Saffron For Skin: ಕೇಸರಿಯನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಕೇಸರಿ ಸೇವನೆಯು ಹೆಚ್ಚು ಲಾಭದಾಯಕ ಎಂದು ಹೇಳಲಾಗುತ್ತದೆ. ಆದರೆ, ಕೇಸರಿಯು ಉತ್ತಮ ಸೌಂದರ್ಯವರ್ಧಕ ಎಂದು ನಿಮಗೆ ತಿಳಿದಿದೆಯೇ? ಹೌದು, ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಲು ಕೇಸರಿ ಬಹಳ ಪ್ರಯೋಜನಕಾರಿ ಆಗಿದೆ. 


COMMERCIAL BREAK
SCROLL TO CONTINUE READING

ಮಾಲಿನ್ಯ, ಧೂಳು, ವಾತಾವರಣ, ಆಹಾರಕ್ರಮ, ಹಾರ್ಮೋನ್ ವ್ಯತ್ಯಾಸ ಹೀಗೆ ಹಲವು ಕಾರಣಗಳಿಂದಾಗಿ ಮುಖದಲ್ಲಿ ಮೊಡವೆ, ಕಲೆಗಳು ಮೂಡುವುದು ಸಹಜ. ಆದರೆ, ದಿನಗಳೆದಂತೆ ಈ ಸಮಸ್ಯೆ ತುಂಬಾ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ವಿಧದ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ, ಕೆಲವು ಮನೆಮದ್ದುಗಳಿಂದ ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಪಡೆಯಬಹುದು. ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಕೇಸರಿಯೂ ಕೂಡ ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರವನ್ನು ನೀಡುವಲ್ಲಿ ಪರಿಣಾಮಕಾರಿ ಆಗಿದೆ. ಹಾಗಿದ್ದರೆ, ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಕೇಸರಿಯನ್ನು ಬಳಸುವ ಸರಿಯಾದ ವಿಧಾನ ಯಾವುದು? ಇದು ಚರ್ಮಕ್ಕೆ ಹೇಗೆ ಪ್ರಯೋಜನಕಾರಿ ಆಗಿದೆ ಎಂದು ತಿಳಿಯೋಣ...


ನೈಸರ್ಗಿಕವಾಗಿ ಸುಂದರ ತ್ವಚೆ ಪಡೆಯಲು ಕೇಸರಿಯನ್ನು ಈ ರೀತಿ ಉಪಯೋಗಿಸಿ....
ಕೇಸರಿ ಮತ್ತು ಕೊಬ್ಬರಿ ಎಣ್ಣೆ:

ಕೊಬ್ಬರಿ ಎಣ್ಣೆ ಎಲ್ಲರ ಮನೆಯಲ್ಲಿಯೂ ಸುಲಭವಾಗಿ ಲಭ್ಯ. ಈ ಕೊಬ್ಬರಿ ಎಣ್ಣೆಯೊಂದಿಗೆ ಕೇಸರಿಯನ್ನು ಬೆರೆಸಿ ಚರ್ಮದ ಮೇಲೆ ಅನ್ವಯಿಸುವುದರಿಂದ ಚರ್ಮದ ಶುಷ್ಕತೆಯನ್ನು ನಿವಾರಿಸಬಹುದು. ಇದಕ್ಕಾಗಿ ಮೊದಲು ಒಂದೆರಡು ಕೇಸರಿಯನ್ನು ಒಂದು ಚಮಚ ಹಾಲಿನಲ್ಲಿ ಇಡೀ ರಾತ್ರಿ ನೆನೆಸಿ. ಮರುದಿನ ಇದಕ್ಕೆ ಒಂದು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ, 15-20 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಫೇಸ್ ವಾಶ್ ಮಾಡಿ. 


ಇದನ್ನೂ ಓದಿ- ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಬಾಳೆಹಣ್ಣು


ಕೇಸರಿ ಮತ್ತು ಹಾಲಿನ ಕೆನೆ:
ಹಾಲಿನ ಕೆನೆ ಉತ್ತಮ ಟ್ಯಾನ್ ರಿಮೂವಿಂಗ್ ಎಂದು ನಿಮಗೆ ಗೊತ್ತೇ ಇದೆ. ಹಾಲಿನ ಕೆನೆಯೊಂದಿಗೆ ಕೇಸರಿ ಬೆರೆಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಕಾಂತಿಯುತ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಬಹುದು. ಇದಕ್ಕಾಗಿ, ರಾತ್ರಿ ಮಲಗುವ ಮೊದಲು ಕೇಸರಿಯೊಂದಿಗೆ ಕೆನೆ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಮಲಗಿ. ನಂತರ ಬೆಳಗ್ಗೆ ಎದ್ದು ಮುಖ ತೊಳೆಯಿರಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಶೀಘ್ರದಲ್ಲಿಯೇ ಫಲಿತಾಂಶ ಗೋಚರಿಸುತ್ತದೆ.


ಕೇಸರಿ ಮತ್ತು ಜೇನುತುಪ್ಪ:
ಕೇಸರಿಯನ್ನು ಜೇನುತುಪ್ಪದೊಂದಿಗೆ ಹಚ್ಚುವುದರಿಂದ ಶುಷ್ಕ ತ್ವಚೆಯ ಸಮಸ್ಯೆಯನ್ನು ನಿವಾರಿಸಬಹುದು. ಇದಕ್ಕಾಗಿ ಕೇಸರಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.


ಕೇಸರಿ ಮತ್ತು ಶ್ರೀಗಂಧ:
ಸುಕ್ಕುಗಟ್ಟಿದ ಚರ್ಮದ ಸಮಸ್ಯೆಯನ್ನು ನಿವಾರಿಸಲು ಕೂಡ ಕೇಸರಿ ಬಹಳ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ, ಹಾಲು ಮತ್ತು ಶ್ರೀಗಂಧದೊಂದಿಗೆ ಕೇಸರಿ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ. ಅದು ಡ್ರೈ ಆದ ಬಳಿಕ ನಿಧಾನವಾಗಿ ಮಸಾಜ್ ಮಾಡುತ್ತಾ ಫೇಸ್ ವಾಶ್ ಮಾಡಿ. ಈ ರೀತಿ ಮಾಡುವುದರಿಂದ ಚರ್ಮದ ಸುಕ್ಕುಗಳು ನಿವಾರಣೆಯಾಗುವುದಲ್ಲದೆ, ಗ್ಲೋಯಿಂಗ್ ಸ್ಕಿನ್ ಅನ್ನು ನಿಮ್ಮದಾಗಿಸಬಹುದು.


ಇದನ್ನೂ ಓದಿ- Skin Care: ಬಿಸಿಲೇ ಇರಲಿ, ಚಳಿಯೇ ಬರಲಿ ನಿಮ್ಮ ಮುಖದ ಆರೋಗ್ಯಕ್ಕೆ ಇಲ್ಲಿದೆ ಮನೆಮದ್ದು


ಕೇಸರಿ ಮತ್ತು ತುಳಸಿ:
ಮೊಡವೆ ಸಮಸ್ಯೆ ಹೆಚ್ಚಾಗಿರುವವರಿಗೆ ತುಳಸಿಯೊಂದಿಗೆ ಕೇಸರಿಯ ಬಳಕೆ ತುಂಬಾ ಪ್ರಯೋಜನಕಾರಿ ಆಗಿದೆ. ಆಯುರ್ವೇದದ ಪ್ರಕಾರ, ಔಷಧಿಗಳ ಗಣಿ ಎಂದು ಪರಿಗಣಿಸಲ್ಪಡುವ ತುಳಸಿ ಎಲೆಗಳನ್ನು ನುಣ್ಣಗೆ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಕೇಸರಿಯನ್ನು ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಅದು ಒಣಗಿನ ಬಳಿಕ ಮುಖ ತೊಳೆಯಿರಿ. ವಾರದಲ್ಲಿ ಕನಿಷ್ಠ ಎರಡರಿಂದ ಮೂರು ಬಾರಿಯಾದರೂ ಹೀಗೆ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ದೊರೆಯುತ್ತದೆ. ಮಾತ್ರವಲ್ಲ, ಮುಖದಲ್ಲಿರುವ ಕಲೆಗಳು ಕೂಡ ಮಾಯವಾಗುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.