ಶನಿ ಸಾಡೇಸಾತಿ- ಧೈಯಾ ಪ್ರಭಾವಗಳಿಂದ ಸುಲಭ ಪರಿಹಾರ ನೀಡುತ್ತೆ ಶ್ರೀಗಂಧ
Remedies For Sade Sati And Dhaiya: ಶನಿ ಕಾಟ, ಸಾಡೇಸಾತಿ ಶನಿ ಪ್ರಭಾವ ಎಂದರೆ ಸಾಕು ಯಾರಾದರೂ ಕನಸಿನಲ್ಲಿಯೂ ಕೂಡ ಬೆಚ್ಚಿ ಬೀಳ್ತಾರೆ. ಆದರೆ, ಶ್ರೀಗಂಧದ ಕೆಲವು ಪರಿಹಾರಗಳು ನಿಮಗೆ ಶನಿ ಸಾಡೇಸಾತಿ- ಧೈಯಾ ಪ್ರಭಾವಗಳಿಂದ ಮುಕ್ತಿ ನೀಡಬಲ್ಲದು.
Remedies For Sade Sati And Dhaiya: ಕರ್ಮಗಳಿಗೆ ತಕ್ಕ ಫಲ ನೀಡುವ ನ್ಯಾಯದ ದೇವರು ಎಂದೇ ಪರಿಗಣಿಸಲ್ಪಡುವ ಶನಿ ಹೆಸರು ಕೇಳಿದರೆ ಸಾಕು ಕೆಲವರ ಮನದಲ್ಲಿ ನಡುಕ ಆರಂಭವಾಗುತ್ತದೆ. ಅಂತಹದರಲ್ಲಿ ಜಾತಕದಲ್ಲಿ ಶನಿ ಸಾಡೇಸಾತಿ-ಧೈಯಾ ಪ್ರಭಾವವನ್ನು ಹೊಂದಿರುವ ವ್ಯಕ್ತಿ ಕನಸಿನಲ್ಲಿಯೂ ಬೆಚ್ಚಿ ಬೀಳುವುದರಲ್ಲಿ ಅಚ್ಚರಿಯೇ ಇಲ್ಲ. ಆದರೆ, ಶ್ರೀಗಂಧವು ಶನಿಯ ಕಾಟದಿಂದ ಸುಲಭವಾಗಿ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ?
ವೈದಿಕ ಜ್ಯೋತಿಷ್ಯದಲ್ಲಿ, ಶನಿ ಕಾಟದಿಂದ ಮುಕ್ತಿ ಪಡೆಯಲು ಹಾಗೂ ಶನಿ ಸಾಡೇಸಾತಿ- ಧೈಯಾ ಪ್ರಭಾವಗಳನ್ನು ತಪ್ಪಿಸಲು ಶ್ರೀಗಂಧದ ಪರಿಹಾರಗಳ ಬಗ್ಗೆ ಸಲಹೆ ನೀಡಲಾಗಿದೆ. ಕೆಂಪು, ಹಳದಿ ಮತ್ತು ಬಿಳಿ ಶ್ರೀಗಂಧಗಳ ಸಹಾಯದಿಂದ ಸುಲಭ ಪರಿಹಾರವನ್ನು ಪಡೆಯಬಹುದು. ಶನಿ ದೇವಾನು ಶ್ರೀಗಂಧದ ಪರಿಹಾರಗಳಿಂದ ಬಹಳ ಬೇಗ ಸಂತುಷ್ಟನಾಗುತ್ತಾನೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Shani Gochar 2023: ಈ ರಾಶಿಗಳಿಗೆ ಸಾಡೇಸಾತಿಯಿಂದ ಮುಕ್ತಿ, ಒಳ್ಳೆಯ ದಿನಗಳು ಆರಂಭ!
ಶನಿಯ ಸಾಡೇ ಸತಿ ಮತ್ತು ಧೈಯಾ ಪ್ರಭಾವವನ್ನು ತಪ್ಪಿಸಲು ಕೆಂಪು, ಹಳದಿ ಮತ್ತು ಬಿಳಿ ಶ್ರೀಗಂಧದ ಪರಿಹಾರಗಳು:
ಜ್ಯೋತಿಷ್ಯದ ಪ್ರಕಾರ, ಶನಿಯ ಸಾಡೇಸಾತಿ ಮತ್ತು ಧೈಯಾ ಪ್ರಭಾವವನ್ನು ತಪ್ಪಿಸಲು 40 ದಿನಗಳ ಕಾಲ ನಿರಂತರವಾಗಿ ಸ್ನಾನದ ನೀರಿನಲ್ಲಿ ಶ್ರೀಗಂಧದ ಬೇರನ್ನು ಹಾಕಿ ಸ್ನಾನ ಮಾಡಬೇಕು.
* ಪ್ರತಿ ಶನಿವಾರದಂದು ಕೆಂಪು ಬಣ್ಣದ ಶ್ರೀಗಂಧದ ತಿಲಕವನ್ನು ಅನ್ವಯಿಸಿ. ಇದಲ್ಲದೆ ಶನಿ ದೇವರಿಗೆ ಕೆಂಪು ಚಂದನವನ್ನು ಅರ್ಪಿಸಬಹುದು. ಇದು ಶನಿಯ ಕೋಪವನ್ನು ಶಮನಗೊಳಿಸುತ್ತದೆ.
* ಶನಿದೇವನನ್ನು ಮೆಚ್ಚಿಸಲು ಪ್ರತಿ ಶನಿವಾರ ಸೂರ್ಯಾಸ್ತದ ನಂತರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದು ಶುಭ. ಇದರೊಂದಿಗೆ ಶ್ರೀಗಂಧದ ಮಾಲೆಯೊಂದಿಗೆ ಶನಿದೇವನ "ಓಂ ಶಂ ಶನೈಶ್ಚರಾಯ ನಮಃ" ಎಂಬ ಮಂತ್ರವನ್ನು ಜಪಿಸಿ.
ಇದನ್ನೂ ಓದಿ- Shani Gochar : ಈ ರಾಶಿಯವರಿಗೆ ಸಾಡೇ ಸತಿ ಶುರು, ಶನಿದೇವನ ಕೃಪೆಗೆ ಈ ರತ್ನ ಧರಿಸಿ
ವಾಸ್ತವವಾಗಿ, ಕರ್ಮಫಲದಾತ ಶನಿಯು ನಾವು ಮಾಡುವ ಕರ್ಮಗಳಿಗೆ ತಕ್ಕ ಫಲ ನೀಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಮಾಡುವ ಒಳ್ಳೆಯ ಕಾರ್ಯಗಳಿಂದ ಶನಿ ದೇವನನ್ನು ಮೆಚ್ಚಿಸಬಹುದು. ದಾನ-ಧರ್ಮಗಳಿಂದ ಶನಿದೇವ ಬೇಗನೇ ಒಲಿಯುತ್ತಾನೆ. ಇದಲ್ಲದೆ, ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡುವುದು ಶನಿದೇವನನ್ನು ಮೆಚ್ಚಿಸಲು ಇರುವ ಸುಲಭ ಮಾರ್ಗಗಳಾಗಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.