Shani Dev: ಈ ಜನರಿಗೆ ಶನಿ ಎಂದಿಗೂ ಕಾಟ ಕೊಡುವುದಿಲ್ಲ, ಕಾರಣ ಇಲ್ಲಿದೆ
Shani Dev: ಶನಿ ದೇವ ಯಾವಾಗಲು ಕೆಟ್ಟ ಫಲಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ, ಅದು ಸರಿಯಾದ ವಿಧಾನವಲ್ಲ. ಏಕೆಂದರೆ, ಶನಿ ದೇವ ಮಕರ ಹಾಗೂ ಕುಂಭ ರಾಶಿಗಳಿಗೆ ಸ್ವಾಮಿ ಗ್ರಹ. ಈ ಎರಡೂ ರಾಶಿಗಳನ್ನು ಹೊರತುಪಡಿಸಿ ಮತ್ತೊಂದು ರಾಶಿಗೆ ಶನಿಗೆ ತುಂಬಾ ಇಷ್ಟವಾದ ರಾಶಿ ಎಂದು ಹೇಳಲಾಗುತ್ತದೆ.
Shani Dev: ನವಗ್ರಹಗಳಲ್ಲಿ ಶನಿ ದೇವನ ಸ್ಥಾನ ತುಂಬಾ ವಿಶೇಷವಾಗಿದೆ. ಶನಿಯ ನೆರಳು, ಶನಿಯ ದೃಷ್ಠಿ, ಶನಿಯ ದೆಸೆ, ಸಾಡೇ ಸಾತಿ ಹಾಗೂ ಶನಿಯ ಎರಡೂವರೆ ವರ್ಷಗಳ ಕಾಟಕ್ಕೆ ಮನುಷ್ಯರೇ ಅಲ್ಲ, ದೇವತೆಗಳು ಕೂಡ ಹೆದರುತ್ತಾರೆ. ಶನಿ ಚಾಲಿಸಾದಿಂದಲೂ ಕೂಡ ಇದು ಸಾಬೀತಾಗುತ್ತದೆ.
ಪೌರಾಣಿಕ ಗ್ರಂಥಗಳ ಪ್ರಕಾರ ದೇವಾದಿದೇವ ಮಹಾದೇವನಿಗೂ ಕೂಡ ಶನಿಯ ಪ್ರಕೋಪ ಎದುರಿಸಬೇಕಾಯಿತು ಎನ್ನಲಾಗಿದೆ. ಶನಿಯ ನೆರಳಿನಿಂದ ತಪ್ಪಿಸಿಕೊಳ್ಳಲು ಶಿವ ಆನೆಯ ರೂಪ ಧರಿಸಿದ್ದ ಎನ್ನಲಾಗುತ್ತದೆ. ಅಂದರೆ, ಶಿವನಿಗೆ ದೇವ ಯೋನಿಯನ್ನು ತೊರೆದು ಪ್ರಾಣಿಗಳ ಯೋನಿ ಪ್ರವೇಶಿಸಬೇಕಾಯಿತು ಎನ್ನಲಾಗುತ್ತದೆ. ಶನಿಯ ಪ್ರಭಾವ ಈ ರೀತಿ ಇರುತ್ತದೆ.
ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಎರಡು ರಾಶಿಗಳಿಗೆ ಅಧಿಪತಿ. ಮಕರ ಹಾಗೂ ಕುಂಭ ರಾಶಿಗಳಿಗೆ ಶನಿ ಸ್ವಾಮಿ. ಇದಲ್ಲದೆ ತುಲಾ ರಾಶಿಯನ್ನು ಶನಿಯ ಉಚ್ಛ ರಾಶಿ ಹಾಗೂ ಮೇಷ ರಾಶಿಯನ್ನು ಶನಿಯ ನೀಚ ರಾಶಿ ಎಂದು ಪರಿಗಣಿಸಲಾಗುತ್ತದೆ.
ಶನಿಯ ನೆಚ್ಚಿನ ರಾಶಿ
ಜೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯನ್ನು ಶನಿಯ ನೆಚ್ಚಿನ ರಾಶಿ ಎಂದು ಕರೆಯಲಾಗುತ್ತದೆ. ತುಲಾ ರಾಶಿಯ ಜಾತಕದವರಿಗೆ ಶನಿ ಕೇವಲ ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ ತೊಂದರೆ ನೀಡುತ್ತಾನೆ ಎನ್ನಲಾಗುತ್ತದೆ. ತಪ್ಪು ಅಥವಾ ಅನೈತಿಕ ಕೆಲಸಗಳನ್ನು ಮಾಡಿದರೆ ಮಾತ್ರ ಈ ರಾಶಿಯ ಜನರಿಗೆ ಶನಿ ಕಷ್ಟ ಕೊಡುತ್ತಾನೆ. ಇದಲ್ಲದೆ, ತುಲಾ ರಾಶಿಯ ಜನರಿಗೆ ಶನಿ ಸುಲಭವಾಗಿ ಸಫಲತೆಯನ್ನು ದಯಪಾಲಿಸುತ್ತಾನೆ. ಹೀಗಾಗಿ ಧೈರ್ಯದಿಂದಿರಿ ಹಾಗೂ ಪರಿಶ್ರಮಕ್ಕೆ ಹಿಂಜರಿಯಬೇಡಿ.
ಇದನ್ನೂ ಓದಿ-New Year 2023: ಅತ್ಯಂತ ಶುಭಯೋಗದಲ್ಲಿ ಹೊಸ ವರ್ಷದ ಆರಂಭ, ನೌಕರಿ-ವ್ಯಾಪಾರದಲ್ಲಿ ಯಶಸ್ಸಿಗಾಗಿ ಈ ಉಪಾಯ ಮಾಡಿ
ಶನಿಯನ್ನು ಹೇಗೆ ಪ್ರಸನ್ನಗೊಳಿಸಬೇಕು?
ಶನಿಯನ್ನು ಪ್ರಸನ್ನಗೊಳಿಸಲು ನಿಯಮ, ಶಿಸ್ತನ್ನು ಪಾಲಿಸಬೇಕು. ಸೋಮಾರಿತನದಿಂದ ದೂರವಿರಿ ಹಾಗೂ ಅಗತ್ಯವಿರುವವರಿಗೆ ಹಾಗೂ ನಿರ್ಗತಿಕರಿಗೆ ಆಗ್ಗಾಗ ನೆರವು ನೀಡಿ. ಇತರರಿಗೆ ಸಹಾಯ ಮಾಡುವ ಹಾಗೂ ಕಷ್ಟದಲ್ಲಿರುವವರಿಗೆ ಸ್ಪಂದಿಸುವವರರಿಗೆ ಶನಿ ಎಂದಿಗೂ ಕೂಡ ಸತಾಯಿಸುವುದಿಲ್ಲ.
ಇದನ್ನೂ ಓದಿ-Astro Tips: ದೀರ್ಘ ಸುಮಂಗಲಿಯರು ಈ ದಿನ ಕೂದಲುಗಳನ್ನು ತೊಳೆದರೆ ಅತ್ಯಂತ ಶುಭಕರ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.