ನವದೆಹಲಿ: ಶನಿ ದೇವನು ಯಾವುದೇ ಒಬ್ಬ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಸಾರ ಫಲವನ್ನು ನೀಡುತ್ತಾನೆ. ಸದ್ಯ ಶನಿದೇವ ಮಕರ ರಾಶಿಯಲ್ಲಿದೆ. ಆದರೆ 10 ದಿನಗಳ ನಂತರ ಶನಿಯು ಮತ್ತೊಂದು ರಾಶಿಯಲಿ ಸಾಗಲಿದೆ. 2023ರ ಜನವರಿ 17ರಂದು ಶನಿಯು ಮಕರ ರಾಶಿ ತೊರೆದು ಕುಂಭ ರಾಶಿಯಲ್ಲಿ ಸಾಗಲಿದೆ. 2025ರವರೆಗೆ ಶನಿದೇವ ಇಲ್ಲಿಯೇ ಇರಲಿದೆ.


COMMERCIAL BREAK
SCROLL TO CONTINUE READING

ಈ ಕಾರಣದಿಂದ ಕೆಲವು ರಾಶಿಗಳಿಗೆ ಶನಿಯ ಸಾಡೇ ಸಾತಿ ಅಥವಾ ಶನಿ ಧೈಯಾ ಕೊನೆಗೊಳ್ಳುತ್ತದೆ ಮತ್ತು ಕೆಲವರಿಗೆ ಇದು ಪ್ರಾರಂಭವಾಗಲಿದೆ. ಆದರೆ ಅತ್ಯಂತ ಅಪಾಯಕಾರಿ ಎನ್ನಲಾದ ಶನಿಯ ಸಾಡೇ ಸಾತಿಯ 2ನೇ ಹಂತ ಪ್ರಾರಂಭವಾಗುವ ರಾಶಿಗಳಿವೆ. ಇದರಿಂದ ಈ ರಾಶಿಯ ಜನರು ಮುಂದಿನ ದಿನಗಳಲ್ಲಿ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.  


ಇದನ್ನೂ ಓದಿ: Astrology: ಮಹಾವಿಷ್ಣುವಿಗೆ ಬಹಳ ಪ್ರಿಯವಂತೆ ಈ ರಾಶಿಯ ಜನರು: ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ!


ಕುಂಭ ರಾಶಿ: ಕುಂಭ ರಾಶಿಯಲ್ಲಿ ಶನಿ ಸಂಕ್ರಮಣದಿಂದ ಈ ರಾಶಿಯವರಿಗೆ 2ನೇ ಹಂತದ ಸಾಡೇ ಸಾತಿ ಪ್ರಾರಂಭವಾಗುತ್ತದೆ. ಸಾಡೇ ಸಾತಿ 2ನೇ ಹಂತವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಾನೆಂದು ಹೇಳಲಾಗಿದೆ.


ಏಕಾಗ್ರತೆಯ ಮೇಲೆ ಪರಿಣಾಮ


ಕುಂಭ ರಾಶಿಯ ಬಗ್ಗೆ ಹೇಳುವುದಾದರೆ ಸಾಡೇ ಸಾತಿಯ 2ನೇ ಹಂತವು ಏಕಾಗ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಪರೀಕ್ಷೆ-ಸಂದರ್ಶನಕ್ಕೆ ತಯಾರಿ ನಡೆಸುತ್ತಿರುವ ಜನರು ಗುರಿಯಿಂದ ವಿಮುಖರಾಗಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು, ಇದು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವಿವಾಹಿತರಿಗೆ ಮದುವೆ ಭಾಗ್ಯ ದೊರೆಯಲು ಹೆಚ್ಚು ಸಮಯ ಕಾಯಬೇಕಾಗಬಹುದು. ಇದು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.


ಇದನ್ನೂ ಓದಿ: Samudrika Shastra :ಈ ರೀತಿಯ ಅಂಗಗಳಿರುವ ಮಹಿಳೆಯರು ಗಂಡನಿಗೆ ಮೋಸ ಮಾಡುತ್ತಾರಂತೆ!


ಕೆಟ್ಟ ಪರಿಸ್ಥಿತಿ


ಶನಿಯು ಕುಂಭ ರಾಶಿಯ ಅಧಿಪತಿಯಾಗಿರುವುದರಿಂದ ಈ ಸಮಯವು ಅವರಿಗೆ ನೋವನ್ನುಂಟುಮಾಡುವುದಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ ಲಾಭವನ್ನು ಸಹ ಪಡೆಯುತ್ತಾರೆ. ಸಾಡೇ ಸಾತಿ ಅಥವಾ ಧೈಯಾ ಸಮಯದಲ್ಲಿ ಶನಿದೇವ ಯಾರ ಜಾತಕದಲ್ಲಿ ಅಶುಭ ಸ್ಥಿತಿಯಲ್ಲಿರುತ್ತದೋ ಅಂತಹ ಜನರಿಗೆ ಗರಿಷ್ಠ ತೊಂದರೆ ನೀಡುತ್ತಾನೆ.


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.