ಇಂದಿನಿಂದ ಬದಲಾಗಲಿದೆ ಈ ಮೂರು ರಾಶಿಯವರ ಅದೃಷ್ಟ , ಪ್ರತಿ ಕೆಲಸದಲ್ಲೂ ಯಶಸ್ಸು ನೀಡಲಿದ್ದಾನೆ ಶನಿ ಮಹಾತ್ಮ
ಈ 6 ತಿಂಗಳುಗಳಲ್ಲಿ 3 ರಾಶಿಯವರ ಮೇಲೆ ಶನಿಯ ಕೃಪೆ ಬಹಳವಾಗಿರುತ್ತದೆ. ಈ ಮೂರು ರಾಶಿಯವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ನೀಡಲಿದ್ದಾನೆ. ಜೊತೆಗೆ ಸಾಕಷ್ಟು ಹಣವನ್ನು ಕೂಡಾ ಕರುಣಿಸಲಿದ್ದಾನೆ.
ಬೆಂಗಳೂರು : ಶನಿಯು ಎರಡೂವರೆ ವರ್ಷಗಳ ಕಾಲ ಪ್ರತಿಯೊಂದು ರಾಶಿಯಲ್ಲೂ ಇರುತ್ತಾನೆ. ನವಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವೆಂದರೆ ಶನಿ ಗ್ರಹ. ಇದೀಗ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಶನಿಗ್ರಹವು ಇಂದು ಹಿಮ್ಮುಖವಾಗಿಯೇ ಮಕರ ರಾಶಿ ಪ್ರವೇಶಿಸಲಿದ್ದಾನೆ. ನಂತರ ಅಕ್ಟೋಬರ್ 2022 ರವರೆಗೆ ಮಕರ ರಾಶಿಯಲ್ಲಿ ಹಿಮ್ಮುಖವಾಗಿಯೇ ಚಲಿಸುತ್ತಿರುತ್ತಾನೆ. ಅಕ್ಟೋಬರ್ ನಂತರ ಮತ್ತೆ ಶನಿಯ ನೇರ ಚಲನೆ ಆರಂಭವಾಗಲಿದೆ. ಶನಿಯು ಜನವರಿ 2023 ರವರೆಗೆ ಮಕರ ರಾಶಿಯಲ್ಲಿರುಲಿದ್ದಾನೆ. ಈ 6 ತಿಂಗಳುಗಳಲ್ಲಿ 3 ರಾಶಿಯವರ ಮೇಲೆ ಶನಿಯ ಕೃಪೆ ಬಹಳವಾಗಿರುತ್ತದೆ. ಈ ಮೂರು ರಾಶಿಯವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ನೀಡಲಿದ್ದಾನೆ. ಜೊತೆಗೆ ಸಾಕಷ್ಟು ಹಣವನ್ನು ಕೂಡಾ ಕರುಣಿಸಲಿದ್ದಾನೆ.
3 ರಾಶಿಯವರ ಮೇಲೆ 6 ತಿಂಗಳು ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ :
ವೃಷಭ ರಾಶಿ: ಶನಿ ಸಂಕ್ರಮವು ವೃಷಭ ರಾಶಿಯವರಿಗೆ ಬಹಳ ಅದ್ಭುತವಾಗಿರುತ್ತದೆ. ತಮ್ಮ ವೃತ್ತಿಜೀವನದಲ್ಲಿ ಭಾರೀ ಯಶಸ್ಸು ಸಿಗಲಿದೆ. ದೊಡ್ಡ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹೊಸ ಉದ್ಯೋಗ ದೊರೆಯಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.
ಇದನ್ನೂ ಓದಿ : Guru Purnima 2022 Daan: ಗುರು ಪೂರ್ಣಿಮಾ ದಿನ ರಾಶಿಗೆ ಅನುಗುಣವಾಗಿ ದಾನ ಮಾಡಿ, ಇಷ್ಟಾರ್ಥಗಳು ನೆರವೇರುತ್ತವೆ
ಧನು ರಾಶಿ : ಮಕರ ರಾಶಿಯಲ್ಲಿ ಶನಿಯ ಸಂಚಾರವು ಧನು ರಾಶಿಯವರಿಗೆ ಬಹಳಷ್ಟು ಹಣವನ್ನು ನೀಡುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಅನೇಕ ರೀತಿಯಲ್ಲಿ ಹಣ ಹರಿದು ಬರಲಿದೆ. ಹೂಡಿಕೆಗೆ ಇದು ಉತ್ತಮ ಸಮಯ. ಹಳೆಯ ಹೂಡಿಕೆಗಳಿಂದಲೂ ಬಲವಾದ ಆದಾಯ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗುತ್ತದೆ. ವ್ಯಾಪಾರವನ್ನು ಹೆಚ್ಚಿಸಲು ಸಹ ಇದು ಉತ್ತಮ ಸಮಯ.
ಮೀನ: ಹಿಮ್ಮುಖವಾಗಿ ಚಲಿಸುವ ಶನಿಯ ರಾಶಿಯ ಬದಲಾವಣೆಯು ಮೀನ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಇರುತ್ತದೆ. ಈ ಬಾರಿ ಬಡ್ತಿ-ಹಣ-ಪ್ರತಿಷ್ಠೆ ಎಲ್ಲವನ್ನೂ ಸಿಗಲಿದೆ.
ಇದನ್ನೂ ಓದಿ : Numerology: ಈ ದಿನಾಂಕದಂದು ಜನಿಸಿದ ಹುಡುಗಿಯರು ತಮ್ಮ ತಂದೆಗೆ ಅದೃಷ್ಟವಂತರು..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ