ಬೆಂಗಳೂರು : ಸಮುದ್ರ ಶಾಸ್ತ್ರದಲ್ಲಿ ವ್ಯಕ್ತಿಯ ದೇಹದ ಪ್ರತಿಯೊಂದು ಭಾಗದ ವಿನ್ಯಾಸ, ಬಣ್ಣ, ಆಕಾರದ ಆಧಾರದ ಮೇಲೆ ಆತನ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯುವ ವಿಧಾನಗಳನ್ನು ಹೇಳಲಾಗಿದೆ. ಹಸ್ತಸಾಮುದ್ರಿಕ ಶಾಸ್ತ್ರದಂತೆ (Palmistry), ವ್ಯಕ್ತಿಯ ಸ್ವಭಾವವನ್ನು ರೇಖೆಗಳು, ಅಂಕಿಅಂಶಗಳು, ಗುರುತುಗಳು, ಮಚ್ಚೆ ಇತ್ಯಾದಿಗಳ ಮೂಲಕ ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಅಂಗೈಯ ಆಕಾರದಿಂದ ಭವಿಷ್ಯವನ್ನು ತಿಳಿಯಿರಿ  :
ದೊಡ್ಡ ಅಂಗೈ: ದೊಡ್ಡ ಅಂಗೈ ಹೊಂದಿರುವ ಜನರು ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ (Size of Palm).  ಅವರು ಜೀವನದ ಪ್ರತಿ ಹಂತದಲ್ಲಿಯೂ ಜಾಗರೂಕರಾಗಿರುತ್ತಾರೆ. ಕೆಲಸದಲ್ಲಿ ಸಣ್ಣದೊಂದು ಅಡಚಣೆ ಎದುರಾದರೂ ಅವರು ಸಹಿಸುವುದಿಲ್ಲ. 


ಇದನ್ನೂ ಓದಿ : Weekly Numerology: ಮಾರ್ಚ್ 12 ರಿಂದ 18ರವರೆಗಿನ ಸಂಖ್ಯಾಶಾಸ್ತ್ರದ ಜಾತಕ


ಮೃದುವಾದ ಅಂಗೈ :  ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮೃದುವಾದ ಅಂಗೈಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ (Nature according to palm). ಮೃದುವಾದ ಅಂಗೈಗಳನ್ನು ಹೊಂದಿರುವ ಜನರು ತಮ್ಮ ಜೀವನದ ಪ್ರತಿ ಹಂತದಲ್ಲೂ ಸಂತೋಷವನ್ನು ಪಡೆಯುತ್ತಾರೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. 


ಸಣ್ಣ ಅಂಗೈ : ಚಿಕ್ಕ ಅಂಗೈ ಹೊಂದಿರುವ ಜನರು ಶುದ್ಧ ಹೃದಯ ಮತ್ತು ಧಾರ್ಮಿಕ ಮನೋಭಾವದವರಾಗಿರುತ್ತಾರೆ (Future by palm). ಇವರಿಗೆ ಕುತೂಹಲ ಹೆಚ್ಚು. ಯಾವುದಾದರೂ ಒಂದು ವಿಚಾರದ ಬಗ್ಗೆ ತಿಳಿದುಕೊಳ್ಳುವ ಹುಮ್ಮಸ್ಸು ಇವರಿಗಿರುತ್ತದೆ.  ಅದಕ್ಕಾಗಿಯೇ ನಿರಂತರವಾಗಿ ಏನನ್ನಾದರೂ ಕಲಿಯುತ್ತಲೇ ಇರುತ್ತಾರೆ. 


ಇದನ್ನೂ ಓದಿ: Astrology : ಈ ಗ್ರಹವು ಜಾತಕದಲ್ಲಿ ದುರ್ಬಲವಾಗಿದ್ದರೆ, ಎದುರಾಗುತ್ತವೆ ಆರ್ಥಿಕ ಅಡಚಣೆಗಳು!


ಕಠೋರ  ಅಂಗೈ : ಕಠೋರ ಅಂಗೈಯನ್ನು ಹೊಂದಿರುವವರು,  ಕಠಿಣ ಪರಿಶ್ರಮಿಗಳು ಮತ್ತು ಪ್ರಾಮಾಣಿಕರು. ಈ ಜನರು ಅದೃಷ್ಟಕ್ಕಿಂತ ಹೆಚ್ಚಾಗಿ ಕೆಲಸದ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಈ ಜನರು ಕಠಿಣ ಪರಿಶ್ರಮದಿಂದ ತಮ್ಮ ಛಾಪು ಮೂಡಿಸುತ್ತಾರೆ. 


ಕೆಂಪು ಅಂಗೈ: ಯಾರ ಅಂಗೈಗಳು ಮೃದುವಾಗಿರುತ್ತವೆ ಮತ್ತು ಕೆಂಪಾಗಿರುತ್ತವೆ, ಅವರು ತುಂಬಾ ಅದೃಷ್ಟವಂತರು. ಅಂತಹ ಜನರು ರಾಜನಂತೆ ಜೀವನ ನಡೆಸುತ್ತಾರೆ. ಅವರ ಜೀವನ, ಹಣ, ಗೌರವ ಯಾವುದಕ್ಕೂ ಕೊರತೆಯಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.