Solar Eclipse 2020 Date and Time In India: ಭಾರತೀಯ ಪಂಚಾಂಗದ  ಪ್ರಕಾರ ಡಿಸೆಂಬರ್ 14 ರಂದು ಸೂರ್ಯನಿಗೆ ಗ್ರಹಣ (Solar Eclipse 2020) ಹಿಡಿಯಲಿದೆ. ಈ ಸೂರ್ಯಗ್ರಹಣ ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿರಲಿದೆ. ಕಳೆದ ನವೆಂಬರ್ 30 ರಂದು ಈ ವರ್ಷದ ಅಂತಿಮ ಚಂದ್ರಗ್ರಹಣ ಸಂಭವಿಸಿತ್ತು. ಈ ಚಂದ್ರಗ್ರಹಣದ 15 ದಿನಗಳ ಒಳಗೆಯೇ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಒಟ್ಟು 15 ದಿನಗಳ ಒಳಗೆಯೇ ಎರಡು ಗ್ರಹಣಗಳು ಸಂಭವಿಸುತ್ತಿರುವ ಕಾರಣ ಭಾರಿ ಮಹತ್ವ ಪಡೆದುಕೊಂಡಿದೆ. ಇಂತಹುದರಲ್ಲಿ ಸೂರ್ಯಗ್ರಹಣ ಯಾವ ರಾಶಿಚಕ್ರದಲ್ಲಿ ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಚಳಿಗಾಲದಲ್ಲಿ ಸೂರ್ಯ ಸ್ನಾನದಿಂದಾಗುವ ಪ್ರಯೋಜನಗಳಿವು


ಜ್ಯೋತಿಷ್ಯ ಲೆಕ್ಕಾಚಾರ  ಮತ್ತು ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ಸಂಭವಿಸಲಿದೆ. ಭಾರತೀಯ ಸಮಯದ ಪ್ರಕಾರ, ಈ ಸೂರ್ಯಗ್ರಹಣವು ಡಿಸೆಂಬರ್ 14 ರಂದು ಸಂಜೆ 7 ಗಂಟೆ 3 ನಿಮಿಷಕ್ಕೆ ಆರಂಭಗೊಂಡು  ಡಿಸೆಂಬರ್ 15 ರ ರಾತ್ರಿ ಅಂದರೆ 12.23 ಕ್ಕೆ ಮುಕ್ತಾಯಗೊಳ್ಳಲಿದೆ.


ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಹೀಗಾಗಿ ಈ ಗ್ರಹಣದ ಸೂತಕ ಕಾಲಕ್ಕೆ ಹೆಚ್ಚು ಮಹತ್ವವಿರುವುದಿಲ್ಲ. ಈ ಗ್ರಹಣ ದಕ್ಷಿಣ ಅಮೇರಿಕಾ, ದಕ್ಷಿಣ ಆಫ್ರಿಕಾ ಅಟ್ಲಾಂಟಿಕ್, ಹಿಂದೂ ಮಹಾಸಾಗರ ಹಾಗೂ ಪ್ರಶಾಂತ್ ಮಹಾಸಾಗರದ ಹಲವು ಪ್ರಾಂತ್ಯಗಳಲ್ಲಿ ಗೋಚರಿಸಲಿದೆ.


ಇದನ್ನು ಓದಿ- Anti-Ageing: ಈ ದೇಶದಲ್ಲಿ ಮುಪ್ಪಾಗಿರುವವರನ್ನು ಮತ್ತೆ ಯುವಕರನ್ನಾಗಿಸುತ್ತಾರೆ


ಧನು ಸಂಕ್ರಾಂತಿ ಯಾವಾಗ?
ಸೂರ್ಯ ಗ್ರಹಣ ಸಮಾಪ್ತಿಯಾದ ದಿನದಂದು ಧನು ಸಂಕ್ರಾಂತಿ ಇದೆ. ಈ ದಿನ ಸೂರ್ಯ ಧನು ರಾಶಿಗೆ ಪ್ರವೇಶಿಸುತ್ತಾನೆ. ಪ್ರಸ್ತುತ ಸೂರ್ಯ ವೃಶ್ಚಿಕ ರಾಶಿಚಕ್ರದಲ್ಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಗೆ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಡಿಸೆಂಬರ್ 15 ರಿಂದ ಜನವರಿ 14ರವರೆಗೆ ಸೂರ್ಯ ಧನು ರಾಶಿಯಲ್ಲಿರಲಿದ್ದಾನೆ. ಜನವರಿ 14ರಂದು ಸೂರ್ಯ ಧನು ರಾಶಿಯನ್ನು ತೊರೆದು ಮಕರ ರಾಶಿಗೆ ಪ್ರವೇಶಿಸುತ್ತಿದ್ದು ಅಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ.


ಇದನ್ನು ಓದಿ- Vastu Tips: ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು, ಭಾಗ್ಯ ಹೊಳೆಯಲಿದೆ


ವ್ರುಷಿಕ ರಾಶಿಚಕ್ರ (Scorpio Horoscope)
ವೃಶ್ಚಿಕ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ  ವೃಶ್ಚಿಕ ಜಾತಕ ಹೊಂದಿದ ಜನರ ಸಮಸ್ಯೆಗಳು ಹೆಚ್ಚಾಗಬಹುದು. ಸೂರ್ಯ ದುರ್ಬಲನಾಗುವ ಕಾರಣ ಗೌರವ ಕಡಿಮೆಯಾಗಬಹುದು. ಕಾಯಿಲೆ ಬರಬಹುದು. ಸ್ವಲ್ಪ ಕಣ್ಣಿನ ಸಮಸ್ಯೆ ಇರಬಹುದು. ತಂದೆಯೊಂದಿಗಿನ ಸಂಬಂಧದ ಮೇಲೂ ಕೂಡ ಪರಿಣಾಮ ಉಂಟಾಗಬಹುದು ಅಥವಾ ತಂದೆಯ ಆರೋಗ್ಯ ಹದಗೆಡಬಹುದು. ವಿಷ್ಣುವನ್ನು ಸೂರ್ಯಗ್ರಹಣ ಸಮಯದಲ್ಲಿ ಪೂಜಿಸಬೇಕು. ಈ ಸಮಯದಲ್ಲಿ ಕೋಪವನ್ನು ತಪ್ಪಿಸಬೇಕು. ಯಾರನ್ನೂ ಅವಮಾನಿಸಬೇಡಿ.