Skin Care: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನಿಂದ ತ್ವಚೆಯ ಆರೈಕೆ
Skin Care By Watermelon: ಹೊಳೆಯುವ ತ್ವಚೆಯನ್ನು ಯಾರು ಬಯಸುವುದಿಲ್ಲ ಹೇಳಿ. ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ತ್ವಚೆಯ ಸಮಸ್ಯೆಗಳು ಎದುರಾಗುತ್ತವೆ. ಚರ್ಮದ ಮೇಲಿನ ಕಲೆಗಳು, ಮೊಡವೆಗಳ ನಿವಾರಣೆಗೆ ಜನ ಹಲವಾರು ಕಷ್ಟ ಪಡುತ್ತಾರೆ. ಆದರೆ ಕಲ್ಲಂಗಡಿ ಫೇಶಿಯಲ್ ನಿಮ್ಮ ಚರ್ಮವನ್ನು ಮತ್ತೆ ಹೊಳೆಯುವಂತೆ ಮಾಡುತ್ತದೆ
Skin Care By Watermelon: ಹೊಳೆಯುವ ತ್ವಚೆಯನ್ನು ಯಾರು ಬಯಸುವುದಿಲ್ಲ ಹೇಳಿ. ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ತ್ವಚೆಯ ಸಮಸ್ಯೆಗಳು ಎದುರಾಗುತ್ತವೆ. ಚರ್ಮದ ಮೇಲಿನ ಕಲೆಗಳು, ಮೊಡವೆಗಳ ನಿವಾರಣೆಗೆ ಜನ ಹಲವಾರು ಕಷ್ಟ ಪಡುತ್ತಾರೆ. ಆದರೆ ಕಲ್ಲಂಗಡಿ ಫೇಶಿಯಲ್ ನಿಮ್ಮ ಚರ್ಮವನ್ನು ಮತ್ತೆ ಹೊಳೆಯುವಂತೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಕಲ್ಲಂಗಡಿ ಹಣ್ಣನ್ನು ತಿನ್ನುವುದರ ಜೊತೆಗೆ ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಬೇಸಿಗೆಯಲ್ಲಿ ನೀವು ಪಾರ್ಲರ್‌ಗೆ ಹೋಗಲು ಸಾಧ್ಯವಾಗದಿದ್ದರೆ, ನೀವು ಈ ಹಣ್ಣಿನಿಂದ ಫೇಶಿಯಲ್ ಮಾಡಬಹುದು. ಹಾಗಾದರೆ ಕಲ್ಲಂಗಡಿ ಫೇಶಿಯಲ್ ಮಾಡುವುದು ಹೇಗೆ ಎಂದು ತಿಳಿಯೋಣ.
ಕಲ್ಲಂಗಡಿಯಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಇದು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅದೇನೆಂದರೆ ಇದನ್ನು ತಿಂದರೆ ಸಿಗುವುದಲ್ಲದೆ, ಮುಖಕ್ಕೆ ಹಚ್ಚುವುದರಿಂದ ಹಲವಾರು ಲಾಭಗಳು ಸಿಗುತ್ತವೆ.
ಇದನ್ನೂ ಓದಿ: Heart Attack Risk Food: ಹೃದಯಾಘಾತದ ಅಪಾಯವನ್ನು ತಪ್ಪಿಸಲು ಈ ನಾಲ್ಕು ವಸ್ತುಗಳಿಂದ ಅಂತರ ಕಾಯ್ದುಕೊಳ್ಳಿ
ಕಲ್ಲಂಗಡಿ ಫೇಶಿಯಲ್ ಮಾಡುವ ವಿಧಾನ:
ಮೊದಲನೆಯದಾಗಿ, ನೀವು ನಿಮ್ಮ ಮುಖವನ್ನು ಕಲ್ಲಂಗಡಿ ರಸದಿಂದ ಸ್ವಚ್ಛಗೊಳಿಸಬೇಕು. ಇದಕ್ಕಾಗಿ ನೀವು ಕಲ್ಲಂಗಡಿ ರಸದಲ್ಲಿ ತೆಂಗಿನ ಎಣ್ಣೆಯನ್ನು ಬೆರೆಸಿ. ಬಳಿಕ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ
ಇದರ ನಂತರ ನೀವು ಕಲ್ಲಂಗಡಿ ಸ್ಕ್ರಬ್ ಅನ್ನು ತಯಾರಿಸಬೇಕು. ಆದ್ದರಿಂದ, 2 ಚಮಚ ಕಲ್ಲಂಗಡಿ ರಸದಲ್ಲಿ 1 ಚಮಚ ಅಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಇದರೊಂದಿಗೆ ನೀವು ನಿಮ್ಮ ಮುಖವನ್ನು ಸ್ಕ್ರಬ್ ಮಾಡಬಹುದು. ಇದು ನಿಮ್ಮ ಮುಖದ ಡೆಡ್ ಸ್ಕಿನ್ ಅನ್ನು ಸಹ ನಿವಾರಿಸುತ್ತದೆ. ಈಗ ನೀವು 1 ಚಮಚ ಕಲ್ಲಂಗಡಿ ರಸದಲ್ಲಿ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ಮಿಶ್ರಣ ಮಾಡಬೇಕು. ಬಳಿಕ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.
ಈಗ ಕಲ್ಲಂಗಡಿ ಫೇಸ್ ಮಾಸ್ಕ್ ಮಾಡುವ ಸಮಯ ಬಂದಿದೆ. ಇದಕ್ಕಾಗಿ ನೀವು ಕಡಲೆ ಹಿಟ್ಟು, ಹಾಲು ಮತ್ತು ಕಲ್ಲಂಗಡಿ ರಸವನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಮಿಕ್ಸ್ ಮಾಡಿದ ನಂತರ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಬಿಟ್ಟು, ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.
ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯು ಹೊಳೆಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: Benefits of raw Mango : ಶುಗರ್ ನಿಯಂತ್ರಣ ಮಾಡಲು ಮಾವಿನಕಾಯಿ ಹೇಗೆ ಸಹಾಯ ಮಾಡುತ್ತದೆ ತಿಳಿದಿದೆಯಾ?
(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.