Shani Shatabhisha Gochar 2023: ಬರುವ ಮಾರ್ಚ್ 15 ರಂದು ಶನಿದೇವ ಶತಭಿಷಾ ನಕ್ಷತ್ರದಲ್ಲಿ ಪ್ರವೆಶಿಸಲಿದ್ದಾನೆ. ಬೆಳಗ್ಗೆ ಸುಮಾರು 11 ಗಂಟೆ 40 ನಿಮಿಷಕ್ಕೆ ಶನಿಯ ಈ ಶತಭಿಷಾ ಗೋಚರ ನೆರವೇರಲಿದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು 27 ನಕ್ಷತ್ರಗಳಿವೆ. ಅವುಗಳಲ್ಲಿ ಶತಭಿಷಾ ನಕ್ಷತ್ರವನ್ನು ತುಂಬಾ ವಿಶೇಷ ನಕ್ಷತ್ರ ಎಂದು ಭಾವಿಸಲಾಗುತ್ತದೆ. ಶತಭಿಷಾ ನಕ್ಷತ್ರಕ್ಕೆ ರಾಹು ಅಧಿಪತಿ. ಶನಿ 17 ಅಕ್ಟೋಬರ್ ವರೆಗೆ ಇದೆ ನಕ್ಷತ್ರದಲ್ಲಿರಲಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ತುಂಬಾ ನಿಧಾನ ಗತಿಯಲ್ಲಿ ಸಾಗುವ ಗ್ರಹವಾಗಿದೆ . ಈ ನಕ್ಷತ್ರದಲ್ಲಿ ಶನಿಯ ಸ್ಥಿತಿ ಸಾಕಷ್ಟು ಅನುಕೂಲಕರ ಎಂದು ಭಾವಿಸಲಾಗುತ್ತದೆ. ಆದರೂ ಕೂಡ ಕೆಲ ರಾಶಿಗಳಿಗೆ ಇದರ ನಕಾರಾತ್ಮಕ ಫಲಿತಾಂಶಗಳು ಸಿಗಲಿವೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ

COMMERCIAL BREAK
SCROLL TO CONTINUE READING

1. ವೃಷಭ ರಾಶಿ: ಶತಭಿಷಾ ಗೊಚರದ ಸಂದರ್ಭದಲ್ಲಿ ಶನಿದೇವ ವೃಷಭ ರಾಶಿಯ ದಶಮ ಭಾವದಲ್ಲಿರಲಿದ್ದಾನೆ. ಹೀಗಾಗಿ ನೌಕರ ವರ್ಗದ ಜನರಿಗೆ ವರ್ಗಾವಣೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಇದಲ್ಲದೆ ನೌಕರಿಯಲ್ಲಿ ಭಾರಿ ಬದಲಾವಣೆ ಕೂಡ ಎದುರಾಗಲಿದೆ. ಈ ಅವಧಿಯಲ್ಲಿ ಬಿಸ್ನೆಸ್ ನಲ್ಲಿ ನಿಮಗೆ ಸಾಕಷ್ಟು ಅವಕಾಶಗಳು ಸಿಗಲಿವೆ. ಆದರೆ, ಎಲ್ಲೋ ಒಂದು ಕಡೆ ನಿಮ್ಮಿಂದ ತಪ್ಪು ಸಂಭವಿಸುವ ಸಾಧ್ಯತೆ ಇದೆ. ಈ ಗೋಚರ ಕಾಲಾವಧಿಯಲ್ಲಿ ವೃಷಭ ರಾಶಿಯ ಜಾತಕದವರು ಪ್ರತಿ ಹೆಜ್ಜೆಗೂ ಎಚ್ಚರಿಕೆಯಿಂದರಬೇಕು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆಗೆ ಸಣ್ಣ ಪುಟ್ಟ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಯುವ ಸಾಧ್ಯತೆ ಇದೆ.

2. ಕರ್ಕ ರಾಶಿ- ಈ ಅವಧಿಯಲ್ಲಿ ಕಠಿಣ ಪರಿಶ್ರಮದ ಹೊರತಾಯೂ ಕೂಡ ನಿಮಗೆ ಸವಾಲುಗಳು ಎದುರಾಗಲಿವೆ. ಕೆಲವರು ತಮ್ಮ ನೌಕರಿಯಿಂದ ಕೈತೊಳೆದುಕೊಳ್ಳಬೇಕಾಗಬಹುದು. ಬಿಸ್ನೆಸ್ ಗೆ ಸಂಬಂದಹಿಸಿದ ಜನರಿಗೂ ಕೂಡ ಕೆಲ ಸಮಸ್ಯೆಗಳು ಎದುರಾಗಬಹುದು. ಇದರಿಂದ ನಿಮ್ಮ ಬಿಸ್ನೆಸ್ ಪ್ರಭಾವಕ್ಕೆ ಒಳಗಾಗಬಹುದು, ದಾಂಪತ್ಯ ಜೀವನದಲ್ಲಿ ಏರಿಳಿತಗಳು ಇರಲಿವೆ, ಕೌಟುಂಬಿಕ ಜೀವನ ಕಲಹದಿಂದ ಕೂಡಿರಲಿದೆ.

3. ವೃಶ್ಚಿಕ ರಾಶಿ- ಶತಭಿಶಾ ನಕ್ಷತ್ರದಲ್ಲಿ ಶನಿಯ ಭ್ರಮಣೆ ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ತರಲಿದೆ. ನೌಕರಿಯಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಪ್ರಸ್ತುತ ವೃಶ್ಚಿಕ ರಾಶಿಯವರ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ಸಾಗುತ್ತಿದೆ. ಬಿಸ್ನೆಸ್ ಗೆ ಸಂಬಂಧಿಸಿದ ಜನರಿಗೆ ಈ ಶನಿಯ ಭ್ರಮಣೆ ಉತ್ತಮ ಎನ್ನಲಾಗುತ್ತಿಲ್ಲ. ಆರ್ಥಿಕ ವೇದಿಕೆಯಲ್ಲಿ ಹಲವು ಏರಿಳಿತಗಳು ಇರಲಿವೆ.


4. ಕನ್ಯಾ ರಾಶಿ- ನೌಕರ ವರ್ಗದವರ ಮೇಲೆ ಒತ್ತಡ ಇರಲಿದೆ. ಇದರಿಂದ ಮಾನಸಿಕ ಒತ್ತಡ ಒತ್ತಡ ಉಂಟಾಗಲಿದೆ. ನೌಕರಿಯಲ್ಲಿ ವರ್ಗಾವಣೆ, ಬಿಸ್ನೆಸ್ ಗೆ ಸಂಬಂಧಿಸಿದ ಜನರಿಗೆ ಸಮಸ್ಯೆಗಳು ಎದುರಾಗಲಿವೆ. ಇದರಿಂದ ನಿಮ್ಮ ಬಿಸ್ನೆಸ್ ಹೆಚ್ಚಿನ ಒತ್ತಡ ಎದುರಿಸಲಿದೆ. ದಾಂಪತ್ಯ ಜೀವನದಲ್ಲಿ ಏರಿಳಿತಗಳು ಸಂಭವಿಸಲಿವೆ.

5. ಕುಂಭ ರಾಶಿ- ಪ್ರಸ್ತುತ ಕುಂಭ ರಾಶಿಯ ಮೇಲೆ ಎರಡನೇ ಹಂತದ ಸಾಡೆಸಾತಿ ನಡೆಯುತ್ತಿದೆ. ಹೀಗಾಗಿ ನೌಕರ ವರ್ಗಕ್ಕೆ ತಮ್ಮ ಮೇಲೆ ಸಾಕಷ್ಟು ಒತ್ತಡವಿದೆ ಎಂಬ ಭಾವನೆ ಬರಬಹುದು. ಆದರೆ, ಈ ಅವಧಿಯಲ್ಲಿ ನಿಮಗೆ ನಿಮ್ಮ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಬೆಂಬಲ ಸಿಗುವ ಸಾಧ್ಯತೆ ಇದೆ. ಸ್ವಂತ ಕಂಪನಿಯನ್ನು ನಡೆಸುತ್ತಿರುವವರು ಹೊಸ ಹೂಡಿಕೆಯನ್ನು ತಪ್ಪಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿರುವವರಿಗೆ ಪಾರ್ಟ್ನರ್ ಜೊತೆಗೆ ಸಂಬಂಧ ಹಾಳಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-


6. ಮೀನ ರಾಶಿ ಮೀನ ರಾಶಿಯ ಜಾತಕದವರ ಮೇಲೆ ಪ್ರಸ್ತುತ ಶನಿಯ ಸಾಡೆಸಾತಿ ಸಾಗುತ್ತಿದೆ. ನಿಮ್ಮ ಕಾರ್ಯಭಾರದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹೊಸ ಉದ್ಯಮ ಸ್ಥಾಪಿಸಲು ಹೊರಟಿರುವವರು ಈ ಅವಧಿಯಲ್ಲಿ ಸಾಕಷ್ಟು ಎಚ್ಚರಿಕೆವಹಿಸಬೇಕು. ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ. ಬಿಸ್ನೆಸ್ ನಲ್ಲಿ ಹಾನಿ ಎದುರಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.