People Of These Zodiac Signs Should Wear Silver: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಲೋಹಗಳನ್ನು ಕೆಲವು ಗ್ರಹಗಳಿಗೆ ಸಮಾನ ಎಂದು ಹೇಳಲಾಗುತ್ತದೆ. ಬೆಳ್ಳಿಯನ್ನು ಚಂದ್ರನಿಗೆ, ಕಬ್ಬಿಣವನ್ನು ಶನಿಗೆ ಮತ್ತು ಚಿನ್ನವನ್ನು ಗುರುವಿನ ಲೋಹವೆಂದು ಪರಿಗಣಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ರಾಶಿಚಕ್ರದ 12 ರಾಶಿಗಳಲ್ಲಿ ಕೆಲವು ಶಾಂತ ಸ್ವಭಾವ ಹೊಂದಿದ್ದರೆ, ಇನ್ನೂ ಕೆಲವು ಉಗ್ರ ಅಂಶವನ್ನು ಹೊಂದಿರುತ್ತದೆ. ಒಂದು ವೇಳೆ ನಿಮ್ಮ ಗ್ರಹ ಉಗ್ರವಾಗಿದ್ದರೆ ಬೆಳ್ಳಿ ಸಹವಾಸಕ್ಕೇ ಹೋಗಬಾರದು. ಶಾಂತ ಗ್ರಹವಾಗಿದ್ದರೆ ಮಾತ್ರ ಬೆಳ್ಳಿಯನ್ನು ಧರಿಸಬೇಕು.


ಇದನ್ನೂ ಓದಿ: ಈ ಡೇಟ್‌​ನಲ್ಲಿ ಹುಟ್ಟಿದ ಜನರಷ್ಟು ಅದೃಷ್ಟವಂರು ಜಗತ್ತಲ್ಲಿ ಬೇರಾರು ಇರಲ್ಲ; ಹೆಣ್ಣಾಗಿದ್ರಂತೂ... ಹುಟ್ಟಿದ-ಮೆಟ್ಟಿದ ಎರಡೂ ಮನೆಗೂ ಲಕ್ಷ್ಮೀ ಅವತಾರವಾಗಿ ಸದಾ ಇರುವರು


ಬೆಳ್ಳಿಯಿಂದ ಮಾಡಿದ ವಸ್ತುಗಳನ್ನು ಧರಿಸಿದರೆ ಯಾವ ರಾಶಿಗೆ ಒಳಿತು ಮತ್ತು ಕೆಡುಕಾಗುತ್ತದೆ? ಯಾವ ರಾಶಿಗೆ ಬೆಳ್ಳಿಯೇ ಅದೃಷ್ಟ ಬೆಳಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ, ಧನು ಮತ್ತು ಸಿಂಹ ರಾಶಿಯ ಜನರು ಬೆಳ್ಳಿ ವಸ್ತುಗಳನ್ನು ಧರಿಸಬಾರದು. ಈ ಮೂರು ರಾಶಿಗಳು ಉಗ್ರ ಅಂಶಕ್ಕೆ ಸೇರಿರುವ ಕಾರಣ, ಶಾಂತ ಅಂಶದ ಬೆಳ್ಳಿಯನ್ನು ಧರಿಸುವಂತಿಲ್ಲ.


ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಆಡಳಿತ ಗ್ರಹ ಮಂಗಳ. ಈ ಜನರು ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು.   


ಸಿಂಹ ರಾಶಿಯ ಆಡಳಿತ ಗ್ರಹವನ್ನು ಸೂರ್ಯ. ಸೂರ್ಯನನ್ನು ಶಾಖಗ್ರಹವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಜನರು ಬೆಳ್ಳಿಯನ್ನು ಧರಿಸುವುದರಿಂದ ನಷ್ಟವನ್ನು ಅನುಭವಿಸಬಹುದು. ಜೊತೆಗೆ ಯಾವ ಕೆಲಸ ಕೈಗೊಂಡರೂ ಅದು ಹಾಳಾಗುವ ಸಾಧ್ಯತೆಗಳು ಹೆಚ್ಚು.


ಇನ್ನು ಮೂರು ರಾಶಿಗಳಿಗೆ ಬೆಳ್ಳಿಯೇ ಅದೃಷ್ಟವಾಗುವುದು. ಬೆಳ್ಳಿ ಧರಿಸುವುದರಿಂದ ವೃಷಭ ರಾಶಿಗೆ ಬ್ರಹ್ಮದೇವನ ಕೃಪೆಯಿಂದ ಕೀರ್ತಿಯೂ, ತುಲಾ ರಾಶಿಗೆ ವಿಷ್ಣುವಿನ ಕೃಪೆಯಿಂದ ರಕ್ಷಣಾ ಶಕ್ತಿಯೂ ಮತ್ತು ಕುಂಭ ರಾಶಿಯವರಿಗೆ ಶಿವನ ಕೃಪೆಯಿಂದ ಸಕಲ ಸಂಕಟಗಳ ಪರಿಹಾರವೂ ದೊರೆಯುತ್ತದೆ.


ಇದನ್ನೂ ಓದಿ: NTROದಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ ! Scientist ಹುದ್ದೆಗೆ 1.77  ಲಕ್ಷ ವೇತನ 


 ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ