Scorpion at Home : ರಜೆ, ಇಲ್ಲವೆ ಯಾವುದಾದ್ರೂ ಹಬ್ಬ ಬಂದ್ರೆ, ಜನರು ಮನೆ ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಮನೆಗಳಲ್ಲಿ ಶುಚಿಗೊಳಿಸುವ ಸಮಯದಲ್ಲಿ, ಟೇಬಲ್‌, ಖುರ್ಚಿ ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಈ ವೇಳೆ ಅವುಗಳ ಕೆಳಗೆ ಅಡಗಿ ಕುಳಿರುತವ ಕೀಟಗಳು ಹೊರ ಬರುತ್ತವೆ. ಹಾಗೇಯೆ ಮನೆ ಕ್ಲೀನಿಂಗ್‌ ವೇಳೆ ಚೇಳು ಕಂಡರೆ ಪ್ಯಾನಿಕ್ ಆಗಬೇಡಿ, ಅವುಗಳನ್ನು ಕೊಲ್ಲಬೇಡಿ, ಏಕೆಂದರೆ ಅವುಗಳು ಒಳ್ಳೆಯ ಸಂಕೇತವೆಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಹೌದು.. ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಘಳಿಗೆ, ವಸ್ತು, ಪ್ರಾಣಿ, ಪಕ್ಷಿಗಳಿಗೆ ತನ್ನದೆಯಾದ ಮಹತ್ವವಿದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಮನೆಯಲ್ಲಿ ಕಾಣಿಸಿಕೊಳ್ಳುವ ಕೆಲವೊಂದಿಷ್ಟು ಪ್ರಾಣಿಗಳು ಸಾಯಿಸದಂತೆ ಹೇಳುತ್ತಾರೆ. ಅಲ್ಲದೆ, ಅವುಗಳು ಸುರಕ್ಷಿತವಾಗಿ ಮನೆಯಿಂದ ಹೊರಗೆ ಬಿಟ್ಟು ಬರುತ್ತವೆ ತಿಳಿಸುತ್ತಾರೆ. ಅವುಗಳ ಪೈಕಿ ಚೇಳು ಕೂಡಾ ಒಂದು. ಮನೆಯಲ್ಲಿ ಚೇಳು ಕಂಡರೆ ಅದನ್ನು ಶುಭ ಸಂಕೇತ ಅಂತ ಪರಿಗಣಿಸಲಾಗುತ್ತದೆ.


ಇದನ್ನೂ ಓದಿ: Auspicious Time Of Day: ಆರೋಗ್ಯ ಮತ್ತು ಧಾರ್ಮಿಕ ದೃಷ್ಟಿಯಿಂದ ದಿನದ ಯಾವ ಸಮಯ ಅತ್ಯುತ್ತಮ?


ಶುಭ ಸೂಚನೆ : ಮನೆಯನ್ನು ಶುಚಿಗೊಳಿಸುವಾಗ ಚೇಳು ಕಾಣಿಸಿಕೊಂಡರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಶೀಘ್ರದಲ್ಲೇ ಹಣವನ್ನು ಪಡೆಯುತ್ತೀರಿ ಅಂತ. ಮನೆಯಲ್ಲಿ ಚೇಳುಗಳ ವಾಸಿಸುವುದರಿಂದ ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಇದರರ್ಥ ನಿಮ್ಮ ಮೇಲೆ ಲಕ್ಷ್ಮಿದೇವಿಯ  ಅನುಗ್ರಹ ಇದೇ ಅಂತ. 


ಹಾನಿ ಮಾಡಬೇಡಿ : ಗೋಡೆಯನ್ನು ಸ್ವಚ್ಛಗೊಳಿಸುವಾಗ ಅಥವಾ ಮೂಲೆಯಲ್ಲಿ ಚೇಳು ಕಂಡರೆ, ಅದನ್ನು ನಿಧಾನವಾಗಿ ಹಿಡಿದು ಮನೆಯಿಂದ ಹೊರಗೆ ಹಾಕಿ. ಏಕೆಂದರೆ ಚೇಳು ಲಾಭದ ಲಕ್ಷಣ. ಮನೆಯಲ್ಲಿ ಚೇಳುಗಳ ಕಾಣಿಸಿಕೊಂಡರೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂದರೆ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರುತ್ತಾಳೆ ಅಂತ. ಚೇಳು ಕಂಡರೆ ಸುರಕ್ಷಿತ ಸ್ಥಳದಲ್ಲಿ ಬಿಡಿ, ಕೊಲ್ಲಬೇಡಿ.


ಇದನ್ನೂ ಓದಿ: ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದಾ.. ಇಲ್ಲವೇ ಕೆಟ್ಟದ್ದಾ..? ಶಾಸ್ತ್ರ ಏನ್‌ ಹೇಳುತ್ತೆ ಗೊತ್ತಾ..!


ವ್ಯಾಪಾರದಲ್ಲಿ ಲಾಭ : ಮನೆಯಲ್ಲಿ ಹಳದಿ ಬಣ್ಣದ ಚೇಳುಗಳನ್ನು ನೋಡುವುದು ಒಳ್ಳೆಯ ಸಂಕೇತ ಎಂದು ಹಿರಿಯರು ಹೇಳುತ್ತಾರೆ. ಚೇಳು ಕಾಣಿಸಿಕೊಂಡ ನಂತರ, ಮುಂಬರುವ ದಿನಗಳಲ್ಲಿ ವ್ಯಾಪಾರ, ವ್ಯವಹಾರದಲ್ಲಿ ಲಾಭ ಆಗಬಹುದು ಎಂದು ಹೇಳಲಾಗುತ್ತದೆ. ಉದ್ಯೋಗಸ್ಥರಿಗೆ ಉತ್ತಮ ಬಡ್ತಿ ದೊರೆಯಲಿದೆ. ಮನೆಯ ಆರ್ಥಿಕ ಕೊರತೆ ದೂರವಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.