ಆಧುನಿಕತೆ ಜೊತೆಗೆ ಜನರು ಬಿಡುವಿಲ್ಲದೆ ಕೆಲಸಗಳನ್ನು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನೆಮ್ಮದಿ, ನಿದ್ದೆ, ಶಾಂತಿಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ. ಹೀಗಿರುವಾಗ ಆರೋಗ್ಯಕರ ಜೀವನಕ್ಕೆ ಉತ್ತಮ ನಿದ್ದೆ ಬಹಳ ಮುಖ್ಯವಾಗಿರುತ್ತದೆ. ಒಬ್ಬ ವ್ಯಕ್ತಿಯು 24 ಗಂಟೆಗಳಲ್ಲಿ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಮಾಡದೇ ಹೋದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಅಸಲಿಯತ್ತು ಬಯಲು! 


ಸುಲಭ ನಿದ್ರೆಗೆ 5 ಸಲಹೆಗಳು :


ಮಲಗುವ ಮೊದಲು ಸ್ಕ್ರೀನ್  ಆಫ್ ಮಾಡಿ:
ಮಲಗುವ ಮೊದಲು ಸ್ಕ್ರೀನ್  ಆಫ್ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಈ ನಿಯಮವು ಮಕ್ಕಳಿಗೆ ಬಹಳ ಮುಖ್ಯವಾಗಿದೆ. ವಯಸ್ಕರೂ ಈ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ, ಮಲಗುವ ಕೋಣೆಯಿಂದ ಟಿವಿ ಅಥವಾ ಕಂಪ್ಯೂಟರ್ ಸ್ಕ್ರೀನ್ ಅನ್ನು ತೆಗೆದುಹಾಕಬಹುದು. 


ಬಿಸಿನೀರಿನ ಸ್ನಾನ  :
ಮಲಗುವ ಮುನ್ನ ಸ್ನಾನ ಮಾಡುವುದರಿಂದ ಕೈ ಮತ್ತು ಪಾದಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಸ್ನಾನದ ನಂತರ ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಆದರೆ ಸ್ನಾನ ಮಾಡಿ ಬಂದು ಮತ್ತೆ ಟಿವಿ ನೋಡಲು ಕುಳಿತರೆ ತಪ್ಪಾಗುತ್ತದೆ. 


ಕತ್ತಲೆ ಮತ್ತು ಶಾಂತಿ ಅತ್ಯಗತ್ಯ :
ಹೆಚ್ಚಿನ ಬೆಳಕು ನಿಮ್ಮ ದೇಹದ ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಮಲಗುವ ಮುನ್ನ ಕಿಟಕಿ ಪರದೆಗಳು ಸರಿಯಾಗಿ ಮುಚ್ಚಿವೆಯೇ ಎನ್ನುವುದನ್ನು ನೋಡಿಕೊಳ್ಳಿ. ಕೋಣೆಯಲ್ಲಿ ಇನ್ನೂ ಬೆಳಕು ಬಂದರೆ, ಕಣ್ಣಿನ ಮಾಸ್ಕ್ ಹಾಕಿ  ಮಲಗಿಕೊಳ್ಳಿ.


ಫೋನ್, ಕಂಪ್ಯೂಟರ್ ಟಿವಿ ನಿಷೇಧ : 
ಅನೇಕ ಜನರಿಗೆ, ಮಲಗುವ ಮೊದಲು ಫೋನ್ ನೋಡುವ ಅಭ್ಯಾಸವಿರುತ್ತದೆ. ಮಲಗುವ ಮುನ್ನ ಫೋನ್ ನೋಡುತ್ತಾ ಕುಳಿತರೆ ಸಮಯ ಹೋಗುವುದೇ ತಿಳಿಯುವುದಿಲ್ಲ.  ಮಾತ್ರವಲ್ಲ ಇದು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮಾರನೇ ದಿನದ ಚಟುವಟಿಕೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ.  


ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕಂಟೈನರ್ ಡಿಪೋದಲ್ಲಿ ಅಗ್ನಿ ದುರಂತ: 25 ಜನ ದುರ್ಮರಣ


ಕೆಫೀನ್ ಸೇವನೆ ಮೇಲೆ ಹಿಡಿತವಿರಲಿ : 
ಮಲಗುವ ಸಮಯಕ್ಕೆ ಆರು ಗಂಟೆಗಳ ಮೊದಲು ಕೆಫೀನ್ ಸೇವಿಸುವುದರಿಂದ ಒಂದು ಗಂಟೆ ನಿದ್ರೆ  ಕಡಿಮೆಯಾಗುತ್ತದೆ. ವಯಸ್ಸಾದವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಏಕೆಂದರೆ ಅವರ ದೇಹವು ಕೆಫೀನ್ ಅನ್ನು ಸಂಸ್ಕರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ