ನವದೆಹಲಿ: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆಗೆ ವಿಶೇಷ ಮಹತ್ವವಿದೆ. ಶುಕ್ರ ಗ್ರಹವನ್ನು ಸಂಪತ್ತು, ವೈಭವ, ಐಶ್ವರ್ಯ ಮತ್ತು ಐಷಾರಾಮಿಗಳಿಗೆ ಕಾರಣವಾದ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನು ಫೆಬ್ರವರಿ 27ರಂದು ಅಂದರೆ ಇಂದು ಶನಿ ರಾಶಿಯನ್ನು ಪ್ರವೇಶಿಸುತ್ತಾನೆ(Shukra Rashi Parivartan). ಶುಕ್ರ ಮತ್ತು ಶನಿಯ ನಡುವೆ ಸ್ನೇಹದ ಭಾವನೆ ಇದೆ. ಶುಕ್ರನ ಈ ಬದಲಾವಣೆಯಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳು ಮಂಗಳಕರ ಫಲಿತಾಂಶಗಳನ್ನು ಪಡೆಯುವುದರೊಂದಿಗೆ ಆರ್ಥಿಕ ಲಾಭವನ್ನು ಗಳಿಸಲಿವೆ. ಆ ರಾಶಿಚಕ್ರದ ಚಿಹ್ನೆಗಳ ಬಗ್ಗೆ ತಿಳಿಯೋಣ.


COMMERCIAL BREAK
SCROLL TO CONTINUE READING

ಈ ರಾಶಿಯವರಿಗೆ ಶುಕ್ರನ ಸಂಕ್ರಮದಿಂದ ಪ್ರಯೋಜನ


ಸಿಂಹ ರಾಶಿ: ಶುಕ್ರ ಸಂಚಾರದ ಫಲವಾಗಿ ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು(Venus Transit 2022). ಅಲ್ಲದೆ ವ್ಯಾಪಾರದಲ್ಲಿ ಆರ್ಥಿಕ ಲಾಭ ಇರುತ್ತದೆ. ಇತರ ಮೂಲದಿಂದ ಹಣದ ಪ್ರಯೋಜನ ಸಹ ಪಡೆಯಬಹುದು. ಇದಲ್ಲದೆ ಈ ಹಣವು ಹೂಡಿಕೆಗೆ ಮಂಗಳಕರವಾಗಿದೆ ಎಂದು ಸಾಬೀತುಪಡಿಸುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದು.


ಇದನ್ನೂ ಓದಿ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಇವರು ತುಂಬಾ ಶ್ರೀಮಂತರು ಮತ್ತು ಅದೃಷ್ಟವಂತರಂತೆ!


ಕನ್ಯಾ ರಾಶಿ: ಶುಕ್ರ ಸಂಚಾರವು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ತರುತ್ತದೆ. ಸಂಚಾರದ ಸಮಯದಲ್ಲಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನೀವು ಉದ್ಯೋಗದಲ್ಲಿ ಬಡ್ತಿಯ ಬಗ್ಗೆ ಒಳ್ಳೆಯ ಸುದ್ದಿ ಪಡೆಯಬಹುದು. ಅಲ್ಲದೆ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.


ವೃಶ್ಚಿಕ ರಾಶಿ: ಶುಕ್ರನ ಈ ಸಂಕ್ರಮವು ಉದ್ಯೋಗ ಮತ್ತು ವ್ಯವಹಾರಕ್ಕೆ ಬಹಳ ಮಂಗಳಕರವಾಗಿರುತ್ತದೆ. ಹಠಾತ್ ಹಣದ ಲಾಭವಾಗಬಹುದು. ಕುಟುಂಬದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ವೈವಾಹಿಕ ಜೀವನ ಯಶಸ್ವಿಯಾಗಲಿದೆ. ಪೂರ್ವಿಕರ ಆಸ್ತಿಯ ಲಾಭವನ್ನು ಪಡೆಯುತ್ತೀರಿ. ದೈನಂದಿನ ಆದಾಯ ಹೆಚ್ಚಾಗಬಹುದು. ನೀವು ಉತ್ತಮ ಆರೋಗ್ಯವನ್ನು ಹೊಂದಿರುಕತ್ತೀರಿ.  


ಮಕರ ರಾಶಿ: ವ್ಯವಹಾರದಲ್ಲಿ ಆರ್ಥಿಕ ಭಾಗವು ಬಲವಾಗಿರುತ್ತದೆ(Venus Transit Effect). ಖಾಸಗಿ ಉದ್ಯೋಗ ಮಾಡುವವರಿಗೆ ಹಣದ ಲಾಭವಿದೆ. ಕುಟುಂಬದ ಹಿರಿಯ ಸದಸ್ಯರಿಂದ ಆರ್ಥಿಕ ಲಾಭಗಳು ಬರಬಹುದು. ಪ್ರತಿಷ್ಠೆ ಹೆಚ್ಚಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.


ಇದನ್ನೂ ಓದಿ: Surya Grahan 2022: ಈ ರಾಶಿ ಮತ್ತು ನಕ್ಷತ್ರದಲ್ಲಿ ಸಂಭವಿಸಲಿದೆ ಈ ವರ್ಷದ ಮೊದಲ ಸೂರ್ಯ ಗ್ರಹಣ, ದಿನಾಂಕ ನಿಮಗೂ ಗೊತ್ತಿರಲಿ


ಮೀನ ರಾಶಿ: ಶುಕ್ರ ಸಂಕ್ರಮಣದ ಸಮಯದಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇದರೊಂದಿಗೆ ಅದೃಷ್ಟ ಕೂಡ ಈ ಸಮಯದಲ್ಲಿ ಸಂಪೂರ್ಣ ಬೆಂಬಲವನ್ನು ಪಡೆಯುತ್ತದೆ. ಈ ಸಂಚಾರವು ಕೆಲಸಕ್ಕೆ ಮಂಗಳಕರವೆಂದು ಸಾಬೀತುಪಡಿಸುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. ನೀವು ಆಹ್ಲಾದಕರ ವೈವಾಹಿಕ ಜೀವನವನ್ನು ಅನುಭವಿಸುವಿರಿ. ಕುಟುಂಬದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.