ಬೇಸಿಗೆಯಲ್ಲಿ ಈ ರೀತಿ ಈರುಳ್ಳಿಯನ್ನು ಸಂಗ್ರಹಿಸಿಡಿ… ಕೊಳೆಯದೆ, ಬೇರು ಮೂಡದೆ ತಿಂಗಳವರೆಗೆ ತಾಜಾವಾಗಿರುತ್ತೆ!
Simple Tips to Store onions: ಹೆಚ್ಚಿನ ತೇವಾಂಶ ಮತ್ತು ಶಾಖ ಇದ್ದಾಗ, ಈರುಳ್ಳಿ ಬೇಗ ಕೊಳೆಯಲು ಅಥವಾ ಅದರಲ್ಲಿ ಬೇರು ಮೂಡಲು ಪ್ರಾರಂಭವಾಗುತ್ತದೆ. ಹೀಗಿರುವಾಗ ದೀರ್ಘಕಾಲದವರೆಗೆ ಈರುಳ್ಳಿಯನ್ನು ತಾಜಾವಾಗಿಡಲು ಬಯಸಿದರೆ, ಇಲ್ಲಿ ಕೆಲವೊಂದು ಟಿಪ್ಸ್’ಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
Simple Tips to Store onions: ಅಡುಗೆ ತಯಾರಿಯಲ್ಲಿ ಅತಿ ಹೆಚ್ಚು ಮತ್ತು ಪ್ರಮುಖವಾಗಿ ಬಳಕೆ ಮಾಡುವ ವಸ್ತುಗಳಲ್ಲಿ ಈರುಳ್ಳಿ ಕೂಡ ಒಂದು. ಆದರೆ ಇದನ್ನು ಸ್ಟೋರ್ ಮಾಡಿ ಇಡುವುದೇ ಕೆಲವೊಮ್ಮೆ ತಲೆನೋವಿಗೆ ಕಾರಣವಾಗುತ್ತದೆ. ಏಕೆಂದರೆ, ಹವಾಮಾನದಲ್ಲಿನ ಬದಲಾವಣೆಯು ಈರುಳ್ಳಿಯ ತಾಜಾತನದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Dina Bhavishya: ಇಂದು ಸೌಭಾಗ್ಯ ಯೋಗ: ಈ ರಾಶಿಯವರ ಬಹುಕಾಲದ ಕನಸು ನನಸಾಗುವುದು
ಹೆಚ್ಚಿನ ತೇವಾಂಶ ಮತ್ತು ಶಾಖ ಇದ್ದಾಗ, ಈರುಳ್ಳಿ ಬೇಗ ಕೊಳೆಯಲು ಅಥವಾ ಅದರಲ್ಲಿ ಬೇರು ಮೂಡಲು ಪ್ರಾರಂಭವಾಗುತ್ತದೆ. ಹೀಗಿರುವಾಗ ದೀರ್ಘಕಾಲದವರೆಗೆ ಈರುಳ್ಳಿಯನ್ನು ತಾಜಾವಾಗಿಡಲು ಬಯಸಿದರೆ, ಇಲ್ಲಿ ಕೆಲವೊಂದು ಟಿಪ್ಸ್’ಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
ಒಣ ಸ್ಥಳದಲ್ಲಿ ಇರಿಸಿ
ಈರುಳ್ಳಿಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು, ಯಾವಾಗಲೂ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಇರಿಸಿ. ಸ್ವಲ್ಪ ತೇವಾಂಶ ಇದ್ದರೂ ಸಾಕು ಈರುಳ್ಳಿ ಕೊಳೆಯಲು ಪ್ರಾರಂಭವಾಗಬಹುದು. ಈರುಳ್ಳಿಯಲ್ಲಿ ಫಂಗಸ್ ಬೆಳೆಯಲು ಕಾರಣವಾಗುವುದರಿಂದ ನೇರ ಸೂರ್ಯನ ಬೆಳಕಿನಿಂದ ದೂರವಿಡಿ.
ಈರುಳ್ಳಿಯನ್ನು ಯಾವಾಗಲೂ 4-10 ಡಿಗ್ರಿ ಸೆಲ್ಸಿಯಸ್’ನಲ್ಲಿ ಸಂಗ್ರಹಿಸಬೇಕು. ಹೀಗಿಟ್ಟರೆ ಈರುಳ್ಳಿ ಬೇಗ ಹಾಳಾಗುವುದಿಲ್ಲ. ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.
ಈರುಳ್ಳಿಯನ್ನು ಟಿಶ್ಯೂ ಪೇಪರ್ನಲ್ಲಿ ಪ್ರತ್ಯೇಕವಾಗಿ ಇರಿಸಿ. ಪ್ಲಾಸ್ಟಿಕ್ ಬಳಸಬೇಡಿ, ಪ್ಲಾಸ್ಟಿಕ್ ಬಳಕೆಯಿಂದಲೇ ಈರುಳ್ಳಿ ಹೆಚ್ಚು ಕಾಲ ತಾಜಾವಾಗಿ ಉಳಿಯುವುದಿಲ್ಲ. ಆದರೆ ಮೆಶ್ ಬ್ಯಾಗ್’ನಲ್ಲಿ ಇರಿಸಬಹುದು.
ರೆಫ್ರಿಜರೇಟರ್’ನಲ್ಲಿ ಈರುಳ್ಳಿಯನ್ನು ಸಂಗ್ರಹಿಸಿಡುತ್ತಿದ್ದರೆ, ತಕ್ಷಣವೇ ಈ ಅಭ್ಯಾಸವನ್ನು ನಿಲ್ಲಿಸಿಬಿಡಿ. ಏಕೆಂದರೆ ಫ್ರಿಡ್ಜ್’ನಲ್ಲಿರುವ ತೇವಾಂಶವು ಈರುಳ್ಳಿಯನ್ನು ಕೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: “ಟ್ರೋಫಿ ಗೆದ್ದರೆ 1 ಕೋಟಿ ನಗದು ಜೊತೆ ಬಿಎಂಡಬ್ಲ್ಯು ಕಾರು”- ಕ್ರಿಕೆಟಿಗರಿಗೆ ವಿಶೇಷ ಘೋಷಣೆ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.