ನವದೆಹಲಿ : Shani Effect 2022 : ಶನಿದೇವನ ದೃಷ್ಟಿ ಈ ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ಮೇಲಿರುತ್ತವೆ. ಶನಿಯ (Shani deva) ವಕ್ರ ದೃಷ್ಟಿ ವ್ಯಕ್ತಿಯ ಮೇಲೆ ಬಿದ್ದರೆ, ಅವನ ಜೀವನವು ಅನೇಕ ರೀತಿಯ ದುಃಖಗಳಿಂದ ತುಂಬಿರುತ್ತದೆ. ಅದೇ ವೇಳೆ, ಶನಿದೇವನು ಯಾರ ಮೇಲಾದರೂ ದಯೆ ತೋರಿದರೆ, ಭಿಕ್ಷುಕ ಕೂಡಾ, ರಾತ್ರಿ ಬೆಳೆಗಾಗುವುದರೊಳಗೆ ಅರಸನಾಗಿ ಬಿಡುತ್ತಾನೆಯಂತೆ.  ಹೊಸ ವರ್ಷ ಅಂದರೆ 2022 ರಲ್ಲಿ (New year horoscope), ಶನಿಯು ಕುಂಭ ರಾಶಿ ಪ್ರವೇಶಿಸುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಶನಿಯ ರಾಶಿ ಬದಲಾವಣೆಯಿಂದಾಗಿ ಕೆಲವು ರಾಶಿಚಕ್ರದ ಚಿಹ್ನೆಗಳು, ಶನಿಯ ಪ್ರಕೋಪಕ್ಕೆ ಒಳಗಾದರೆ ಇನ್ನು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ  ಶನಿಯ ಕೃಪಾ ಕಟಾಕ್ಷವಿರಲಿದೆ. 2022 ರಲ್ಲಿ ಶನಿಯ ಕೃಪೆಯು 3 ರಾಶಿಯ ಚಿಹ್ನೆಗಳ ಮೇಲೆ ಅಪಾರ ಕೃಪೆ ಹರಿಸುತ್ತಾನೆ. 
 
ಮೇಷ ರಾಶಿ :
2022ರಲ್ಲಿ ಶನಿಯ ರಾಶಿ (Shani rashi parivartane) ಬದಲಾವಣೆಯು ಮೇಷ ರಾಶಿಯವರಿಗೆ ವಿಶೇಷವಾಗಲಿದೆ. ಆಡಳಿತ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹೊಸ ವರ್ಷವು ಮಂಗಳಕರವಾಗಿರುತ್ತದೆ. ಇದಲ್ಲದೆ, ಕಾನೂನು, ಇಂಧನ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಶನಿದೇವನ (Shani deva)  ಆಶೀರ್ವಾದವಿರಲಿದೆ. ಆದಾಯ ಹೆಚ್ಚಲಿದೆ. ನೀವು ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗುತ್ತದೆ. ಇದರೊಂದಿಗೆ, ಉದ್ಯೋಗಿಗಳಲ್ಲಿ ಅಗಾಧವಾದ ಪ್ರಗತಿ ಇರುತ್ತದೆ. ವ್ಯಾಪಾರ ಮಾಡುವವರು ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಪಡೆಯುತ್ತಾರೆ.  


COMMERCIAL BREAK
SCROLL TO CONTINUE READING

ಇದನ್ನೂ  ಓದಿ : ಹೊಸ ವರ್ಷದಲ್ಲಿ ಈ ರಾಶಿಗಳ ಮೇಲೆ ‘ಕೇತು’ ಪ್ರಭಾವ: ಯಾವ ರಾಶಿಯ ಮೇಲೆ ಯಾವ ಪರಿಣಾಮ?


ವೃಷಭ ರಾಶಿ :
ಹೊಸ ವರ್ಷದಲ್ಲಿ ವೃಷಭ ರಾಶಿಯವರಿಗೆ (Taurus) ಶನಿದೇವನ ವಿಶೇಷ ಆಶೀರ್ವಾದ ಸಿಗಲಿದೆ. ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ. ಇದಲ್ಲದೇ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ಇದರಿಂದ ಉದ್ಯೋಗ ಅರಸಿ ಬಂದವರ ಚಿಂತೆ ದೂರವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸ್ಥಗಿತಗೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹೊಸ ವರ್ಷವು ಭೂಮಿ, ವಾಹನ ಮತ್ತು ಮನೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮವಾಗಿದೆ.   


ಧನು ರಾಶಿ :
ಹೊಸ ವರ್ಷದಲ್ಲಿ ಈ ರಾಶಿಯ ಭವಿಷ್ಯ ( New year rashi bhavishya) ಬದಲಾಗಲಿದೆ. ಹಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ವ್ಯಾಪಾರಸ್ಥರು ತಮ್ಮ ದೈನಂದಿನ ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತಾರೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶ ಸಿಗಲಿದೆ.  ಇದರ ಹೊರತಾಗಿ,  ಒಳ್ಳೆಯ ಕೆಲಸ ದೊರೆಯಲಿದೆ. ಅವಿವಾಹಿತರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಏಪ್ರಿಲ್ 29 ರ ನಂತರ, ಶನಿಯು ನಿಮ್ಮ ರಾಶಿಚಕ್ರದ (Zodiac sign) ಎರಡನೇ ಮನೆಯಲ್ಲಿ ಸಾಗುತ್ತಾನೆ. ಈ ಸಂದರ್ಭದಲ್ಲಿ ಹಣ ಮತ್ತು ಲಾಭ ಅಧಿಕವಾಗಲಿದೆ. 


ಇದನ್ನೂ  ಓದಿ : Mustard Seeds Remedies: ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ ಸಾಸಿವೆ ಕಾಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a