆ ಕೇಸರಿಯನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.


ಹಣಕಾಸಿನ ಕೊರತೆ
ಯಾವುದೇ ಶುಭ ದಿನದಂದು, ಏಳು ಬಿಳಿ ಕವಡೆಗಳಿಗೆ ಕೇಸರಿ ಬಣ್ಣ ಬಳೆದು ಅವುಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿಕೊಳ್ಳಿ. ನಂತರ ಶ್ರೀಸೂಕ್ತವನ್ನು ಏಳು ಪಾರಿ ಪಠಿಸಿ. ಇದರ ನಂತರ ಅದನ್ನು ಸುರಕ್ಷಿತವಾಗಿ ಇರಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗುತ್ತದೆ ಮತ್ತು ಹಣದ ಹರಿವು ಹೆಚ್ಚಾಗುತ್ತದೆ.


ಇದನ್ನೂ ಓದಿ-Fengshui Tips: ಫೆಂಗ್‌ಶುಯಿ ಆಮೆಯನ್ನು ಮನೆಯಲ್ಲಿಟ್ಟರೆ ಹಣದ ಮಳೆಯಾಗುತ್ತದೆ..!


ವ್ಯವಹಾರದಲ್ಲಿ ಯಶಸ್ಸು
ವ್ಯಾಪಾರದಲ್ಲಿ ಯಶಸ್ಸಿಗೆ, ವ್ಯಾಪಾರ ಸಂಬಂಧಿತ ದಾಖಲೆಗಳು, ತಿಜೋರಿಯಲ್ಲಿ ಕೇಸರಿ ಶಾಯಿಯನ್ನು ಸಿಂಪಡಿಸಿ. ಇದರಿಂದ ವ್ಯಾಪಾರವು ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ. ಕೇಸರಿ ಶಾಯಿಯಿಂದ ಬಿಳಿ ಬಟ್ಟೆಗೆ ಬಣ್ಣ ಹಾಕಿ. ಈ ಬಟ್ಟೆಯನ್ನು ಮನೆ ಅಥವಾ ಅಂಗಡಿಯ ಕಮಾನುಗಳಲ್ಲಿ ಹರಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ.


ಇದನ್ನೂ ಓದಿ-Astrology : ಈ ಕೈಯಲ್ಲಿ ತುರಿಕೆ ಬಿಟ್ಟರೆ ಧನಾಗಮನ ಆಗುತ್ತದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.