Signature Analysis: ನೀವು ಮಾಡುವ ಸಹಿಯಿಂದಲೇ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು!
Signature Analysis: ನೀವು ಮಾಡುವ ಸಹಿಯಿಂದಲೇ ನಿಮ್ಮ ವ್ಯಕ್ತಿತ್ವವನ್ನು ಅರಿಯಬಹುದು. ಸಹಿ ನಿಜವಾಗಿಯೂ ನೀವು ಏನೆಂಬುದರ ಬಗ್ಗೆ ತಿಳಿಸುತ್ತದೆ. ನಿಮ್ಮ ಸಹಿ ದೊಡ್ಡದೋ? ಚಿಕ್ಕದೋ? ನೀಟಾಗಿ ಇರುತ್ತದೋ? ಇಲ್ಲವೋ? ಮೇಲ್ಮುಖವೂ ಕೆಳ ಮುಖವೋ ಎಂಬ ಅಂಶಗಳಿಂದ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಅರಿಯಬಹುದಾಗಿದೆ.
Signature Analysis: ನೀವು ಮಾಡುವ ಸಹಿಯಿಂದಲೇ ನಿಮ್ಮ ವ್ಯಕ್ತಿತ್ವವನ್ನು ಅರಿಯಬಹುದು. ಸಹಿ ನಿಜವಾಗಿಯೂ ನೀವು ಏನೆಂಬುದರ ಬಗ್ಗೆ ತಿಳಿಸುತ್ತದೆ. ನಿಮ್ಮ ಸಹಿ ದೊಡ್ಡದೋ? ಚಿಕ್ಕದೋ? ನೀಟಾಗಿ ಇರುತ್ತದೋ? ಇಲ್ಲವೋ? ಮೇಲ್ಮುಖವೂ ಕೆಳ ಮುಖವೋ ಎಂಬ ಅಂಶಗಳಿಂದ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಅರಿಯಬಹುದಾಗಿದೆ.
ಮೊದಲ ಅಕ್ಷರ ದೊಡ್ಡದಿದ್ದರೆ: ನೀವು ಮಾಡುವ ಸಹಿಯ ಮೊದಲ ಅಕ್ಷರವು ತುಂಬಾ ದೊಡ್ಡದಾಗಿದ್ದರೆ, ಅಂತಹ ವ್ಯಕ್ತಿಯು ತುಂಬಾ ಸದ್ಗುಣಶಾಲಿರಾಗಿರುತ್ತಾರೆ. ಶ್ರೀಮಂತರಾಗಿದ್ದು, ಆರೋಗ್ಯವಂತರಾಗಿರುತ್ತಾರೆ. ಅಲ್ಲದೇ ಜೀವನದಲ್ಲಿ ಜನಪ್ರಿಯತೆಯನ್ನು ಸಹ ಪಡೆಯುತ್ತಾರೆ.
ಇದನ್ನೂ ಓದಿ: ರಾತ್ರಿ ಅನ್ನ ಸೇವನೆ ಆರೋಗ್ಯಕ್ಕೆ ಹಾನಿಕಾರಕವೇ ? ಏನು ಹೇಳುತ್ತಾರೆ ತಜ್ಞರು ?
ಸಹಿ ಮೇಲಿನಿಂದ ಕೆಳಕ್ಕೆ ಬಂದರೆ: ಸಹಿ ಮೇಲಿನಿಂದ ಕೆಳಕ್ಕೆ ಬರುತ್ತಿದ್ದರೆ, ಅಂಥವರು ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುತ್ತಾರೆ. ಅನಾರೋಗ್ಯ ಪೀಡಿತರಾಗಿರುತ್ತಾರೆ. ಆರ್ಥಿಕ ಏರುಪೇರನ್ನು ಕಾಣುತ್ತಾರೆ. ಕೆಲವೊಮ್ಮೆ ಸಾಲ ಮಾಡುವುದಲ್ಲದೇ, ಹಣಕ್ಕಾಗಿ ಪರದಾಡುವ ಸ್ಥಿತಿಗೂ ತಲುಪಬಹುದು.
ಸಹಿಯ ಕೆಳಗೆ ಗೆರೆ ಎಳೆದರೆ: ಸಹಿಯ ಕೆಳಗೆ ಕೆಲವರು ಗೆರೆ ಎಳೆಯುತ್ತಾರೆ. ನಂತರ ಒಂದು ಅಥವಾ ಎರಡು ಚುಕ್ಕೆಗಳನ್ನು ಹಾಕುತ್ತಾರೆ. ಈ ರೀತಿ ಸಹಿ ಮಾಡುವ ಜನರು ಹಣ ಗಳಿಸುವಲ್ಲಿ ಕಡಿಮೆ ತೊಂದರೆಗಳನ್ನು ಎದುರಿಸುತ್ತಾರೆ. ಇವರು ಉಳಿತಾಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಾರೆ. ಅಲ್ಲದೆ, ಅವರ ಆರೋಗ್ಯವು ಉತ್ತಮವಾಗಿರುತ್ತದೆ.
ಸಹಿಯ ಕೆಳಗೆ ಚುಕ್ಕೆ ಇಡುವುದು: ಸಹಿಯಲ್ಲಿ ತನ್ನ ಹೆಸರಿನ ಮೊದಲ ಅಕ್ಷರವನ್ನು ಬರೆದು, ಬಳಿಕ ಹೆಸರನ್ನು ಬರೆದು, ನಂತರ ಕೆಳಭಾಗದಲ್ಲಿ ಚುಕ್ಕೆ ಇಡುತ್ತಾರೆ. ಈ ರೀತಿ ಸಹಿ ಮಾಡುವ ವ್ಯಕ್ತಿ ಶ್ರೀಮಂತರಾಗಿರುತ್ತಾರೆ. ಇವರ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ.
ಸಹಿ ಮಾಡಿ ಕೆಳಗೆ ಎರಡು ಗೆರೆ ಹಾಕುವವರು: ಕೆಲವರು ಸಹಿಯ ಕೆಳಗೆ ಎರಡು ಗೆರೆಗಳನ್ನು ಎಳೆಯುತ್ತಾರೆ. ಇದು ಅವರ ಅಸುರಕ್ಷಿತ ಭಾವನೆಯ ಸಂಕೇತವಾಗಿದೆ. ಅಂತಹ ಜನರು ಉತ್ತಮ ಹಣವನ್ನು ಗಳಿಸುತ್ತಾರೆ. ಅಲ್ಲದೇ ಈ ರೀತಿ ಸಹಿ ಮಾಡಿವ ವ್ಯಕ್ತಿಗಳು ತುಂಬಾ ಜಿಪುಣರು.
ಇದನ್ನೂ ಓದಿ: Refrigerator: ಫ್ರಿಡ್ಜ್‌ನಲ್ಲಿ ಏನಿಡಬೇಕು? ಏನಿಡಬಾರದು? ಬಹುಮುಖ್ಯ ಮಾಹಿತಿ ಇಲ್ಲಿದೆ
ಕೆಳಗಿನಿಂದ ಮೇಲಕ್ಕೆ ಸಹಿ ಮಾಡಿದರೆ: ಯಾರಾದರೂ ಕೆಳಗಿನಿಂದ ಮೇಲಕ್ಕೆ ಸಹಿ ಮಾಡುತ್ತಿದ್ದರೆ, ಅವರು ಹೆಚ್ಚಾಗಿ ಧಾರ್ಮಿಕ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಗೆ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗಿರುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.