Weight Loss: ನಿತ್ಯ 20 ನಿಮಿಷ ಈ ಒಂದು ಕೆಲಸ ಮಾಡಿದರೆ ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ
Weight Loss: ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದೀರಾ? ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ಪ್ರತಿದಿನ ಕೇವಲ 20 ನಿಮಿಷಗಳ ಕಾಲ ಈ ಒಂದು ಕೆಲಸ ಮಾಡಿದರೆ ಸಾಕು ಸುಲಭವಾಗಿ ತೂಕ ಇಳಿಸಬಹುದು. ನಿಮ್ಮ ಬೆಲ್ಲಿ ಫ್ಯಾಟ್ ಕೂಡ ಮಾಯವಾಗುತ್ತೆ.
Weight Loss Tips: ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳವು ಬಹುತೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಬದಲಾದ ಜೀವನಶೈಲಿ, ಹೆಚ್ಚಿನ ದೈಹಿಕ ಚಟುವಟಿಕೆಗಳು ಇಲ್ಲದೇ ಇರುವುದು. ವರ್ಕ್ ಫ್ರಮ್ ಹೋಂ ಸಂಸ್ಕೃತಿ ಸೇರಿದಂತೆ ಇದಕ್ಕೆ ಹಲವು ಕಾರಣಗಳಿವೆ. ತೂಕ ಹೆಚ್ಚಳ ಒಂದು ರೋಗವಲ್ಲ. ಆದರೆ, ಅತಿಯಾದ ತೂಕದಿಂದಾಗಿ ಉಂಟಾಗುವ ಸ್ಥೂಲಕಾಯತೆಯು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಮಧುಮೇಹದಂತಹ ಕಾಯಿಲೆಗಳ ಉಗ್ರಾಣ ಎಂತಲೇ ಹೇಳಬಹುದು. ಆದರೆ, ಪ್ರತಿನಿತ್ಯ ಒಂದು ಸಣ್ಣ ಕೆಲಸ ಮಾಡುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಹೌದು, ಈ ಬಿಡುವಿಲ್ಲದ ಜೀವನಶೈಲಿಯಲ್ಲಿ ವಾಕ್, ವ್ಯಾಯಾಮ ಮಾಡಲು ಸಮಯವೇ ಇಲ್ಲ ಎಂದು ದೂರುವವರು ಪ್ರತಿನಿತ್ಯ ಕೇವಲ 20 ನಿಮಿಷಗಳ ಕಾಲ ಒಂದು ಸಣ್ಣ ಕೆಲಸ ಮಾಡುವ ಮೂಲಕ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು (Belly Fat) ಕರಗಿಸಬಹುದು. ಅದಕ್ಕಾಗಿ ಹೆಚ್ಚೇನು ಮಾಡುವ ಅಗತ್ಯವಿಲ್ಲ ಜಸ್ಟ್ ಸ್ಕಿಪ್ಪಿಂಗ್ ಆಡಿದರೆ ಅಷ್ಟೇ ಸಾಕು.
ಇದನ್ನೂ ಓದಿ- ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಗೊರಕೆ ಸಮಸ್ಯೆಯೇ ಇರಲ್ಲ
ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕೇವಲ 20 ನಿಮಿಷಗಳ ಕಾಲ ಹಗ್ಗದಾಟ ಎಂದರೆ ಸ್ಕಿಪ್ಪಿಂಗ್ (Skipping) ಆಡುವುದರಿಂದ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅದರಲ್ಲೂ, ನಿತ್ಯ ತಪ್ಪದೆ ಸ್ಕಿಪ್ಪಿಂಗ್ ಆಡುವುದರಿಂದ ಆರೋಗ್ಯಕರವಾಗಿ ಮತ್ತು ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು (Weight Loss) ಎಂದು ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ನಿತ್ಯ 20 ನಿಮಿಷ ಸ್ಕಿಪ್ಪಿಂಗ್ ಆಡುವುದರಿಂದ ಸುಮಾರು 300 ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಆದಾಗ್ಯೂ, ಇದಕ್ಕಾಗಿ ಸ್ಕಿಪ್ಪಿಂಗ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಅತ್ಯಗತ್ಯ.
ಇದನ್ನೂ ಓದಿ- Beverages For Hydration: ಬೇಸಿಗೆ ಕಾಲದಲ್ಲಿ ದೇಹದಲ್ಲಿ ಜಲಸಂಚಲಯನವನ್ನು ಕಾಪಾಡಿಕೊಳ್ಳಲು ಈ ಉತ್ತಮ ಪಾನಿಯಗಳನ್ನು ಕುಡಿಯಿರಿ!
ಹಗ್ಗದಾಟ/ಸ್ಕಿಪ್ಪಿಂಗ್ ಆಡುವಾಗ ಈ ವಿಷಯಗಳ ಬಗ್ಗೆ ವಿಶೇಷ ಗಮನವಿರಲಿ:
* ಖಾಲಿ ಹೊಟ್ಟೆಯಲ್ಲಿ ಹಗ್ಗದಾಟ:
ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಹಗ್ಗದಾಟ/ಸ್ಕಿಪ್ಪಿಂಗ್ ಆಡಬಾರದು. ಇದರಿಂದ ಹೊಟ್ಟೆ ನೋವು ತಲೆತಿರುಗುವಿಕೆಯಂತಹ ಸಮಸ್ಯೆಗಳು ಬಾಧಿಸಬಹುದು.
* ತಿಂದ ಕೂಡ ಸ್ಕಿಪ್ಪಿಂಗ್:
ಊಟ/ತಿಂಡಿ ನಂತರ ತಕ್ಷಣ ಸ್ಕಿಪ್ಪಿಂಗ್ ಆಡುವ ತಪ್ಪನ್ನು ಎಂದಿಗೂ ಮಾಡಬಾರದು. ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಯಾವಾಗಲೂ ನೀವು ಆಹಾರ ಸೇವಿಸಿದ 2-3 ಗಂಟೆಗಳ ಬಳಿಕವಷ್ಟೇ ಸ್ಕಿಪ್ಪಿಂಗ್ ಆಡುವುದನ್ನು ಪರಿಗಣಿಸಿ.
* ಲಘು ವ್ಯಾಯಾಮ:
ನೀವು ಸ್ಕಿಪ್ಪಿಂಗ್ ಆರಂಭಿಸುವ ಮೊದಲು ಲಘು ವ್ಯಾಯಾಮಕ್ಕೆ ಒಟ್ಟು ನೀಡಿ. ಇದರಿಂದ ದೇಹ ವಾರ್ಮ್ ಅಪ್ ಆಗುವುದರಿಂದ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶವನ್ನು ಕಾಣಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.