Saturn Transit 2023 Effects: ವೈದಿಕ ಜ್ಯೋತಿಷ್ಯದ ಪ್ರಕಾರ,  2023 ರ ಆರಂಭದಲ್ಲಿ, ಗ್ರಹಗಳ ಸ್ಥಾನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಇದರಲ್ಲಿ ಶನಿಯ ಸ್ಥಾನ ಬಹಳ ಮುಖ್ಯವಾಗಲಿದೆ. ಜನವರಿ 17, 2023 ರಂದು, ಶನಿಯು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರ ನಂತರ ಶನಿಯು ಫೆಬ್ರವರಿ 3 ರಂದು ಅಸ್ತಮಿಸಲಿದ್ದಾನೆ. 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನದಲ್ಲಿ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ. ಆದರೆ, ಹದಿನೈದು ದಿನಗಳ ಅಂತರದಲ್ಲಿ ಎರಡು ಬಾರಿ ತನ್ನ ಸಂಚಾರ ಬದಲಾಯಿಸಲಿರುವ ಶನಿಯು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

2023ರ ಆರಂಭದಲ್ಲಿ ಈ ರಾಶಿಯವರಿಗೆ ಭಾರೀ ಲಾಭ ನೀಡಲಿದ್ದಾನೆ ಶನಿದೇವ:
ವೃಷಭ ರಾಶಿ: 

2023 ರಲ್ಲಿ ಶನಿಯ ರಾಶಿ ಬದಲಾವಣೆ ಮತ್ತು ನಂತರ ಶನಿಯ ಅಸ್ತಮ ಸ್ಥಿತಿಯು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ನೀವು ಯಶಸ್ಸಿನ ಎತ್ತರವನ್ನು ಮುಟ್ಟುತ್ತೀರಿ ಎಂದು ಹೇಳಬಹುದು. ಸಮಾಜದಲ್ಲಿ ನಿಮ್ಮ ಪ್ರಭಾವ ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಆದಾಯದಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತದೆ. ಈ ರಾಶಿಯ ವರ್ತಕರು ಕೂಡ ಸಾಕಷ್ಟು ಲಾಭ ಗಳಿಸುತ್ತಾರೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. 


ಇದನ್ನೂ ಓದಿ- Guru Margi 2022: ಗುರುವಿನ ನೇರ ನಡೆಯಿಂದ 'ಗಜಕೇಸರಿ ಯೋಗ', ಈ 3 ರಾಶಿಯವರಿಗೆ ಭಾರೀ ಅದೃಷ್ಟ


ತುಲಾ ರಾಶಿ: 
ಶನಿ ದೇವನು ಯಾವಾಗಲೂ ತುಲಾ ರಾಶಿಯವರಿಗೆ ದಯೆ ತೋರುತ್ತಾನೆ. 2023ರಲ್ಲಿ ಶನಿಯ ಸಂಕ್ರಮಣ ಮತ್ತು ಶನಿಯ ಅಸ್ತಮ ಸ್ಥಿತಿಯ ಸಮಯವು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಜನರು ಶಿಕ್ಷಣ ಮತ್ತು ವೃತ್ತಿಯಲ್ಲಿ ಬಲವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಹೊಸ ನೌಕರಿ, ಬಡ್ತಿ, ಇನ್ಕ್ರಿಮೆಂಟ್ ಸಿಗುವ ಸಂಪೂರ್ಣ ಅವಕಾಶಗಳಿವೆ. ವ್ಯಾಪಾರ ವೃದ್ಧಿಯಾಗಲಿದೆ. ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಗಳಿವೆ. 


ಇದನ್ನೂ ಓದಿ- Sun Transit: 2022ರ ಅಂತ್ಯದವರೆಗೆ ಈ ಜನರಿಗೆ ದಯೆ ತೋರುತ್ತಾನೆ ಸೂರ್ಯ ದೇವ


ಮಕರ ರಾಶಿ: 
2023ರಲ್ಲಿ, ಮಕರ ರಾಶಿಯನ್ನು ತೊರೆದ ನಂತರ, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿ ನಂತರ ಅಸ್ತಮಿಸುತ್ತಾನೆ. ಈ ಸಮಯದಲ್ಲಿ ಮಕರ ರಾಶಿಯವರಿಗೆ ಶುಭ ಫಲ ಸಿಗಲಿದೆ. ಸ್ಥಗಿತಗೊಂಡಿರುವ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಹಣವು ಪ್ರಯೋಜನಕಾರಿಯಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಲವಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ. ಹೊಸ ಅವಕಾಶಗಳು ಸಿಗಬಹುದು. ವ್ಯಾಪಾರದಲ್ಲಿ ಉತ್ಕರ್ಷವಿರುತ್ತದೆ. ದೊಡ್ಡ ಒಪ್ಪಂದವನ್ನು ಖಚಿತಪಡಿಸಬಹುದು. ಒಟ್ಟಾರೆಯಾಗಿ, ಶನಿಯು ಪ್ರತಿಯೊಂದು ವಿಷಯದಲ್ಲೂ ಈ ರಾಶಿಯವರಿಗೆ ಸಖತ್ ಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.