Yellow teeth Remedies : ಬಿಳಿ ಮತ್ತು ಹೊಳೆಯುವ ಹಲ್ಲುಗಳುನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಆದರೆ, ಹಲ್ಲುಗಳು ಹಳದಿ ಬಣಕ್ಕೆ ತಿರುಗಿದರೆ ನೋಡಲು ಬಹಳ ಕೆಟ್ಟದಾಗಿರುತ್ತದೆ. ಮಾತ್ರವಲ್ಲ ಇದು ನಮ್ಮ  ಆತ್ಮವಿಶ್ವಾಸವನ್ನು ಕೂಡಾ ಕುಗ್ಗಿಸುತ್ತದೆ. ಹಲ್ಲುಗಳ ಹೊಳಪನ್ನು ಹೆಚ್ಚಿಸಲು, ಗಂಟೆಗಟ್ಟಲೆ ಹಲ್ಲುಜ್ಜುವ ಅಗತ್ಯವಿಲ್ಲ. ಬದಲಿಗೆ ಕೆಲವು ಸುಲಭವಾದ ವಿಧಾನಗಳನ್ನು ಅಳವಡಿಸಿಕೊಂಡು ನಿಮ್ಮ ಹಲ್ಲುಗಳ ಹೊಳಪನ್ನು ಹೆಚ್ಚಿಸಬಹುದು. ದೀರ್ಘಕಾಲದವರೆಗೆ ಬ್ರಷ್‌ನಿಂದ ಹಲ್ಲುಗಳನ್ನು ಉಜ್ಜುತ್ತಿದ್ದರೆ, ಅದು ನಿಮ್ಮ ಹಲ್ಲುಗಳಿಗೆ ಹಾನಿ ಉಂಟು ಮಾಡುತ್ತದೆ. ನಾವು ಇಲ್ಲಿ ಹೇಳುವ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ಅನುಸರಿಸಿಕೊಂಡರೆ ಹಲ್ಲುಗಳ ಹೊಳಪನ್ನು ದ್ವಿಗುಣಗೊಳಿಸಬಹುದು.


COMMERCIAL BREAK
SCROLL TO CONTINUE READING

ಒಂದು ಚಿಟಿಕೆ ಉಪ್ಪು ಪರಿಣಾಮಕಾರಿ :
ಹಲ್ಲುಗಳ ಹೊಳಪನ್ನು ಹೆಚ್ಚಿಸಲು ಉಪ್ಪನ್ನು ಬಳಸಬಹುದು. ಉಪ್ಪಿನಲ್ಲಿರುವ ಗುಣಲಕ್ಷಣಗಳು ಹಲ್ಲುಗಳ ಕುಳಿಗಳನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಹಲ್ಲುಗಳ ಮೇಲೆ ಸಂಗ್ರಹವಾಗಿರುವ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ. ಉಪ್ಪನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಹಲ್ಲಿನ ಮೇಲೆ ಹಚ್ಚಿ ತಿಕ್ಕುವುದರಿಂದ ಕೆಲವೇ ಸೆಕೆಂಡುಗಳಲ್ಲಿ ಹಲ್ಲಿನ ಮೇಲಿನ ಕಲೆ ಮಾಯವಾಗುತ್ತದೆ.  


ಇದನ್ನೂ ಓದಿ : ಕೋಮಲ, ಸುಂದರ, ಕಾಂತಿಯುತ ತ್ವಚೆ ನಿಮ್ಮದಾಗಿಸಲು ಬೀಟ್ರೂಟ್ ಅನ್ನು ಈ ರೀತಿ ಬಳಸಿ


ಹಲ್ಲುಗಳ ಹೊಳಪು ಹೆಚ್ಚಿಸಲು ಸಾಸಿವೆ ಎಣ್ಣೆ : 
ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಹಲ್ಲುಗಳ ಹೊಳಪನ್ನು ಇನ್ನಷ್ಟು ಹೆಚ್ಚಿಸಬಹುದು. ಇದು ಹಲ್ಲುಗಳಲ್ಲಿ ಅಡಗಿ ಕುಳಿತಿರುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಹಲ್ಲುಗಳ ಮೇಲಿನ ಪ್ಲೇಕ್ ಪದರಗಳನ್ನು ತೆಗೆದು ಹಾಕುತ್ತದೆ.  


ಹಲ್ಲುಗಳ ಹೊಳಪನ್ನು ಹೆಚ್ಚಿಸಲು ಉಪ್ಪು ಮತ್ತು ಸಾಸಿವೆ ಎಣ್ಣೆಯ ಬಳಕೆ ಹೇಗೆ? :
ಹಲ್ಲುಗಳ ಸೌಂದರ್ಯವನ್ನು ಹೆಚ್ಚಿಸಲು, ಸುಮಾರು ಅರ್ಧ ಚಮಚ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಚಿಟಿಕೆ ಉಪ್ಪನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ನಿಮ್ಮ ಬೆರಳುಗಳ ಸಹಾಯದಿಂದ ಹಲ್ಲುಗಳ ಮೇಲೆ ಹಚ್ಚಿ ಮತ್ತು ಸುಮಾರು 20 ರಿಂದ 30 ಸೆಕೆಂಡುಗಳ ಕಾಲ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆಯಲು ಆರಂಭವಾಗುತ್ತದೆ.


ಇದನ್ನೂ ಓದಿ : Weight Loss Remedy: ಕೇವಲ 15 ದಿನಗಳಲ್ಲಿ ಸೊಂಟಕ್ಕೆ ನಾರ್ಮಲ್ ಆಕಾರ ನೀಡಬೇಕೆ? ಈ ದೇಸೀ ಉಪಾಯ ಟ್ರೈ ಮಾಡಿ ನೋಡಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.