ಸರ್ವಾರ್ಥ ಸಿದ್ಧಿಗೆ ಸಂಕಷ್ಟ ಚತುರ್ಥಿಯಂದು ಈ ರೀತಿ ಪೂಜೆ ಮಾಡಿ
ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯು ಶುಕ್ರವಾರ, ಜೂನ್ 17 ರಂದು ಬೆಳಿಗ್ಗೆ 06:10 ಕ್ಕೆ ಪ್ರಾರಂಭವಾಗಿ ಜೂನ್ 18 ರ ಶನಿವಾರದಂದು 02:59 ಕ್ಕೆ ಕೊನೆಗೊಳ್ಳುತ್ತದೆ.
ಗಣೇಶನ ಆಶೀರ್ವಾದ ಪಡೆಯಲು ಸಂಕಷ್ಟಿ ಚತುರ್ಥಿ ಅತ್ಯುತ್ತಮ ದಿನವಾಗಿದೆ. ನಾಳೆ ಅಂದರೆ ಜೂನ್ 17 ರಂದು ಸಂಕಷ್ಟ ಚತುರ್ಥಿ ಉಪವಾಸ ಆಚರಿಸಲಾಗುವುದು. ಜೂನ್ 17 ರಂದು ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥಿ. ವಿಸ್ಮಯಕಾರಿ ಸಂಗತಿ ಎಂದರೆ ಈ ದಿನ ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದೆ. ಈ ಯೋಗದಲ್ಲಿ ಮಾಡುವ ಪೂಜೆ ಮತ್ತು ಶುಭ ಕಾರ್ಯವು ಅನೇಕ ಫಲಗಳನ್ನು ನೀಡುತ್ತದೆ. ಭಗವಾನ್ ಗಣೇಶನು ಪ್ರಸನ್ನನಾಗುತ್ತಾನೆ. ಜೊತೆಗೆ ಅವನಿಗೆ ಯಶಸ್ಸು, ಸಂತೋಷ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ. ಈ ಸಂಕಷ್ಟ ಚತುರ್ಥಿಯಂದು ಪೂಜೆ ಮಾಡಲು ಶುಭ ಸಮಯ ಮತ್ತು ಚಂದ್ರೋದಯ ಸಮಯ ಯಾವುದು ಎಂದು ತಿಳಿಯಿರಿ.
ಇದನ್ನು ಓದಿ: OPPO: ನೀರಿನಲ್ಲಿಯೂ ಹಾಳಾಗಲ್ಲ ಈ ಸ್ಮಾರ್ಟ್‌ಫೋನ್- ಇಲ್ಲಿದೆ ಇದರ ವೈಶಿಷ್ಟ್ಯಗಳು!
ಸಂಕಷ್ಟ ಚತುರ್ಥಿ ಮುಹೂರ್ತ ಮತ್ತು ಚಂದ್ರೋದಯ ಸಮಯಗಳು:
ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ (ಶುಕ್ರವಾರ) ಜೂನ್ 17 ರಂದು ಬೆಳಿಗ್ಗೆ 06:10 ಕ್ಕೆ ಪ್ರಾರಂಭವಾಗಿ ಜೂನ್ 18 ರ ಶನಿವಾರದಂದು 02:59 ಕ್ಕೆ ಕೊನೆಗೊಳ್ಳುತ್ತದೆ. ಮತ್ತೊಂದೆಡೆ, ಅಭಿಜಿತ್ ಮುಹೂರ್ತವು ಜೂನ್ 17 ರಂದು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:25 ರವರೆಗೆ ಇರುತ್ತದೆ. ಸಂಕಷ್ಟ ಚತುರ್ಥಿಯ ಪೂಜೆಯು ಚಂದ್ರನಿಗೆ ಅರ್ಧ್ಯಾವನ್ನು ಅರ್ಪಿಸದೆ ಪೂರ್ಣವಾಗುವುದಿಲ್ಲ. ಈ ಸಂಕಷ್ಟ ಚತುರ್ಥಿಯಂದು ಚಂದ್ರೋದಯ ಸಮಯ ರಾತ್ರಿ 10:03 ಆಗಿರುತ್ತದೆ.
ಇದನ್ನು ಓದಿ: ಇವರು ರಾಷ್ಟ್ರಪತಿಯಾದರೆ ದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತದೆ : ಬಿಜೆಪಿ ಸಂಸದ
ಸಂಕಷ್ಟಿ ಚತುರ್ಥಿ ಪೂಜೆಯನ್ನು ಹೇಗೆ ಮಾಡಬೇಕು?
ಸಂಕಷ್ಟ ಚತುರ್ಥಿಯ ದಿನ ಮುಂಜಾನೆಯೇ ಸ್ನಾನ ಮಾಡಿ ಸಂಕಷ್ಟ ಚತುರ್ಥಿ ಉಪವಾಸ ಆಚರಿಸುವ ಪ್ರತಿಜ್ಞೆ ಮಾಡಿ ಪೂಜೆ ಮಾಡಬೇಕು. ನಂತರ ಶುಭ ಮುಹೂರ್ತದಲ್ಲಿ ಗಣೇಶನಿಗೆ ಅಭಿಷೇಕವನ್ನು ಮಾಡಿ. ಅವರಿಗೆ ಶ್ರೀಗಂಧ, ಮೋದಕ, ಹಣ್ಣುಗಳು, ಹೂವುಗಳು, ವಸ್ತ್ರಗಳು, ಧೂಪ, ದೀಪ, ಅಕ್ಷತೆ, ದೂರ್ವಾ ಇತ್ಯಾದಿಗಳನ್ನು ಅರ್ಪಿಸಿ. ಈ ದಿನದಂದು ಗಣೇಶ ಚಾಲೀಸವನ್ನು ಓದಿ ಮತ್ತು ಸಂಕಷ್ಟ ಚತುರ್ಥಿ ಉಪವಾಸದ ಕಥೆಯನ್ನು ಕೇಳಿ. ಕೊನೆಯಲ್ಲಿ, ಗಣೇಶನಿಗೆ ಆರತಿ ಮಾಡಿ. ರಾತ್ರಿಯಲ್ಲಿ ಚಂದ್ರನು ಉದಯಿಸಿದಾಗ, ಚಂದ್ರನಿಗೆ ಅರ್ಧ್ಯಾವನ್ನು ಅರ್ಪಿಸಿ ನಂತರ ಉಪವಾಸವನ್ನು ಕೊನೆಗೊಳಿಸಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.