ನವದೆಹಲಿ: Shani Puja - ಶಾಸ್ತ್ರಗಳಲ್ಲಿ ಶನಿದೆವನನ್ನು ನ್ಯಾಯಪ್ರಿಯ ದೇವನೆಂದು ಕರೆಯಲಾಗುತ್ತದೆ. ಮನುಷ್ಯರಿಗೆ ಶನಿ ದೇವ ಅವರ ಕರ್ಮಗಳ ಅನುಸಾರ ಫಲ ನೀಡುತ್ತಾರೆ. ಶನಿದೆವನ ಕೃಪಾದೃಷ್ಟಿಗೆ ಪಾತ್ರರಾಗಲು ಭಕ್ತಾದಿಗಳು ಶನಿವಾರ ಶನಿ ದೇವನಿಗೆ ಪೂಜೆ ಸಲ್ಲಿಸುತ್ತಾರೆ.


COMMERCIAL BREAK
SCROLL TO CONTINUE READING

ಶನಿ ದೇವನ ಜೊತೆಗೆ ದೇವಾಧಿದೇವ ಶಿವನಿಗೂ ಕೂಡ ಪೂಜೆ ಸಲ್ಲಿಸಿ
ಶನಿವಾರದ ದಿನ ಶನಿ ದೇವನ ಜೊತೆಗೆ ದೇವಾಧಿದೇವ ಶಿವನ ಪೂಜೆ ಕೂಡ ಸಲ್ಲಿಸಿ. ಏಕೆಂದರೆ ಶಾಸ್ತ್ರಗಳಲ್ಲಿ ಶಿವನಿಗೆ ಶನಿದೆವನ ಗುರು ಎಂದು ನಂಬಲಾಗಿದೆ. ಶನಿವಾರ ಶನಿದೇವ ಹಾಗೂ ಶಿವನ ಪೂಜೆ ಸಲ್ಲಿಸಿದರೆ ಸಂಕಷ್ಟಗಳು ದೂರವಾಗುತ್ತವೆ ಹಾಗೂ ಕುಟುಂಬ ಸದಸ್ಯರ ಮೇಲಿನ ಅಕಾಲ ಮೃತ್ಯು ಅಪಾಯ ತಪ್ಪುತ್ತದೆ ಎನ್ನಲಾಗಿದೆ.


ಇದನ್ನು ಓದಿ- ವಿಸ್ಮಯ ತಾಣ ಈ ಶಿವ ದೇಗುಲ, ನಿತ್ಯ 3 ಬಾರಿ ಬಣ್ಣ ಬದಲಾಯಿಸುತ್ತದೆ ಇಲ್ಲಿನ ಶಿವಲಿಂಗ


ಮಹಾದೇವನಿಗೆ ಜಲ ಅರ್ಪಿಸುವುದರಿಂದ ಪ್ರಸನ್ನನಾಗುತ್ತಾನೆ ಶನಿದೇವ
ಶನಿವಾರದ ದಿನ ಮಹಾದೇವನಿಗೆ ಕರಿ ಎಳ್ಳು ಬೆರೆಸಿರುವ ನೀರನ್ನು ಅರ್ಪಿಸಿ. ಜೊತೆಗೆ ಓಂ ನಮಃ ಶಿವಾಯ ಮಂತ್ರವನ್ನು ಉಚ್ಚರಿಸಿ. ಹೀಗೆ ಮಾಡುವುದರಿಂದ ದೇವಾಧಿದೇವ ಶಿವ ಹಾಗೂ ಶನಿದೇವನ ಕೃಪಾ ದೃಷ್ಟಿ ನಿಮ್ಮ ಮೇಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಬಂದ ಸಂಕಷ್ಟಗಳು ಹಾಗೂ ಅಕಾಲ ಮೃತ್ಯು ಸಂಕಟ ನಿವಾರಣೆಯಾಗುತ್ತದೆ. 


ಸಾಸಿವೆ ಎಣ್ಣೆಯ ದೀಪ ಬೆಳಗಿ
ಶನಿವಾರದ ದಿನ ಶನಿ ದೇವರ ಎದುರು ಸಾಸಿವೆ ಎಣ್ಣೆಯ ದೀಪ ಬೆಳಗಿ. ಈ ವೇಳೆ ಎಣ್ಣೆಯಲ್ಲಿ ಕರಿ ಎಳ್ಳು ಅಥವಾ ಕರಿ ಬೇಳೆ ಬೆರೆಸಲು ಮರೆಯಬೇಡಿ. ಈ ರೀತಿ ಮಾಡುವುದರಿಂದ ಶನಿದೇವ ಪ್ರಸನ್ನನಾಗುತ್ತಾನೆ.


ಕರಿ ನಾಯಿಗೆ ಅನ್ನ ನೀಡಿ
ಶನಿವಾರದ ದಿನ ಕರಿ ನಾಯಿಗೆ ಅನ್ನ ನೀಡುವುದು ಶುಭಕರ ಎಂದು ಹೇಳಲಾಗಿದೆ. ಧಾರ್ಮಿಕ ಮಾನ್ಯತೆಗಳ  ಅನುಸಾರ, ಶನಿವಾರ ಕಪ್ಪು ಬಣ್ಣದ ಶ್ವಾನಕ್ಕೆ ಭೋಜನ ನೀಡಿದರೆ, ನಿಮ್ಮ ಮೇಲಿರುವ ಸಂಕಷ್ಟಗಳನ್ನು ನಾಯಿ ತನ್ನ ಮೇಲೆಳೆದುಕೊಳ್ಳುತ್ತದೆ ಎನ್ನಲಾಗಿದೆ.


ಇದನ್ನು ಓದಿ-ಈ Templeನಲ್ಲಿ ರಾತ್ರಿ ತಂಗುವವರು ಕಲ್ಲಾಗುತ್ತಾರಂತೆ! ಇಲ್ಲಿದೆ ಭಯಾನಕ ರಹಸ್ಯ


ಈ ವಸ್ತುಗಳನ್ನು ಬಡವರಿಗೆ ದಾನ ಮಾಡಿ
ಶನಿವಾರದ ದಿನ ಬಡವರಿಗೆ ದಾನ ನೀಡುವುದರಿಂದ ಶನಿ ದೇವನ(Shanidev)ಕೃಪಾ ದೃಷ್ಟಿ ಪ್ರಾಪ್ತಿಯಾಗುತ್ತದೆ. ಈ ದಿನ ಬಡವರಿಗೆ ಕಪ್ಪು ಎಳ್ಳು, ಕಪ್ಪು ಬೇಳೆ, ವಸ್ತ್ರ ಹಾಗೂ ಭೋಜನ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವಾಗಲು ಸುಖ ಸಮೃದ್ಧಿ ನೆಲೆಸುತ್ತದೆ. 


ಅಶ್ವಸ್ಥ ಮರದ ಕೆಳಗೆ ದೀಪ ಬೆಳಗಿ
ಶನಿವಾರದ ದಿನ ಅಶ್ವಸ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಬೆಳಗಿ . ಅಶ್ವಸ್ಥ ಮರವನ್ನು ಕೃಷ್ಣನ ಸ್ವರೂಪ ಎಂದು ಭಾವಿಸಲಾಗಿದೆ. ಶನಿದೇವ ಶ್ರೀಕೃಷ್ಣನನ್ನು ಗುರು ಎಂದು ಭಾವಿಸುತ್ತಾರೆ. ಹೀಗಾಗಿ ಈ ರೀತಿ ಮಾಡುವುದರಿಂದ ಶನಿದೇವ ಪ್ರಸನ್ನರಾಗುತ್ತಾರೆ ಎನ್ನಲಾಗಿದೆ.


ಇದನ್ನು ಓದಿ- Negative Energy: ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಕಾರಾತ್ಮಕ ಶಕ್ತಿಗಳಿರುತ್ತವೆ, ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.