Parota Recipe: ಯಮ್ಮಿ ಟೇಸ್ಟಿ ಪಂಜಾಬಿ ಪರೋಟಾ ಮಾಡುವ ಸಿಂಪಲ್ ವಿಧಾನ
Punjabi Parota: ಪಂಜಾಬಿ ಪರೋಟಾ ಒಂದು ಜನಪ್ರಿಯ ಪಂಜಾಬಿ ಭಕ್ಷ್ಯವಾಗಿದೆ. ಇದನ್ನು ಬೆಳಗಿನ ತಿಂಡಿಯಾಗಿ ಸೇವಿಸಬಹುದು.
Aloo Parota Recipe: ಪಂಜಾಬಿ ಪರೋಟಾ ಒಂದು ಜನಪ್ರಿಯ ಪಂಜಾಬಿ ಭಕ್ಷ್ಯವಾಗಿದೆ. ಇದನ್ನು ಬೆಳಗಿನ ತಿಂಡಿಯಾಗಿ ಸೇವಿಸಬಹುದು. ಜೊತೆಗೆ ಬಾಕ್ಸ್ ತೆಗೆದುಕೊಂಡು ಹೋಗುವವರಿಗೂ ಇದು ಉತ್ತಮ ಡಿಶ್ ಆಗಿದೆ. ಪಂಜಾಬಿ ಪರೋಟಾವನ್ನು ಗೋಧಿ ಹಿಟ್ಟಿನ ಬದಲಿಗೆ ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟಿಗೆ ತುಪ್ಪವನ್ನು ಸೇರಿಸುವುದರಿಂದ ಈ ಪರೋಟಾಗಳಿಗೆ ವಿಶಿಷ್ಟವಾದ ಸುವಾಸನೆ ಮತ್ತು ಮೃದುತ್ವವನ್ನು ನೀಡುತ್ತದೆ. ಪಂಜಾಬಿ ಪರೋಟಾದಲ್ಲಿ ಹಲವು ವಿಧಗಳಿವೆ.
ಆಲೂ ಪರೋಟಾ: ಈ ಪರೋಟಾ ದಪ್ಪ ಮಸಾಲೆಯುಕ್ತವಾಗಿರುತ್ತದೆ. ಇದರಲ್ಲಿ ಆಲೂಗಡ್ಡೆಯ ಸ್ಟಫಿಂಗ್ ಇರುತ್ತದೆ.
ಪನೀರ್ ಪರೋಟಾ: ಈ ಪರೋಟಾದಲ್ಲಿ ಪನೀರ್ ಜೊತೆ ಮಸಾಲೆ ಬೆರೆ ಫಿಲ್ಲಿಂಗ್ ಮಾಡಿರುತ್ತಾರೆ.
ಗೋಬಿ ಪರೋಟಾ: ಈ ಪರೋಟಾದಲ್ಲಿ ಹೂಕೋಸು (ಗೋಬಿ)ಫಿಲ್ಲಿಂಗ್ ಇರುತ್ತದೆ.
ಮೆಂತ್ಯ ಪರೋಟ: ಈ ಪರೋಟದಲ್ಲಿ ಮೆಂತ್ಯ ಸೊಪ್ಪಿನ ಸ್ಟಫಿಂಗ್ ಬೆರೆಸಲಾಗುತ್ತದೆ.
ಇದನ್ನೂ ಓದಿ: ದಿನನಿತ್ಯ ಒತ್ತಡ ಹೆಚ್ಚಾಗುತ್ತಾ ಇದೆಯೇ? ಮನಸ್ಸಿಗೆ ವಿಶ್ರಾಂತಿ ಪಡೆಯಲು ಈ ಆಹಾರಗಳನ್ನು ಸೇವಿಸಿ!
ಪಂಜಾಬಿ ಪರೋಟಾ ಮಾಡಲು ಬೇಕಾದ ಸಾಮಗ್ರಿ:
2 ಕಪ್ ಗೋಧಿ ಹಿಟ್ಟು
1/2 ಟೀಸ್ಪೂನ್ ಉಪ್ಪು
ಅಗತ್ಯವಿರುವಷ್ಟು ನೀರು
2 ಟೀ ಚಮಚ ಎಣ್ಣೆ
ಪಂಜಾಬಿ ಪರೋಟಾ ಫಿಲ್ಲಿಂಗ್ :
4 ಬೇಯಿಸಿದ ಆಲೂಗಡ್ಡೆ
1 ಟೀಸ್ಪೂನ್ ತುರಿದ ಶುಂಠಿ
2 ಕತ್ತರಿಸಿದ ಹಸಿರು ಮೆಣಸಿನಕಾಯಿ
2 ಸ್ಪೂನ್ ಕತ್ತರಿಸಿದ ಕೊತ್ತಂಬರಿ
1/2 ಟೀಚಮಚ ಜೀರಿಗೆ ಪುಡಿ
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀಸ್ಪೂನ್ ಗರಂ ಮಸಾಲಾ ಪುಡಿ
1/4 ಟೀಚಮಚ ಅಜ್ವೈನ್
ರುಚಿಗೆ ತಕ್ಕಷ್ಟು ಉಪ್ಪು
ಪಂಜಾಬಿ ಪರೋಟಾ ತಯಾರಿಸುವ ವಿಧಾನ:
ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. 10 ನಿಮಿಷಗಳ ಕಾಲ ಹಿಟ್ಟನ್ನು ನೆನೆಯಲು ಬಿಡಿ. ಬಳಿಕ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ.
ಈಗ ಒಂದು ಬಟ್ಟಲಿನಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ. ತುರಿದ ಶುಂಠಿ, ಕತ್ತರಿಸಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು, ಗರಂ ಮಸಾಲಾ ಪುಡಿ, ಅಜ್ವೈನ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಒಂದು ಹಿಟ್ಟಿನ ಉಂಡೆ ತೆಗೆದುಕೊಂಡು ಅದನ್ನು ಸಣ್ಣ ಚಪಾತಿಯಂತೆ ಲಟ್ಟಿಸಿ, ಮಧ್ಯದಲ್ಲಿ ಒಂದು ಚಮಚ ಫಿಲ್ಲಿಂಗ್ ಹಾಕಿ. ಹೋಳಿಗೆಯಂತೆಯೇ ಹಿಟ್ಟಿನಿಂದ ಅಂಚುಗಳನ್ನು ಮುಚ್ಚಿ. ಫಿಲ್ಲಿಂಗ್ ಹೊರಬರದಂತೆ ಚೆನ್ನಾಗಿ ಮುಚ್ಚಬೇಕು. ಈಗ ಚಪಾತಿಯಂತೆ ಲಟ್ಟಿಸಿ ಬಳಿಕ ಹಂಚಿನ ಮೇಲೆ ಹಾಕಿ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಈಗ ಪಂಜಾಬಿ ಪರೋಟಾ ಸವಿಯಲು ಸಿದ್ಧ.
ಇದನ್ನೂ ಓದಿ: ಈರುಳ್ಳಿ ಸಿಪ್ಪೆಯನ್ನು ಇದರೊಟ್ಟಿಗೆ ಬೆರೆಸಿ ಹಚ್ಚಿ: ಬಿಳಿ ಕೂದಲು ಬುಡಸಮೇತ ಕಡು ಕಪ್ಪಾಗುವುದು ಖಚಿತ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.