Mahadeshwara Betta: ಹನೂರು ತಾಲೂಕಿನ ಶ್ರೀ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶ್ರಾವಣ ಮಾಸ  ಮುಕ್ತಾಯವಾದ ಹಿನ್ನೆಲೆ ಶ್ರೀಸಾಲೂರು ಬೃಹನ್ಮಠದ ಪೀಠಾಧಿಪತಿ  ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕುಂಭಾಭಿಷೇಕ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ನೆರವೇರಿತು.


COMMERCIAL BREAK
SCROLL TO CONTINUE READING

ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ (Male Mahadeshwara Betta) ಸನ್ನಿಧಿಯಲ್ಲಿ ಸೋಮವಾರ ಶ್ರಾವಣ ಮಾಸದ ಕೊನೆಯ ದಿನದ ಶತಕುಂಭೋತ್ಸವ ಸೇವೆ ನೆರವೇರಿಸಲಾಯಿತು.


ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹದೇಶ್ವರ ಸ್ವಾಮಿ ಹಾಗೂ ಉಮಾ ಮಹೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪದ ಜತೆ ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ, ನಂದಿಕಂಬಗಳ ಜತೆ ಮೆರವಣಿಯಲ್ಲಿ ದೇವಾಲಯದ ಬೇಡಗಂಪಣ ಅರ್ಚಕ ತಮ್ಮಡಿಗಳ 108 ಮನೆತನದವರು ಪೂಜೆ ಸಲ್ಲಿಸಿದರು. ಪದ್ಧತಿ ಪ್ರಕಾರ ಉಪವಾಸವಿದ್ದು, ಕೆಂಪು ಬಣ್ಣದ ಮಡಿ ವಸ್ತವನ್ನು ಧರಿಸಿಕೊಂಡು  ಮಾಡಲಾಯಿತು.


[[{"fid":"439737","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಶ್ರಾವಣ ಸಂಭ್ರಮ: 108 ಕುಂಭೋತ್ಸವ


ಮಜ್ಜನ ಬಾವಿಯಿಂದ 108 ಕಳಸಗಳಿಗೆ ನೀರು ತುಂಬಿ ಪೂಜೆ ಸಲ್ಲಿಸಿದ ನಂತರ ಶಿವ ಪಾರ್ವತಿಯ ವಿಗ್ರಹಕ್ಕೆ ಸಂಕಲ್ಪಾದಿ ಅಷ್ಟಗಂಧ ಪೂಜೆ, ಸಹಸ್ರನಾಮ ಬಿಲ್ವಾರ್ಚನೆ, ಧೂಪ ದೀಪದಾರತಿ ಬೆಳಗಿ ಮಹಾ ಮಂಗಳಾರತಿ ನೆರವೇರಿಸಲಾಯಿತು. 108 ಕುಂಭದ ಕಳಸಗಳನ್ನು ಅರ್ಚಕರು ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ದೇಗುಲ ಪ್ರವೇಶಿಸಿದರು. ಆಗಮಿಕ ಅರ್ಚಕರಿಂದ ಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ ಸಲ್ಲಿಸಿದ ನಂತರ ಮಾದಪ್ಪನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಗಳ ಜತೆಗೆ 108 ಕುಂಭ ಹಾಗೂ ಎಳನೀರಿನ ಅಭಿಷೇಕ ನೆರವೇರಿತು.


[[{"fid":"439739","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಇದನ್ನೂ ಓದಿ- Astro Tips: ಶ್ರಾವಣದ ಕೊನೆಯ ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಆಶೀರ್ವಾದ ಸಿಗಲಿದೆ..!


ಶ್ರೀ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು ಸಾಲೂರು ಮಠ ವೇದ ಆಗಮ ಪಾಠಶಾಲೆಯ ಆಗಮಿಕರು ವೇದ ಪಠಣ ವಿದ್ಯಾರ್ಥಿಗಳು ಶ್ರೀ ಅರ್ಚಕ ಮುಖಂಡರು ಇತರರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.