Brahmi murtha Timings : ಧಾರ್ಮಿಕ ಗ್ರಂಥಗಳ ಪ್ರಕಾರ ಕನಸುಗಳು ಸಹ ಮುನಷ್ಯರ ಭವಿಷ್ಯವನ್ನು ಸೂಚುಸುತ್ತವೆ ಎಂದು ಹೇಳಲಾಗುತ್ತದೆ. ಕನಸು ಒಳ್ಳೆಯ ಮತ್ತು ಕೆಟ್ಟ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ. ಸ್ವಪ್ನ ಶಾಸ್ತ್ರವು ಕನಸುಗಳ ಶುಭ ಮತ್ತು ಅಶುಭ ಫಲಿತಾಂಶಗಳ ಬಗ್ಗೆ ಹೇಳುತ್ತದೆ. ಹಾಗಿದ್ರೆ ಎಂತಹ ಕನಸುಗಳು ನಮಗೆ ಒಳ್ಳೆಯವು ಮತ್ತು ಕೆಟ್ಟವು ಎಂದು ಈಗ ತಿಳಿಯೋಣ..


COMMERCIAL BREAK
SCROLL TO CONTINUE READING

ಬ್ರಾಹ್ಮ ಮುಹೂರ್ತದಲ್ಲಿ ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆಯವರೆಗೆ ಬರುವ ಕೆಲವು ಕನಸುಗಳು ಶುಭ ಘಟನೆಯನ್ನು ಸೂಚಿಸುತ್ತವೆ ಎಂದು ನಂಬಲಾಗಿದೆ. ಅಪಾರ ಸಂಪತ್ತು, ಪ್ರತಿಷ್ಠೆ, ಗೌರವ ಮತ್ತು ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಮೊದಲು ಈ ಕನಸುಗಳು ಬರುತ್ತವೆ. ವಿಶೇಷವಾಗಿ ಈ ಸ್ವಪ್ನಗಳು ಆರ್ಥಿಕ ಲಾಭವನ್ನು ಸೂಚಿಸುತ್ತವೆ.


ಇದನ್ನೂ ಓದಿ:ಕೂದಲಿನ ನೈಸರ್ಗಿಕ ಬಣ್ಣ ರಕ್ಷಣೆಗೆ ಬಲು ಪ್ರಯೋಜನಕಾರಿ ಈ ತರಕಾರಿ ಸಿಪ್ಪೆಗಳು!


ನಿಮ್ಮ ಕನಸಿನಲ್ಲಿ ಚಿಕ್ಕ ಮಗು ನಗುವುದು ಮತ್ತು ಮೋಜು ಮಾಡುವುದನ್ನು ನೀವು ನೋಡಿದರೆ, ಭವಿಷ್ಯದಲ್ಲಿ ನೀವು ಹಣವನ್ನು ಪಡೆಯುತ್ತೀರಿ. ನಿಮ್ಮ ಕನಸಿನಲ್ಲಿ ಪುಟ್ಟ ಹುಡುಗಿ ನೃತ್ಯ ಮಾಡುವುದನ್ನು ನೀವು ನೋಡಿದರೆ, ನಿಮ್ಮ ಸಮಯವು ಬದಲಾಗಲಿದೆ ಎಂದು ಅರ್ಥ.


ಕನಸಿನಲ್ಲಿ ನೀರು ತುಂಬಿದ ಪಾತ್ರೆ ಅಥವಾ ಇತರ ಪಾತ್ರೆಗಳು ಕಂಡುಬಂದರೆ, ಅದು ಆರ್ಥಿಕ ಲಾಭದ ಸಂಕೇತವಾಗಿದೆ. ಕನಸಿನಲ್ಲಿ ಮಣ್ಣಿನ ಮಡಕೆ ಕಂಡರೆ ಅಪಾರ ಸಂಪತ್ತು ಲಭಿಸುವ ಮುನ್ಸೂಚನೆ ಎಂದು ತಿಳಿಯಿರಿ.


ಇದನ್ನೂ ಓದಿ: ಕಲರ್, ಡೈ ಬಳಸದೆ ಕೂದಲನ್ನು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ವಸ್ತುಗಳು


ಒಬ್ಬ ವ್ಯಕ್ತಿಯು ಕನಸಿನಲ್ಲಿ ಧಾನ್ಯಗಳ ರಾಶಿಯನ್ನು ಏರುತ್ತಿರುವುದನ್ನು ನೋಡಿದರೆ, ಈ ಕನಸು ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮನ್ನು ಅಥವಾ ಇತರರು ಸ್ನಾನ ಮಾಡುವುದನ್ನು ಕನಸಿನಲ್ಲಿ ನೋಡುವುದು ಸಹ ತುಂಬಾ ಮಂಗಳಕರವಾಗಿದೆ. ಅಂತಹ ಕನಸು ಸಂಭವಿಸಿದಲ್ಲಿ, ವ್ಯಕ್ತಿಯು ಪ್ರಯಾಣದಿಂದ ಪ್ರಯೋಜನಗಳನ್ನು ಪಡೆಯುತ್ತಾನೆ. ಒಬ್ಬ ವ್ಯಕ್ತಿಯು ಕನಸಿನಲ್ಲಿ ಗಂಗಾ ನದಿಗೆ ಮುಳುಗುತ್ತಿರುವಂತೆ ಭಾವಿಸಿದರೆ, ಅವನು ಸಿಕ್ಕಿಹಾಕಿಕೊಂಡ ಹಣವನ್ನು ಶೀಘ್ರದಲ್ಲೇ ಮರಳಿ ಪಡೆಯುತ್ತಾನೆ ಎಂದರ್ಥ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.