ನವದೆಹಲಿ: Snake In Dream - ಕನಸಿನಲ್ಲಿ, ಒಬ್ಬ ವ್ಯಕ್ತಿಯು ತನ್ನ ನಿಜ ಜೀವನದಲ್ಲಿ ಅನೇಕ ಬಾರಿ ನೋಡದ ಕೆಲ ವಿಷಯಗಳನ್ನು ಸಹ ನೋಡುತ್ತಾನೆ. ಇದೇ ವೇಳೆ ಮನುಷ್ಯನಿಗೆ ಕೆಲ ಸಂಗತಿಗಳು ಪದೇ ಪದೇ ಕಾಣಿಸುತ್ತವೆ. ಸ್ವಪ್ನ ಶಾಸ್ತ್ರದಲ್ಲಿ,(Swapna Shastra) ಪ್ರತಿ ಕನಸಿನ ಅರ್ಥವನ್ನು ಹೇಳಲಾಗಿದೆ ಮತ್ತು ಮರುಕಳಿಸುವ ಕನಸುಗಳನ್ನು ತಪ್ಪಿಸಲು ಪರಿಹಾರಗಳನ್ನುಸೂಚಿಸಲಾಗಿದೆ.  ಈ ಪರಿಹಾರಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ (Astrology) ಕೂಡ ವಿವರವಾಗಿ ಹೇಳಲಾಗಿದೆ. ಇಂದು ನಾವು ಕನಸಿನಲ್ಲಿ ಪದೇ ಪದೇ ಹಾವು ಕಂಡುಬರುವ ಮತ್ತು ಅದಕ್ಕೆ ಯಾವ ಉಪಾಯಗಳನ್ನು (Dream Remedies) ಸೂಚಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಹಾವುಗಳ ಕನಸಿನಿಂದ ಪಾರಾಗುವ ಉಪಾಯ 
ಹಾಗೆ ನೋಡಿದರೆ ಕಾಲ ಸರ್ಪ ದೋಷದ ಉಪಾಯ, ಕನಸಿನಲ್ಲಿ ಪದೇ ಪದೇ ನಾಗರ ಹಾವು ಕಾನಿಸಿಕೊಲ್ಲುವಂತಹ ಸಮಸ್ಯೆಗೆ ಉಪಾಯವಾಗಿ ನೋಡಲಾಗುತ್ತದೆ. ಇದಕ್ಕಾಗಿ  ನಾಗಪಂಚಮಿ ಅತ್ಯಂತ ಶುಭಕರ ಎಂದೂ ಕೂಡ ಹೇಳಲಾಗುತ್ತದೆ. ಆದರೆ ಪ್ರತಿ ತಿಂಗಳು ಬರುವ ಪಂಚಮಿಯ ದಿನವೂ ಕೂಡ ಈ ಉಪಾಯ ಅನುಸರಿಸಬಹುದು. ಏಕೆಂದರೆ ಪಂಚಮಿ ತಿಥಿ ನಾಗದೇವತೆಗೆ ಸಮರ್ಪಿತ ತಿಥಿಯಾಗಿದೆ. ಹೀಗಿರುವಾಗ ಯಾವುದೇ ಪಂಚಮಿಯ ದಿನದಂದು ಅಷ್ಟನಾಗಗಳಿಗೆ ಪೂಜೆ ಸಲ್ಲಿಸಿ. ಇದರಿಂದ ಕನಸಿನಲ್ಲಿ ನಾಗರ ಹಾವು ಕಾಣಿಸುವುದರಿಂದ ಮುಕ್ತಿ ಲಭಿಸುತ್ತದೆ. ಇದಲ್ಲದೆ ಜನ್ಮ ಜಾತಕದಲ್ಲಿ ನಾಗರ ಹಾವಿಗೆ ಸಂಬಂಧಿಸಿದ ಯಾವುದೇ ದೋಷವಿದ್ದರೂ ಕೂಡ ಅದು ಪರಿಹಾರವಾಗುತ್ತದೆ. ಈ ಪೂಜೆಯನ್ನು ನೀವು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು.


ಇದನ್ನೂ ಓದಿ-ಪಿತೃ ಪಕ್ಷದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಮತ್ತು ಅದರ ಪ್ರಾಮುಖ್ಯತೆ ಏನು ಎಂದು ತಿಳಿಯಿರಿ?


ಬೆಳ್ಳಿಯ ಹಾವುಗಳ ಪೂಜೆ 
ನಾಗರ ಹಾವುಗಳ ಕುರಿತು ಮನಸಿನಲ್ಲಿ ಭಯವಿದ್ದರೆ ಮತ್ತು ಪದೇ ಪದೇ ಕನಸಿನಲ್ಲಿ ನಾಗರ ಹಾವು ಕಾಣಿಸಿಕೊಳ್ಳುತ್ತಿದ್ದರೆ, ಬೆಳ್ಳಿಯಿಂದ ಎರಡು ನಾಗರ ಹಾವುಗಳನ್ನು ಹಾಗೂ ಒಂದು ಸ್ವಸ್ತಿಕ್ ಚಿಹ್ನೆಯನ್ನು ತಯಾರಿಸಿಕೊಳ್ಳಿ. ವಿಧಿ-ವಿಧಾನದಿಂದ ಅವುಗಳಿಗೆ ಪೂಜೆ ಸಲ್ಲಿಸಿ, ಹಾವುಗಳನ್ನು ಶಿವಲಿಂಗಕ್ಕೆ ಅರ್ಪಿಸಿ ಹಾಗೂ ಸ್ವಸ್ತಿಕ ಚಿಹ್ನೆಯನ್ನು ಕೊರಳಲ್ಲಿ ಧರಿಸಿ. ಈ ರೀತಿ ಮಾಡುವುದರಿಂದ ಕನಸಿನಲ್ಲಿ ಹಾವುಗಳು ಕಾಣುವುದು ನಿಂತು ಹೋಗಲಿದೆ ಮತ್ತು ಹಾವಿನ ಭಯ ಕೂಡ ನಿಮ್ಮನ್ನು ಕಾಡುವುದಿಲ್ಲ.


ಇದನ್ನೂ ಓದಿ-Milk Bath: ಸ್ನಾನದ ನೀರಿಗೆ ಬೆರೆಸಿ 1 ಲೋಟ ಹಾಲು ಸಿಗಲಿದೆ ಈ ಎಲ್ಲಾ ಪ್ರಯೋಜನಗಳು


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಯಾವುದೇ ಉಪಾಯ ಅನುಸರಿಸುವ ಮೊದಲು ವಿಷಯ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ)


ಇದನ್ನೂ ಓದಿ-Glowing Skin tips: ಚರ್ಮದ ಈ ಸಮಸ್ಯೆಗಳನ್ನು ನಿವಾರಿಸುತ್ತೆ ಕೊತ್ತಂಬರಿ ಸೊಪ್ಪು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.