Shani Effect: ಅಕ್ಟೋಬರ್ 23ರಂದು ಶನಿ ತನ್ನ ನೇರ ನಡೆ ಆರಂಭಿಸಲಿದ್ದಾನೆ. ಮಕರ ರಾಶಿಯಲ್ಲಿ ಆತ ತನ್ನ ಈ ನೇರ ನಡೆಯನ್ನು ಅನುಸರಿಸಲಿದ್ದಾನೆ. ಶನಿಯ ಈ ನಡೆಯ ಕಾರಣ ಕೆಲ ರಾಶಿಗಳ ಜನರು ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನಿಗೆ ವಿಶೇಷ ಸ್ಥಾನಮಾನ ಪ್ರಾಪ್ತಿ ಇದೆ. ಶನಿದೇವ ಅಶುಭನಾಗುವುದರಿಂದ ವ್ಯಕ್ತಿ ಹಲವು ರೀತಿಯ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಶನಿ ವಕ್ರನಡೆಯಿಂದ ಯಾವ ರಾಶಿಗಳ ಜನರು ಎಚ್ಚರಿಕೆವಹಿಸಬೇಕಾಗಬಹುದು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಮಕರ ರಾಶಿ- ತಾಳ್ಮೆಯ ಕೊರತೆ ಕಾಡಲಿದೆ. ಸಂಯಮದಿಂದ ಇರಿ. ಶೈಕ್ಷಣಿಕ ಕೆಲಸ-ಕಾರ್ಯಗಳಲ್ಲಿ ಅಡಚಣೆ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮ ಹೆಚ್ಚಾಗಲಿದೆ. ಆದಾಯದಲ್ಲಿ ಅಡಚಣೆ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ.

ಕುಂಭ ರಾಶಿ- ಆತ್ಮವಿಶ್ವಾಸ ಕಡಿಮೆಯಾಗಲಿದೆ, ಶಾಂತಿಯಿಂದಿರಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಂಗ್ರಹವಾದ ಸಂಪತ್ತು ಕಡಿಮೆಯಾಗಬಹುದು. ಬಟ್ಟೆಯ ಮೇಲಿನ ಖರ್ಚು ಹೆಚ್ಚಾಗಲಿದೆ. ಕಠಿಣ ಪರಿಶ್ರಮ ಇರಲಿದೆ. ಖರ್ಚು ಹೆಚ್ಚಾಗಲಿದೆ.

ಧನು ರಾಶಿ- ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಆತ್ಮವಿಶ್ವಾಸ ಕಡಿಮೆಯಾಗಲಿದೆ. ಅತಿಯಾದ ಕೋಪವನ್ನು ತಪ್ಪಿಸಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಸ್ಥಳಾಂತರದ ಸಾಧ್ಯತೆ ಇದೆ.

ಮಿಥುನ ರಾಶಿ- ಮನಸ್ಸಿನಲ್ಲಿ ಹತಾಶೆ ಮತ್ತು ಅತೃಪ್ತಿಯ ಭಾವನೆ ಇರಲಿದೆ. ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಖರ್ಚು ಹೆಚ್ಚಾಗಲಿದೆ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಬದಲಾವಣೆಯೂ ಸಾಧ್ಯ.


ಇದನ್ನೂ ಓದಿ-ಡೇಟಿಂಗ್ ಮಾಡುವ ಮುನ್ನ ಹುಡುಗನಲ್ಲಿ ಗಮನಿಸಬೇಕಾದ 10 ಪ್ರಮುಖ ವಿಷಯಗಳೇನು ಗೊತ್ತೇ?

ತುಲಾ ರಾಶಿ- ಮನಸ್ಸು ವಿಚಲಿತವಾಗಿರಲಿದೆ. ಮನಸ್ಸಿನ ಶಾಂತಿಗಾಗಿ ಶ್ರಮಿಸಿ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸದಲ್ಲಿ ಅಡಚಣೆಗಳು ಎದುರಾಗಬಹುದು. ದೈನಂದಿನ ಜೀವನವು ಅಸ್ತವ್ಯಸ್ತವಗಿರಲಿದೆ. ಉತ್ತಮ ಸ್ಥಿತಿಯಲ್ಲಿರಲು ಪ್ರಯತ್ನಿಸಿ.


ಇದನ್ನೂ ಓದಿ-Dhanatrayodashi 2022 ದಿನದಿಂದ ಈ ನಾಲ್ಕು ರಾಶಿಗಳ ಭಾಗ್ಯೋದಯ ಪಕ್ಕಾ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿ