ಬೆಂಗಳೂರು : ಜೂನ್ 5 ರಂದು ಶನಿಯ  ಹಿಮ್ಮುಖ ಚಲನೆ ಆರಂಭವಾಗಿದೆ.  ಅದಕ್ಕೂ ಮೊದಲು ಏಪ್ರಿಲ್ 29 ರಂದು ಶನಿಯು ತನ್ನ ರಾಶಿಯನ್ನು ಬದಲಾಯಿಸಿದ್ದನು.  ಶನಿಯು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದನು. ಶನಿಯು 2024 ರವರೆಗೆ ಕುಂಭ ರಾಶಿಯಲ್ಲಿ ಉಳಿಯಲಿದ್ದಾನೆ. ಆದರೆ, ಈ ಮಧ್ಯೆ, ಕೆಲವು ತಿಂಗಳುಗಳವರೆಗೆ, ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಆದರೆ ಸ್ಥೂಲವಾಗಿ ಹೇಳುವುದಾದರೆ, ಕುಂಭ ರಾಶಿಯಲ್ಲಿ ಶನಿಯ ಸಂಚಾರವು 3 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ 3 ರಾಶಿಯವರಿಗೆ 2024 ರವರೆಗೆ ಪ್ರತಿ ಹಂತದಲ್ಲಿಯೂ ಲಾಭ ಗಳಿಸಲಿದ್ದಾರೆ. ಈ ಸಮಯದಲ್ಲಿ, ಮೂರು ರಾಶಿಯವರು ಬಹಳಷ್ಟು ಹಣವನ್ನು ಗಳಿಸುತ್ತಾರೆ. ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ.  


COMMERCIAL BREAK
SCROLL TO CONTINUE READING

3 ರಾಶಿಯವರ ಮೇಲಿರಲಿದೆ ಶನಿ ದೇವನ ಕೃಪೆ : 
ಮೇಷ: ಶನಿಯ ಸಂಚಾರವು ಮೇಷ ರಾಶಿಯವರಿಗೆ ಸಾಕಷ್ಟು ಲಾಭಗಳನ್ನು ನೀಡುತ್ತದೆ. ಅವರ ಆದಾಯ ಹೆಚ್ಚಾಗುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗುತ್ತದೆ. ಉದ್ಯಮಿಗಳ ಲಾಭ ಹೆಚ್ಚಾಗುತ್ತದೆ. ಅನೇಕ ಹೊಸ ಮಾರ್ಗಗಳಿಂದ ಆದಾಯ ಬರುತ್ತದೆ. ಉದ್ಯೋಗ ಬದಲಾಯಿಸಲು ಇಚ್ಛಿಸುವವರು ಹೊಸ ಉದ್ಯೋಗಗಳನ್ನು ಪಡೆಯಬಹುದು. ನೀಲಿ ರತ್ನವನ್ನು ಧರಿಸುವುದು ಮತ್ತು ಶನಿಗೆ ಸಂಬಂಧಿಸಿದ ಪರಿಹಾರ ಕಾರ್ಯಗಳನ್ನು ಅನುಸರಿಸುವುದರಿಂದ ಲಾಭಡ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬಹುದು. 


ಇದನ್ನೂ ಓದಿ : Rahu Ketu: ಅಡುಗೆಮನೆಯಲ್ಲಿ ರಾಹು-ಕೇತು ಪ್ರಭಾವ- ಸ್ವಲ್ಪ ಅಜಾಗರೂಕತೆಯೂ ಭಾರವಾಗಬಹುದು


ವೃಷಭ ರಾಶಿ: ವೃಷಭ ರಾಶಿಯವರಿಗೆ 2024 ರವರೆಗಿನ ಸಮಯವು ಅತ್ಯುತ್ತಮವಾಗಿರುತ್ತದೆ. ಶನಿಯು ಕರ್ಮ ಕ್ಷೇತ್ರದ ಮನೆಯಲ್ಲಿ ಸಂಕ್ರಮಿಸುತ್ತಾನೆ.  ಇದರಿಂದಾಗಿ ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಇಲ್ಲಿಯವರೆಗೆ ವೃತ್ತಿಯಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಪ್ರತಿಷ್ಠೆ ಹೆಚ್ಚಲಿದೆ. 


ಧನು ರಾಶಿ : ಶನಿಯ ಸಂಕ್ರಮವು ಧನು ರಾಶಿಯವರಿಗೆ ವರದಾನವಾಗಿರಲಿದೆ. ಈ ರಾಶಿಯವರು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಗಳಿಸುತ್ತಾರೆ. ಧೈರ್ಯ, ಶೌರ್ಯ ಮತ್ತು ಆತ್ಮವಿಶ್ವಾಸವು ಅಧಿಕವಾಗಿರುತ್ತದೆ. ಇದು ಈ ರಾಶಿಯವರ ಎಲ್ಲಾ  ಕೆಲಸದಲ್ಲಿಯೂ ಯಶಸ್ಸು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕ ಗೌರವ ಸಿಗುತ್ತದೆ.   ಶತ್ರುಗಳ ವಿರುದ್ದ ಗೆಲುವು ಸಾಧಿಸುತ್ತೀರಿ. 


ಇದನ್ನೂ ಓದಿ : Rahu Gochar 2022: ರಾಹು ನಕ್ಷತ್ರ ಬದಲಾವಣೆ ಪರಿಣಾಮ ಈ ರಾಶಿಯವರಿಗೆ ಹಣದ ಸುರಿಮಳೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.