Shani Dev: ಶನಿದೇವನ ಕೋಪದಿಂದ ತಪ್ಪಿಸಿಕೊಳ್ಳಲು ತಕ್ಷಣವೇ ಇದನ್ನು ಮಾಡಿರಿ..!
ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಇಂತಹ ಕೆಲವು ಜನರ ಬಗ್ಗೆ ಹೇಳಲಾಗಿದೆ. ಇವರ ಮೇಲೆ ಶನಿಯು ಎಂದಿಗೂ ಕೆಟ್ಟ ಛಾಯೆಯನ್ನು ಹೊಂದಿರುವುದಿಲ್ಲ.
ನವದೆಹಲಿ: ಜ್ಯೋತಿಷ್ಯದಲ್ಲಿ ಶನಿ ದೇವ(Shani Dev)ರನ್ನು ಕ್ರೂರ ದೇವರು ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ದುಷ್ಟ ಕಣ್ಣಿನಿಂದ ದೂರವಿರಲು ಬಯಸುತ್ತಾನೆ. ಜನರ ಮನಸ್ಸಿನಲ್ಲಿ ಶನಿದೇವನ ಬಗ್ಗೆ ಭಯದ ಭಾವನೆ ಮಾತ್ರ ಇದ್ದೆ ಇದೆ, ಆದ್ದರಿಂದ ಅವರು ಶನಿದೇವನ ಆಶೀರ್ವಾದ ಪಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಶನಿಯ ಕೋಪವನ್ನು ತಪ್ಪಿಸಲು ಹಲವು ಮಾರ್ಗಗಳನ್ನು ಹೇಳಲಾಗಿದೆ. ಭಗವಾನ್ ಶಿವ ಮತ್ತು ಹನುಮಂತನನ್ನು ಪೂಜಿಸುವುದರ ಜೊತೆಗೆ ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸುವುದರಿಂದ ಶನಿದೇವನ ಕೋಪದಿಂದ ತಪ್ಪಿಸಿಕೊಳ್ಳಬಹುದು.
ಶನಿಯ ನೆರಳು ಈ ಜನರ ಮೇಲೆ ಬೀಳುವುದಿಲ್ಲ
ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಇಂತಹ ಕೆಲವು ಜನರ ಬಗ್ಗೆ ಹೇಳಲಾಗಿದೆ. ಇವರ ಮೇಲೆ ಶನಿಯು ಎಂದಿಗೂ ಕೆಟ್ಟ ಛಾಯೆಯನ್ನು ಹೊಂದಿರುವುದಿಲ್ಲ. ಇದರ ಹಿಂದಿನ ವಿಶೇಷ ಕಾರಣಗಳನ್ನು ಸಹ ನೀಡಲಾಗಿದೆ. ಈ ಜನರು ಶಿವದೇವ ಮತ್ತು ದೇವತೆಗಳ ಭಕ್ತರಾಗಿದ್ದಾರೆ. ಶಿವನನ್ನು ಕಂಡರೆ ಶನಿ ದೇವ ಕೂಡ ಹೆದರುತ್ತಾನೆ. ಆದ್ದರಿಂದ ಶನಿದೇವ ಎಂದಿಗೂ ಆ ದೇವರ ಭಕ್ತರ ಮೇಲೆ ತನ್ನ ಕಣ್ಣು ಹಾಯಿಸುವುದಿಲ್ಲ.
ಶನಿದೇವನಿಗೆ ಏಕೆ ಭಯ..?
ಭಗವಾನ್ ಶಿವನು ಶನಿಯ ಅಸಮಾಧಾನದಿಂದ ಪಾರಾಗಲು ಸಾಧ್ಯವಾಗದಿದ್ದರೂ ಶನಿ ದೇವ(Shani Dev) ಆ ದೇವರಿಗೆ ಭಯಪಡಲು 4 ಮುಖ್ಯ ವಿಷಯಗಳಿವೆ.
ಭಗವಾನ್ ಹನುಮಾನ್: ಶನಿದೇವನು ಹನುಮಂತನ(Lord Hanuman) ಭಕ್ತರ ಮೇಲೆ ಎಂದಿಗೂ ಕೆಟ್ಟ ದೃಷ್ಟಿಯನ್ನು ಬೀರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಶನಿಯು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಹನುಮಂತನನ್ನು ಪೂಜಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ವಾಸ್ತವವಾಗಿ ಪುರಾಣಗಳ ಪ್ರಕಾರ ಹನುಮಂತನು ಶನಿ ದೇವನನ್ನು ರಾವಣನ ಸೆರೆಯಿಂದ ಮುಕ್ತಗೊಳಿಸಿದನು. ಈ ಕಾರಣಕ್ಕಾಗಿ ಶನಿದೇವನು ಯಾವಾಗಲೂ ಹನುಮಂತನ ಭಕ್ತರ ಮೇಲೆ ಅನುಗ್ರಹವನ್ನು ನೀಡುತ್ತಾನೆ.
ಇದನ್ನೂ ಓದಿ: Health Tips: ಕಷಾಯ ಮಾಡುವಾಗ ಈ ತಪ್ಪನ್ನು ಮಾಡಲೇಬೇಡಿ, ಏನೆಂದು ತಿಳಿಯಿರಿ..!
ಅರಳಿ ಮರ(Peepal Tree): ಶನಿಯ ಅಶುಭ ಪರಿಣಾಮವನ್ನು ಕಡಿಮೆ ಮಾಡಲು ಅರಳಿ ಮರಕ್ಕೆ ಸಂಬಂಧಿಸಿದ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಋಷಿ ಪಿಪ್ಲಾದ (Pippalada)ಪೋಷಕರು ಬಾಲ್ಯದಲ್ಲಿಯೇ ತೀರಿಕೊಂಡಿರುವುದೇ ಇದಕ್ಕೆ ಕಾರಣ. ಅವನು ದೊಡ್ಡವನಾದ ಮೇಲೆ ಶನಿಯ ಮಹಾದಶದಿಂದ ತಂದೆ ತಾಯಿ ತೀರಿಕೊಂಡಿರುವುದು ತಿಳಿಯಿತು. ಇದನ್ನು ತಿಳಿದ ಪಿಪ್ಲಾದನು ಬಹಳ ಕೋಪಗೊಂಡನು ಮತ್ತು ಬ್ರಹ್ಮನನ್ನು ಮೆಚ್ಚಿಸಲು ಅರಳಿ ಮರದ ಕೆಳಗೆ ಕುಳಿತು ಕಠಿಣ ತಪಸ್ಸು ಮಾಡಿದನು. ಬ್ರಹ್ಮನು ವರವನ್ನು ಕೇಳುವಂತೆ ಹೇಳಿದಾಗ ಪಿಪ್ಲಾದ ಬ್ರಹ್ಮದಂಡವನ್ನು ಕೇಳಿದನು. ಬಳಿಕ ಶನಿ ಅರಳಿ ಮರದಡಿ ಕುಳಿತಿದ್ದ ಶನಿದೇವನ ಮೇಲೆ ಬ್ರಹ್ಮದಂಡದಿಂದ ಆಕ್ರಮಣ ಮಾಡಿದನು. ಇದರಿಂದ ಶನಿಯ ಕಾಲುಗಳು ಮುರಿಯುತ್ತವೆ. ಶನಿಯು ಪಿಪ್ಲಾದ ಮತ್ತು ಅರಳಿ ಮರಗಳಿಗೆ ಭಯಪಡಲು ಇದು ಕಾರಣವಾಯಿತು.
ಭಗವಾನ್ ಶಿವ: ಪುರಾಣಗಳ ಪ್ರಕಾರ ಒಮ್ಮೆ ಶಿವ(Lord Shiva)ನು ಶನಿದೇವನೊಂದಿಗೆ ಹೋರಾಡಬೇಕಾಯಿತು. ನಂತರ ಶನಿಯು ಶಿವನ ಮೇಲೆ ಮಾರಣಾಂತಿಕ ದೃಷ್ಟಿಯನ್ನು ಬೀರುತ್ತಾನೆ. ಆಗ ಶಿವನು ತನ್ನ 3ನೇ ಕಣ್ಣನ್ನು ತೆರೆದು ಶನಿಗೆ ತನ್ನ ಶಕ್ತಿಯ ಪ್ರದರ್ಶನ ಮಾಡಿದನು. ಆದ್ದರಿಂದಲೇ ಶಿವನನ್ನು ಕಂಡರೆ ಶನಿಯು ಭಯಪಡಲು ಪ್ರಾರಂಭಿಸಿದನು.
ಇದನ್ನೂ ಓದಿ: Blue Sapphire Benefits: ಈ ರತ್ನ ಧರಿಸಿದರೆ ಭಾಗ್ಯ ಬದಲಾವಣೆ, ಶನಿ-ಮಂಗಳರ ಕೃಪೆ ನಿಮ್ಮ ಮೇಲೆ ಇರಲಿದೆ
ಪತ್ನಿ ಚಿತ್ರರಥ: ಸಾಮಾನ್ಯ ಜನರಂತೆ ಶನಿ ದೇವ ಕೂಡ ಪತ್ನಿ ಚಿತ್ರರಥಕ್ಕೆ ಹೆದರುತ್ತಾನಂತೆ. ಒಮ್ಮೆ ಶನಿದೇವನ ಪತ್ನಿ ಚಿತ್ರರಥ ತನ್ನ ಸಂತಾನ ಹೊಂದುವ ಆಸೆಯಿಂದ ಆತನ ಬಳಿಗೆ ಬಂದಳು. ಆದರೆ ಶ್ರೀಕೃಷ್ಣನ ಭಕ್ತಿಯಲ್ಲಿ ಮಗ್ನನಾದ ಶನಿಯು ಆಕೆಯತ್ತ ಗಮನ ಹರಿಸಲಿಲ್ಲ ಎಂಬ ಕಥೆಯೂ ಇದರ ಹಿಂದೆ ಇದೆ. ಆಗ ಚಿತ್ರರಥ ಕೋಪಗೊಂಡು ಶನಿಗೆ ಶಪಿಸಿದಳು. ಅಂದಿನಿಂದ ಶನಿಯ ಕಣ್ಣುಗಳು ವಕ್ರವಾದವು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.