ಮನೆ ಮುಂದೆ ಈ ಪ್ರಾಣಿಗಳನ್ನು ಕಂಡರೆ ಭಾರೀ ಅದೃಷ್ಟ
ಹಿಂದೂ ಧರ್ಮದಲ್ಲಿ ಶಕುನ-ಅಪಶಕುನಗಳನ್ನು ಹೆಚ್ಚಾಗಿ ನಂಬಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆ ಮುಂದೆ ಕೆಲವು ಪ್ರಾಣಿಗಳನ್ನು ಕಾಣುವುದನ್ನು ಭಾಗ್ಯೋದಯದ ಸಂಕೇತ ಎಂದು ಹೇಳಲಾಗುತ್ತದೆ.
ಬೆಂಗಳೂರು: ನಿತ್ಯ ನಮ್ಮ ಜೀವನದಲ್ಲಿ ಹಲವು ಪ್ರಾಣಿ-ಪಕ್ಷಿಗಳನ್ನು ಕಾಣುತ್ತೇವೆ. ಕೆಲವೊಮ್ಮೆ ಮನೆ ಮುಂದೆ ಕೆಲವು ಪ್ರಾಣಿಗಳನ್ನು ಕಾಣುತ್ತೇವೆ. ನಮ್ಮ ಹಿರಿಯರು, ಮನೆಯ ಮುಂದೆ ಕಾಗೆ ಬಂದು ಕುಳಿತರೆ ಮನೆಗೆ ನೆಂಟರು ಬರುವ ಸೂಚನೆ ಎನ್ನುತ್ತಿದ್ದರು. ಹಾಗೆಯೇ, ಮನೆ ಮುಂದೆ ಕೆಲವು ಪ್ರಾಣಿಗಳನ್ನು ಕಂಡರೆ ಅದನ್ನು ಭಾರೀ ಅದೃಷ್ಟ. ಇದು ಶೀಘ್ರದಲ್ಲೇ ನಿಮ್ಮ ಬದುಕಿನಲ್ಲಿ ಭಾಗ್ಯೋದಯವಾಗಲಿವೆ ಎಂಬುದರ ಸಂಕೇತ ಎಂದು ಹೇಳಲಾಗುತ್ತದೆ. ಆ ಶುಭ ಸೂಚನೆಗಳು ಯಾವುವು ಎಂದು ತಿಳಿಯೋಣ...
ಸಾವಿರಕಾಲು:
ಸಾಮಾನ್ಯವಾಗಿ ಸಾವಿರಕಾಲನ್ನು ಕಂಡರೆ ಹೆದರುತ್ತೇವೆ. ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಸಾವಿರಕಾಲು ಕಾಣಿಸಿಕೊಳ್ಳುವುದು ತುಂಬಾ ಶುಭ. ಇದು ಶೀಘ್ರದಲ್ಲೇ ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ ಎಂಬುದನ್ನು ಸೂಚಿಸುತ್ತದೆ.
ಹಾವು:
ಹಾವಿನ ಹೆಸರು ಕೇಳಿದರೆ ಸಾಕು ಎದೆ ಝಲ್ ಅನ್ನುತ್ತೆ. ಆದರೆ, ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದನ್ನು ಕೂಡ ಶುಭ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ- Palmistry: ಅಂಗೈಯಲ್ಲಿರುವ ಭದ್ರ-ಶಶ ಯೋಗ ವ್ಯಕ್ತಿಗಳನ್ನು ಕೋಟ್ಯಾಧಿಪತಿಯನ್ನಾಗಿಸುತ್ತೆ: ನಿಮ್ಮ ಕೈಯಲ್ಲಿಯೂ ಇದೆಯೇ ಈ ಚಿಹ್ನೆ?
ಕಪ್ಪು ನಾಯಿ:
ನಿಮ್ಮ ಮನೆ ಮುಂದೆ ಕಪ್ಪು ನಾಯಿ ಕಾಣಿಸಿಕೊಂಡರೆ ಶೀಘ್ರದಲ್ಲಿಯೇ ಶನಿಯ ವಕ್ರದೃಷ್ಟಿ ನಿವಾರಣೆ ಆಗಲಿದೆ. ಶನಿ ಮಹಾತ್ಮನು ನಿಮ್ಮ ಮೇಲೆ ಕೃಪೆ ತೋರಲಿದ್ದಾನೆ ಎಂದರ್ಥ.
ಹಲ್ಲಿ:
ಹಲ್ಲಿ ನಿಮ್ಮ ಮೇಲೆ ಬಿದ್ದರೆ ನೀವು ಹೊಸ ಉಡುಪನ್ನು ಪಡೆಯಲಿದ್ದೀರಿ ಎಂಬುದರ ಸಂಕೇತವಾಗಿದೆ.
ಇದನ್ನೂ ಓದಿ- ಶನಿ ರಾಶಿಗೆ ಸೂರ್ಯ ಪ್ರವೇಶಿಸುವ ವೇಳೆ ಈ ಒಂದು ಕೆಲಸ ಮಾಡಿದರೆ ಸಾಕು ಅದೃಷ್ಟವೇ ಬದಲಾಗುತ್ತೆ!
ಬಿಳಿ ಪಾರಿವಾಳ:
ಬಿಳಿ ಬಣ್ಣ ಶಾಂತಿಯ ಸಂಕೇತ. ನಿಮ್ಮ ಮನೆಯ ಮುಂದೆ ಬಿಳಿ ಪಾರಿವಾಳ ಕಾಣಿಸಿಕೊಂಡರೆ ನಿಮ್ಮ ಬಹುದಿನದ ಆಸೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬುದರ ಶುಭ ಸೂಚನೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.