Saturn Retrograde 2022: ಶನಿ ತನ್ನ ವಕ್ರ ನಡೆಯ ಅವಧಿಯಲ್ಲಿ ಹಲವು ರಾಶಿಗಳಿಗೆ ಕಷ್ಟ ಕೊಡುತ್ತಾನೆ. ಶನಿಯ ಈ ಹಿಮ್ಮುಖ ಚಲನೆ ಶನಿ ದೆಸೆಯಿಂದ ಪೀಡಿತ ಜನರಿಗೆ ಸಾಕಷ್ಟು ಕಷ್ಟಗಳನ್ನು ತರುತ್ತದೆ. ಎಲ್ಲಾ ಒಂಬತ್ತು ಗ್ರಹಗಳಲ್ಲಿ ಶನಿ ತುಂಬಾ ನಿಧಾನಗತಿಯಲ್ಲಿ ಚಲಿಸುತ್ತಾನೆ. ಇದೇ ಕಾರಣದಿಂದ ಶನಿ ಎರಡೂವರೆ ವರ್ಷಗಳಲ್ಲಿ ಒಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ವರ್ತಮಾನದಲ್ಲಿ ಶನಿ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಏಪ್ರಿಲ್ 29ರಂದು ಶನಿಯ ಈ ರಾಶಿ ಪರಿವರ್ತನೆ ಸಂಭವಿಸಿದೆ. ಆದರೆ, ಇದೀಗ ಮತ್ತೊಮ್ಮೆ ಜೂನ್ 5, 2022ರಂದು ಶನಿ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಶನಿ ಒಟ್ಟು 141 ದಿನಗಳು ಅಂದರೆ, ಅಕ್ಟೋಬರ್ 23, 2022ರವರೆಗೆ ಹಿಮ್ಮುಖ ಚಲನೆಯ ಅವಸ್ಥೆಯಲ್ಲಿ ಇರಲಿದ್ದಾನೆ. ಶನಿಯ ಈ ವಕ್ರನಡೆಯ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಬೀಳಲಿದೆ. ಯಾವ ರಾಶಿಗಳಿಗೆ ಹೆಚ್ಚು ಕಷ್ಟ ಕಾಲ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮೇಷ ರಾಶಿ - ಶನಿಯ ವಕ್ರ ನಡೆ ನಿಮ್ಮ ಭಾಗ್ಯದ ಮೇಲೆ ಪ್ರಭಾವ ಬೀರಲಿದೆ. ಪ್ರಸ್ತುತ ರಾಹು ನಿಮ್ಮ ರಾಶಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಶನಿ ವಕ್ರಿಯಾಗುವುದರಿಂದ ಅಶುಭ ಫಲಗಳು ಹೆಚ್ಚಾಗಲಿವೆ. ಧನ ಹಾನಿಯ ಸಾಧ್ಯತೆಗಳಿವೆ. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಿ. ವೈವಾಹಿಕ ಜೀವನದಲ್ಲಿ ಅಡಚಣೆಗಳು ಎದುರಾಗಲಿವೆ.


ಕರ್ಕ ರಾಶಿ - ಪ್ರಸ್ತುತ ಕರ್ಕ ರಾಶಿಯ ಜಾತಕದವರ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿದೆ. ಈ ಅವಧಿಯಲ್ಲಿ ಕರ್ಕರಾಶಿಯ ಜನರು ಎಚ್ಚರಿಕೆಯಿಂದ ಇರಬೇಕಾಗಲಿದೆ. ಈ ಅವಧಿಯಲ್ಲಿ ಕೂಡಿಬರುವ ನಿಮ್ಮ ಕೆಲಸ-ಕಾರ್ಯಗಳು ಬಿಗಡಾಯಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಸಾಧ್ಯತೆ. ವಾಹನ ಉಪಯೋಗದಲ್ಲಿ ವಿಶೇಷ ಎಚ್ಚರಿಕೆಯನ್ನು ವಹಿಸಿ.


ಮಕರ ರಾಶಿ - ಮಕರ ರಾಶಿಯ ಜಾತಕದವರ ಮೇಲೆ ಶನಿಯ ಸಾಡೇಸಾತಿ ನಡೆಯುತ್ತಿದೆ. ಈ ಅವಧಿಯಲ್ಲಿ ಮಾತಿನ ಮೇಲೆ ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ವಿಶೇಷ ಕಾಳಜಿವಹಿಸಿ. ಶನಿ ವಕ್ರಿ ನಿಮ್ಮ ವೃತ್ತಿಜೀವನದ ಕೆಟ್ಟ ಪರಿಣಾಮಗಳನ್ನು ಬೀರಬಹುದು. ಪರಿಶ್ರಮದಲ್ಲಿ ಕೊರತೆ ಕಾಣಿಸಿಕೊಳ್ಳಲಿದೆ. ಮೇಲಾಧಿಕಾರಿಗಳ ಜೊತೆಗೆ ನಿಮ್ಮ ಸಂಬಂಧಗಳು ಬಿಗಡಾಯಿಸುವ ಸಾಧ್ಯತೆ ಇದೆ. ಕೋಪದ ಮೇಲೆ ನಿಯಂತ್ರಣವಿರಲಿ.


ಇದನ್ನೂ ಓದಿ-Vastu Tips: ದುಡ್ಡು ಎಣಿಕೆ ಮಾಡುವಾಗ ನೀವು ಈ ತಪ್ಪು ಮಾಡ್ತಿರಾ, ಎಚ್ಚರ! ದಾರಿದ್ರ್ಯಕ್ಕೆ ಕಾರಣವಾಗುತ್ತದೆ

ಕುಂಭ ರಾಶಿ - ಪ್ರಸ್ತುತ ಶನಿ ನಿಮ್ಮ ರಾಶಿಯಲ್ಲಿಯೇ ಗೋಚರಿಸುತ್ತಿದ್ದಾನೆ. ಏಪ್ರಿಲ್ 29, 2022ರಂದು ನಿಮ್ಮ ರಾಶಿಗೆ ಶನಿಯ ಆಗಮನವಾಗಿದೆ. ಹೀಗಾಗಿ ನಿಮ್ಮ ರಾಶಿಯ ಮೂಲಕವೇ ಶನಿಯ ವಕ್ರನಡೆ ಆರಂಭಗೊಳ್ಳಲಿದೆ. ವಾಗ್ವಾದಗಳಿಂದ ದೂರವಿರಿ. ಸಾಕಷ್ಟು ಯೋಚನೆಯ ಬಳಿಕವೇ ಹೂಡಿಕೆಯನ್ನು ಮಾಡಿ. ವಿವಾಹ ಕಾರ್ಯಗಳಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-Shukra Rashi Parivartan: ಇಂದಿನಿಂದ 27 ದಿನಗಳವರೆಗೆ ಈ ರಾಶಿಯವರಿಗೆ ಶುಕ್ರನ ಕೃಪೆ, ಹಣದ ಸುರಿಮಳೆ


(Disclaimer- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.