ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ ಮತ್ತೆ ನಿದ್ದೆಯೇ ಬರುವುದಿಲ್ಲವೇ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ
How to get Good Sleep: ಸಾಮಾನ್ಯವಾಗಿ ರಾತ್ರಿ ನಿದ್ದೆ ಬರುವುದಿಲ್ಲ. ಪದೇ ಪದೇ ಎಚ್ಚರವಾಗುತ್ತದೆ ಎನ್ನುವ ಮಾತನ್ನು ಜನ ಹೇಳುತ್ತಿರುವುದನ್ನು ಕೇಳುತ್ತೇವೆ. ಆದರೆ ಇದಕ್ಕೆ ಏನು ಕಾರಣ ಎನ್ನುವುದನ್ನು ಮಾತ್ರ ಹುಡುಕುವ ಗೋಜಿಗೆ ಹೋಗುವುದಿಲ್ಲ.
ಬೆಂಗಳೂರು : ದಿನವಿಡೀ ಕೆಲಸ ಮಾಡಿದ ನಂತರ ರಾತ್ರಿ ಮಾಡುವ ನಿದ್ದೆಯಿಂದ ದೇಹ ಮತ್ತು ಮನಸ್ಸು ಎರಡಕ್ಕೂ ಆರಾಮ ಸಿಗುತ್ತದೆ. ಈ ಕಾರಣದಿಂದಲೇ ರಾತ್ರಿ ನಿದ್ದೆ ಪ್ರತಿಯೊಬ್ಬನಿಗೂ ಬಹಳ ಮುಖ್ಯವಾಗಿರುತ್ತದೆ. ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಹೆಚ್ಚಿನ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಕೆಲವರಿಗೆ ರಾತ್ರಿ ಪದೇ ಪದೇ ಎಚ್ಚರವಾಗುತ್ತಿರುತ್ತದೆ. ರಾತ್ರಿ ಗಾಢ ನಿದ್ದೆ ಸಾಧ್ಯವಾಗುವುದಿಲ್ಲ. ಒಮ್ಮೆ ಎಚ್ಚರವಾದರೆ ಮತ್ತೆ ನಿದ್ದೆ ಬರುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮತ್ತೆ ನಿದ್ದೆ ಬರುವುದಿಲ್ಲ. ಹಾಗಿದ್ದರೆ ಈ ಸಮಸ್ಯೆಯನ್ನು ಹೇಗೆ ತಪ್ಪಿಸಬಹುದು ನೋಡೋಣ.
ರಾತ್ರಿ ನಿದ್ದೆ ಬಾರದೇ ಇರಲು ಇದೇ ಕಾರಣ :
ಸಾಮಾನ್ಯವಾಗಿ ರಾತ್ರಿ ನಿದ್ದೆ ಬರುವುದಿಲ್ಲ. ಪದೇ ಪದೇ ಎಚ್ಚರವಾಗುತ್ತದೆ ಎನ್ನುವ ಮಾತನ್ನು ಜನ ಹೇಳುತ್ತಿರುವುದನ್ನು ಕೇಳುತ್ತೇವೆ. ಆದರೆ, ಇದಕ್ಕೆ ಏನು ಕಾರಣ ಎನ್ನುವುದನ್ನು ಮಾತ್ರ ಹುಡುಕುವ ಗೋಜಿಗೆ ಹೋಗುವುದಿಲ್ಲ. ರಾತ್ರಿ ಹೀಗೆ ಅಚಾನಕಾಗಿ ನಿದ್ದೆಯಿಂದ ಎಚ್ಚರಗೊಳ್ಳುವುದು, ಮತ್ತೆ ನಿದ್ದೆ ಬಾರದಿರುವುದು ಈ ಸಮಸ್ಯೆಗೆ ನಾವು ಸೇವಿಸುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ನೆಮ್ಮದಿಯ ನಿದ್ದೆಗೆ ಜಾರಲು ಮಾತು ಗಾಢ ನಿದ್ದೆ ಆನಂದಿಸಲು ಯಾವ ರೀತಿಯ ಕಾಳಜಿ ವಹಿಸಬೇಕು ನೋಡೋಣ.
ಇದನ್ನೂ ಓದಿ : Love Hormone: ಶರೀರದಲ್ಲಿ ನೈಸರ್ಗಿಕವಾಗಿ ಲವ್ ಹಾರ್ಮೋನನ್ನು ಹೆಚ್ಚಿಸುತ್ತವೆ ಈ ಹಣ್ಣುಗಳು!
1. ರಾತ್ರಿ ಹೊತ್ತು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬೇಡಿ:
ರಾತ್ರಿ ಮಲಗುವ ಮೊದಲು, ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿರುವಂತಹ ಯಾವುದೇ ಆಹಾರವನ್ನು ಸೇವಿಸಬೇಡಿ. ಅನ್ನ, ಚಿಪ್ಸ್, ಆಲೂಗಡ್ಡೆ, ಬಾಳೆಹಣ್ಣು, ಪಾಸ್ಟಾ ಮುಂತಾದ ಆಹಾರವನ್ನು ರಾತ್ರಿ ಹೊತ್ತು ಸೇವಿಸಬಾರದು. ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿರುವ ಆಹಾರ ಪದಾರ್ಥಗಳು ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ರಾತ್ರಿ ವೇಳೆ ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿರುವ ಆಹಾರ ಸೇವಿಸಿದರೆ ಪದೇ ಪದೇ ಎಚ್ಚರವಾಗುತ್ತದೆ.
2. ರಾತ್ರಿ ಹೊತ್ತು ಚಹಾ ಮತ್ತು ಕಾಫಿ ಕುಡಿಯುವುದು ಬೇಡ :
ನಮ್ಮಲ್ಲಿ ಅನೇಕ ಮಂದಿ ಚಹಾ ಮತ್ತು ಕಾಫಿ ಪ್ರಿಯರೇ ಆಗಿರುತ್ತಾರೆ. ಆದರೆ ಈ ಹವ್ಯಾಸವೇ ನಿಮ್ಮ ನಿದ್ರೆಗೆ ಭಂಗ ತರಬಹುದು. ಏಕೆಂದರೆ ಚಾ ಮತ್ತು ಕಾಫಿಯಲ್ಲಿ ಕೆಫೀನ್ ಪ್ರಮಾಣ ಅಧಿಕವಾಗಿರುತ್ತದೆ. ಇದು ರಾತ್ರಿಯ ಗಾಢ ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ಮಲಗುವುದಕ್ಕಿಂತ ಕನಿಷ್ಠ 2-3 ಗಂಟೆಗಳ ಮೊದಲು ಚಹಾ ಅಥವಾ ಕಾಫಿ ಸೇವಿಸಬೇಡಿ.
ಇದನ್ನೂ ಓದಿ : ಖಾರ ಅಂತಾ ದೂರ ಮಾಡ್ಬೇಡಿ… ಹಸಿ ಮೆಣಸಿನಕಾಯಿ ತಿಂದ್ರೆ ಈ ಕಾಯಿಲೆಗಳು ಬುಡಸಮೇತ ಮಾಯವಾಗುತ್ತೆ!
3. ಹೆಚ್ಚು ಟೆನ್ಶನ್ ತೆಗೆದುಕೊಳ್ಳಬೇಡಿ :
ಈ ಜಂಜಾಟದ ಬದುಕಿನಲ್ಲಿ ಪ್ರತಿ ಕ್ಷಣವೂ ಒತ್ತಡವೇ. ಟೆನ್ಷನ್ ಇಲ್ಲದೆ ಬದುಕುವುದು ಸಾಧ್ಯವೇ ಇಲ್ಲ. ಹಾಗಂತ ಪ್ರತಿಯೊಂದು ವಿಷಯದಲ್ಲಿಯೂ ಒತ್ತಡ ತೆಗೆದುಕೊಂಡರೆ, ಒತ್ತಡ ನಿಮ್ಮ ಮನಸನ್ನು ಆಳಲು ಆಸ್ಪದ ಕೊಟ್ಟರೆ ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಹೀಗಾದಾಗ ನಿದ್ರಾಹೀನತೆ ಸಮಸ್ಯೆ ಸಾಮಾನ್ಯವಾಗಿ ಬಿಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.