Shani: ಶನಿದೇವನನ್ನು ಮೆಚ್ಚಿಸಲು ಮುಂಜಾನೆ ಈ ಸಣ್ಣಪುಟ್ಟ ಕೆಲಸ ಮಾಡಿದರಷ್ಟೇ ಸಾಕು!
Shani: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶನಿ ದೇವನು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಈ ಕಾರಣದಿಂದಲೇ ಅವರನ್ನು ಕರ್ಮದಾತ ಎಂದು ಕರೆಯುತ್ತಾರೆ. ಉದ್ಯೋಗದೊಂದಿಗೆ ಶನಿದೇವನ ನೇರ ಸಂಬಂಧವಿದೆ ಎಂದು ನಂಬಲಾಗಿದೆ.
Shani: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನಿಗೂ ಮಾನವನ ಕರ್ಮ ಮತ್ತು ಜೀವನೋಪಾಯದೊಂದಿಗೆ ನೇರ ಸಂಬಂಧವಿದೆ. ಶನಿಯ ಆಶೀರ್ವಾದವಿಲ್ಲದೆ ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗೆಯೇ ಶನಿದೇವನ ಕೃಪೆಯಿಲ್ಲದೆ ಮದುವೆ ಆಗಲಿ ಮಕ್ಕಳಾಗಲಿ ಆಗುವುದಿಲ್ಲ ಎನ್ನಲಾಗುತ್ತದೆ. ಇದಲ್ಲದೆ, ಶನಿ ದೇವನು (Shani Deva) ವ್ಯಕ್ತಿಗೆ ಭೌತಿಕ ಸಂತೋಷ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸಹ ಒದಗಿಸುತ್ತಾನೆ. ಶನಿದೇವನು ಪ್ರಸನ್ನನಾದರೆ ಎಲ್ಲಾ ಶುಭ ಕಾರ್ಯಗಳು ಯಾವುದೇ ತೊಡಕಿಲ್ಲದೆ ನಡೆಯುತ್ತವೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶನಿ ದೇವರನ್ನು ಮೆಚ್ಚಿಸಲು ಏನು ಮಾಡಬೇಕು ಎಂದು ತಿಳಿಯೋಣ...
ಶನಿದೇವನನ್ನು ಮೆಚ್ಚಿಸಲು ಏನು ಮಾಡಬೇಕು?
ಶನಿ ದೇವನನ್ನು ಮೆಚ್ಚಿಸಲು, ಸೂರ್ಯೋದಯಕ್ಕೆ ಮೊದಲು ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು ಎಂದು ನಂಬಲಾಗಿದೆ. ಸೂರ್ಯೋದಯಕ್ಕೂ ಮುನ್ನ ಅರಳಿ ಮರಕ್ಕೆ ನೀರು ಅರ್ಪಿಸುವ ವ್ಯಕ್ತಿಯ ಮೇಲೆ ಶನಿಯ ಮಹಾದಶಾ (Shani Mahadasha) ಪರಿಣಾಮ ಬೀರುವುದಿಲ್ಲ ಎಂದು ಹಲವು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಬ್ರಹ್ಮದೇವನು ಈ ವರವನ್ನು ನೀಡಿದನೆಂದು ಹೇಳಲಾಗುತ್ತದೆ.
ಇದನ್ನೂ ಓದಿ- ಏಪ್ರಿಲ್ ನಲ್ಲಿ ಈ ರಾಶಿಯವರ ಮೇಲೆ ಬೀಳಲಿದೆ ಶನಿಯ ವಕ್ರ ದೃಷ್ಟಿ
ಮಹರ್ಷಿ ದಧೀಚಿಯ ಮಗನಾದ ಪಿಪ್ಪಲಾದನು ಒಮ್ಮೆ ಬ್ರಹ್ಮನಿಗಾಗಿ ತೀವ್ರ ತಪಸ್ಸು ಮಾಡಿದನು. ಪಿಪ್ಪಲಾದನ ತಪಸ್ಸಿನಿಂದ ಸಂತುಷ್ಟನಾದ ಬ್ರಹ್ಮನು ಅವನಿಗೆ ವರವನ್ನು ಕೇಳುವಂತೆ ಕೇಳಿದನು. ಬ್ರಹ್ಮದೇವನು, ಪಿಪ್ಪಲಾದನ ಆಸೆಯನ್ನು ಪೂರೈಸಿ, ಅವನ ದೃಷ್ಟಿಯಲ್ಲಿ ಇತರ ಜೀವಿಗಳನ್ನು ಸುಡುವಂತ ವರವನ್ನು ಆಶೀರ್ವದಿಸಿದನು. ಅಂತಹ ವರವನ್ನು ಪಡೆದ ನಂತರ ಪಿಪ್ಪಲಾದ ಶನಿ ದೇವನನ್ನೇ (Shani Deva) ಕಾಡಿದ್ದ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಈ ರಾಶಿಯವರಿಗೆ ಭಾರೀ ಅದೃಷ್ಟ ಕರುಣಿಸಲಿದ್ದಾನೆ ಶನಿ ಮಹಾತ್ಮ .!
ಶನಿಯ ಮಹಾದಶ ಮಕ್ಕಳ ಮೇಲೆ ಏಕಿರುವುದಿಲ್ಲ?
ಶನಿಯ ಮಹಾದಶಾದಿಂದಾಗಿ ಪಿಪ್ಪಲಾದನು ತನ್ನ ಬಾಲ್ಯದಲ್ಲಿಯೇ ತಂದೆ-ತಾಯಿಯಿಂದ ದೂರವಾಗಿ ಅನಾಥನಾದನು ಎಂದು ಹೇಳಲಾಗುತ್ತದೆ. ಇದರ ಕಾರಣವನ್ನರಿತ ಪಿಪ್ಪಲಾದನು ಬ್ರಹ್ಮದೇವನಿಂದ ವರ ಪಡೆದು ಶನಿ ದೇವನನ್ನೂ ಕಾಡತೊಡಗಿದ್ದನು. ಈ ಸ್ಥಿತಿಯನ್ನು ಕಂಡ ಬ್ರಹ್ಮದೇವನು ಪಿಪ್ಪಲಾದನನ್ನು ತಡೆದು ಈ ವರದ ಬದಲಿಗೆ ಬೇರೆ ವರವನ್ನು ಕೇಳುವಂತೆ ಕೇಳಿದರು. ಆಗ ಪಿಪ್ಪಲಾದನು 12 ವರ್ಷಕ್ಕೂ ಕಡಿಮೆ ವಯಸ್ಸಿನ ಯಾರನ್ನೂ ಶನಿ ಕಾಡುವಂತಿಲ್ಲ ಎಂಬ ವರವನ್ನು ಪಡೆದನು. ಹಾಗಾಗಿಯೇ, ಶನಿ ವಕ್ರದೃಷ್ಟಿ, ಶನಿ ಮಹಾದಶದಿಂದ ಪಾರಾಗಲು ಜನರು ಶಿವನ ಈ ರೂಪವನ್ನು ಪ್ರಾರ್ಥಿಸುತ್ತಾರೆ ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.