Shani Remedies: ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಅತ್ಯಂತ ನಿಧಾನ ಗತಿಯಲ್ಲಿ ಚಲಿಸುವ ಗ್ರಹವಾಗಿದೆ. ಯಾವುದೇ ಒಂದು ರಾಶಿಯಲ್ಲಿ ಶನಿ ಎರಡೂವರೆ ವರ್ಷಗಳವರೆಗೆ ವಿರಾಜಮಾನನಾಗುತ್ತಾನೆ ಹಾಗೂ ಬಳಿಕ ತನ್ನ ರಾಶಿ ಪರಿವರ್ತನೆಯನ್ನು ಮಾಡುತ್ತಾನೆ. ಪ್ರಸ್ತುತ ಶನಿ ವಕ್ರ ಸ್ಥಿತಿಯಲ್ಲಿ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಶನಿಯ ಈ ಮಕರ ರಾಶಿ ಪ್ರವೇಶದಿಂದ ಕೆಲ ರಾಶಿಗಳ ಜನರಿಗೆ ಶನಿಯ ಮಹಾದೆಸೆಗಳಾಗಿರುವ ಸಾಡೇಸಾತಿ ಮತ್ತು ಎರಡೂವರೆ ವರ್ಷಗಳ ಕಾಟದಿಂದ ನೆಮ್ಮದಿ ಸಿಗಲಿದೆ. ಇನ್ನೊಂದೆಡೆ ಉಳಿದ ರಾಶಿಗಳ ಮೇಲೆ ಶನಿಯ ಕೆಟ್ಟ ಪ್ರಭಾವಗಳು ಗೋಚರಿಸಲಿವೆ. ಅಕ್ಟೋಬರ್ ತಿಂಗಳವರೆಗೆ ಶನಿ ವಕ್ರನಡೆಯಲ್ಲಿಯೇ ಮುಂದುವರೆಯಲಿದ್ದಾನೆ. ಈ ಅವಧಿಯಲ್ಲಿ ಶನಿಯ ಕೆಟ್ಟ ಪ್ರಭಾವಕ್ಕೆ ಬರುವ ಜಾತಕದವರಿಗೆ ಕೆಲ ಸಲಹೆಗಳನ್ನು ಅನುಸರಿಸಲು ಸೂಚಿಸಲಾಗಿದೆ. 


COMMERCIAL BREAK
SCROLL TO CONTINUE READING

ಜೋತಿಷ್ಯ ಶಾಸ್ತ್ರದ ಪ್ರಕಾರ ಒಂದು ವೇಳೆ ಶನಿಯ ಮಹಾದೆಸೆಯ ಅವಧಿಯಲ್ಲಿ ಈ ಉಪಾಯಗಳನ್ನು ಅನುಸರಿಸಿದರೆ, ಶನಿಯ ದುಷ್ಪ್ರಭಾವಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಬನ್ನಿ ಆ ಉಪಾಯಗಳು ಯಾವುವು ತಿಳಿದುಕೊಳ್ಳೋಣ 


ಶನಿಯ ದುಷ್ಪ್ರಭಾವಗಳಿಂದ ಪಾರಾಗುವ ಉಪಾಯಗಳು
>> ಶನಿಯ ರಾಶಿ ಬದಲಾವಣೆಯಿಂದ ಕೆಲವು ರಾಶಿಗಳು ಶನಿಯ ಹಿಡಿತಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ಶನಿವಾರ, "ಓಂ ಪ್ರಿಂ ಪ್ರಿಂ ಪ್ರಾಣ: ಶನಿಶ್ಚರಾಯ ನಮಃ" ಎಂದು 3 ಸುತ್ತು ಜಪಮಾಲೆಯನ್ನು ಜಪಿಸಿ. ಅಲ್ಲದೆ, ಶನಿಯ ಇನ್ನೊಂದು ಮಂತ್ರದ ಒಂದು ಜಪಮಾಲೆಯನ್ನು ನಿಯಮಿತವಾಗಿ ಜಪಿಸುವುದು ಲಾಭ ನೀಡಲಿದೆ. ಇದರಿಂದ ಶನಿ ದೇವನು ಸಂತುಷ್ಟನಾಗಿ ಶನಿ ದೋಷದಿಂದ ಮುಕ್ತಿ ದಯಪಾಲಿಸುತ್ತಾನೆ.


>> ಶನಿ ಅಮಾವಾಸ್ಯೆಯ ದಿನ, ಬೆಳಗ್ಗೆ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಧಿ-ವಿಧಾನಗಳಿಂದ ಶನಿಗೆ ಪೂಜೆ ಮಾಡಿ. ಈ ಸಮಯದಲ್ಲಿ ಶನಿ ಚಾಲೀಸಾ ಮತ್ತು ಶನಿ ಮಂತ್ರವನ್ನು ಪಠಿಸುವುದು ಅತ್ಯಂತ ಮಂಗಳಕರವೆಂದು ಎಂದು ಪರಿಗಣಿಸಲಾಗಿದೆ. ಸಂಜೆ, ಶನಿ ದೇವನನ್ನು ಪೂಜಿಸುವುದರ ಜೊತೆಗೆ, ಆಂಜನೇಯನ ದೇವಸ್ಥಾನಕ್ಕೂ ಕೂಡ ಭೇಟಿ ನೀಡಿ. ಮತ್ತು ಸುಂದರಕಾಂಡವನ್ನು ಪಠಿಸಿ.


>> ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು, ಶನಿವಾರದಂದು ಶ್ರವಣಾ ನಕ್ಷತ್ರದಲ್ಲಿ ಮಂತ್ರಿಸಿದ ಶಮಿಯ ಕಾಂಡವನ್ನು ಕಪ್ಪು ದಾರದಲ್ಲಿ ಧರಿಸಿ. ಇದಲ್ಲದೆ, ಈ ದಿನ ಶನಿಗೆ ಸಂಬಂಧಿಸಿದ ಕಪ್ಪು ಎಳ್ಳು, ಕಪ್ಪು ಪಾದರಕ್ಷೆ, ಕಪ್ಪು ಕೊಡೆ, ಕಸ್ತೂರಿ ಕಪ್ಪು ಎಳ್ಳು, ಕರಿಬೇವು ಇತ್ಯಾದಿಗಳನ್ನು ದಾನ ಮಾಡುವುದರಿಂದ ಶನಿಗ್ರಹದ ಪ್ರಭಾವವು ಕಡಿಮೆಯಾಗುತ್ತದೆ.


>> ಶನಿಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು, ಶನಿವಾರದಂದು ಕಬ್ಬಿಣದ ಬಟ್ಟಲಿನಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ. ಈಗ ಯಾವುದಾದರೂ ಶನಿ ದೇವಸ್ಥಾನಕ್ಕೆ ಅದನ್ನು ದಾನ ಮಾಡಿ. ಈ ದಿನ ಶನಿ ಸ್ತೋತ್ರವನ್ನು ಪಠಿಸಿ. ಪಕ್ಷಿಗಳಿಗೆ ಆಹಾರ ನೀಡಬೇಕು.


ಇದನ್ನೂ ಓದಿ-Guru Purnima 2022 Daan: ಗುರು ಪೂರ್ಣಿಮಾ ದಿನ ರಾಶಿಗೆ ಅನುಗುಣವಾಗಿ ದಾನ ಮಾಡಿ, ಇಷ್ಟಾರ್ಥಗಳು ನೆರವೇರುತ್ತವೆ


>> ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಶಿವನನ್ನು ನಿಯಮಿತವಾಗಿ ಪೂಜಿಸಿ. ಅಶ್ವತ್ಥ ಮರದ ಬಳಿ ಶನಿಯ ಲಘು ಸ್ತೋತ್ರವನ್ನು ಪಠಿಸಿ. ಇದರ ನಂತರ, ಹಸಿ ಲಸ್ಸಿಯಲ್ಲಿ ಕಪ್ಪು ಎಳ್ಳನ್ನು ಹಾಕಿ ಮತ್ತು ಅದನ್ನು ಅಶ್ವತ್ಥ ಮರಕ್ಕೆ ಅರ್ಪಿಸುವುದರ ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ.


ಇದನ್ನೂ ಓದಿ-Chaturmasa 2022: ಚಾತುರ್ಮಾಸ ಆರಂಭಗೊಂಡಿದೆ, 4 ತಿಂಗಳ ಕಾಲ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.