ನವದೆಹಲಿ: Vastu Tips Related To Footware - ಪಾದರಕ್ಷೆಗಳು ವ್ಯಕ್ತಿತ್ವದ ಮೇಲೆ ನೇರ ಪ್ರಭಾವ ಬೀರುತ್ತವೆ, ಈ ವಿಷಯವನ್ನು ಪ್ರತಿಯೊಂದು ವ್ಯಕ್ತಿತ್ವ ವಿಕಸನದ (Personality Development) ಕೋರ್ಸ್‌ನಲ್ಲಿ ಹೇಳಲಾಗುತ್ತದೆ. ಆದರೆ ಜ್ಯೋತಿಷ್ಯದಲ್ಲಿಯೂ (Astrology) ಶೂ ಮತ್ತು ಚಪ್ಪಲಿಗಳು ವ್ಯಕ್ತಿತ್ವ ಮತ್ತು ಅದೃಷ್ಟದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದಕ್ಕಾಗಿ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲೂ (Vastu Shastra) ಪಾದರಕ್ಷೆಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಯಾವುದೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಯಾವಾಗಲೂ ಅನುಸರಿಸಬೇಕಾದ ಮತ್ತು ಪಾದರಕ್ಷೆಗಳಿಗೆ ಸಂಬಂಧಿಸಿದ ಕೆಲ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಪಾದರಕ್ಷೆಗಳ ಬಗೆಗಿನ ಈ ನಿಯಮಗಳನ್ನು ನೆನಪಿನಲ್ಲಿಡಿ
>> ಮಂಗಳವಾರ, ಶನಿವಾರ ಮತ್ತು ಗ್ರಹಣ ದಿನದಂದು ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ಖರೀದಿಸಬೇಡಿ. ಅಮಾವಾಸ್ಯೆಯಂದು ಪಾದರಕ್ಷೆಗಳನ್ನು ಖರೀದಿಸುವ ತಪ್ಪನ್ನು ಮಾಡಬೇಡಿ. ಹಾಗೆ ಮಾಡುವುದರಿಂದ ದೊಡ್ಡ ನಷ್ಟವಾಗುತ್ತದೆ.


>> ಪಾದರಕ್ಷೆಗಳು ಹೊಸದಾಗಿರಲಿ ಅಥವಾ ಒಳಾಂಗಣದಲ್ಲಿ ಮಾತ್ರ ಬಳಕೆಗೆ ಸೀಮಿತವಾಗಿರಲಿ, ಯಾವುದೇ ಸಂದರ್ಭದಲ್ಲಿ ಅವುಗಳನ್ನು ಅಡುಗೆಮನೆಯಲ್ಲಿ ಧರಿಸಬಾರದು. ಹೀಗೆ ಮಾಡುವುದರಿಂದ ತಾಯಿ ಅನ್ನಪೂರ್ಣೆ ಮುನಿಸಿಕೊಳ್ಳುತ್ತಾಳೆ.


>> ಅದೇ ರೀತಿ ಶೂ, ಚಪ್ಪಲಿ ಹಾಕಿಕೊಂಡು ಸ್ಟೋರ್ ರೂಂಗೆ ಹೋಗಬೇಡಿ. ಈ ಸ್ಥಳವು ಅನ್ನಪೂರ್ಣ ದೇವಿಗೆ ಸಂಬಂಧಿಸಿದೆ. ಇಲ್ಲಿ ಮನೆಯ ಧಾನ್ಯವನ್ನು ಇಡಲಾಗುತ್ತದೆ. ಇಲ್ಲಿ ಪಾದರಕ್ಷೆಗಳನ್ನು ಧರಿಸುವುದರಿಂದ ಮನೆಯ ಸಂತೋಷ ಮತ್ತು ಸಮೃದ್ಧಿಗೆ ಧಕ್ಕೆ ಬರುತ್ತದೆ.


ಇದನ್ನೂ ಓದಿ-ಸೂರ್ಯ-ಬುಧ ಮತ್ತು ಶುಕ್ರನ ಚಲನೆಯಲ್ಲಿ ಬದಲಾವಣೆ: ಈ ರಾಶಿಯವರ ಭವಿಷ್ಯವು ಬದಲಾಗಲಿದೆ


>> ಪರಸ್ಪರರ ಬೂಟುಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಧರಿಸಬೇಡಿ. ಮನೆಯ ಸದಸ್ಯರು ಕೂಡ ಪರಸ್ಪರ ಪಾದರಕ್ಷೆಗಳನ್ನು ಧರಿಸಬಾರದು. ಶೂಗಳು ಮತ್ತು ಚಪ್ಪಲಿಗಳು ಶನಿಗೆ ಸಂಬಂಧಿಸಿವೆ ಮತ್ತು ಪರಸ್ಪರರ ಪಾದರಕ್ಷೆಗಳನ್ನು ಧರಿಸುವುದರಿಂದ ಶನಿಯ ಅಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ. 


ಇದನ್ನೂ ಓದಿ-Palmistry: ಕೈಯಲ್ಲಿ ಈ ರೇಖೆ ಹೊಂದಿರುವ ಜನರ ಪಾಲಿಗೆ ಕೆಟ್ಟ ಶಕುಣ, ಯಾರೆಂದು ತಿಳಿಯಿರಿ..!


ಹಳೆಯ ಪಾದರಕ್ಷೆ, ಚಪ್ಪಲಿಗಳನ್ನು ಎಸೆಯುವ ಬದಲು ಯಾರಿಗಾದರೂ ದಾನ ಮಾಡುವುದು ಉತ್ತಮ. ಆದರೆ ದಿನ ನೋಡಿ ದಾನ ಮಾಡಬೇಕು. ಯೋಚಿಸದೆ ಅವುಗಳನ್ನು ಯಾರಿಗೂ ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ಅದೃಷ್ಟದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಶನಿವಾರದಂದು ಪಾದರಕ್ಷೆ ಮತ್ತು ಚಪ್ಪಲಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-ಜ.14ರಿಂದ ಈ 4 ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ: ಇವರಿಗೆ ಸರ್ಕಾರಿ ಕೆಲಸ ಸಿಗಬಹುದು!


(Disclaimer: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.