Solar Eclipse on Diwali 2022: ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸುತ್ತಿದೆ, ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ, ಇದು ಭಾರತದಲ್ಲಿಯೂ ಗೋಚರಿಸಲಿದೆ. ಸೂರ್ಯಗ್ರಹಣ ಮತ್ತು ದೀಪಾವಳಿ ಒಟ್ಟಿಗೆ ಬಂದಿರುವುದರಿಂದ ಬಗ್ಗೆ ಜನರ ಮನಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ , ಈ ಬಾರಿ ದೀಪಾವಳಿಯನ್ನು ಆಚರಿಸಬೇಕೇ ಅಥವಾ ಬೇಡವೇ? ಗಣೇಶ ಮತ್ತು ಲಕ್ಷ್ಮಿಯ ಪೂಜೆಯನ್ನು ನೆರವೇರಿಸಬೇಕೇ ಅಥವಾ ಬೇಡವೇ, ಒಂದು ವೇಳೆ ಪೂಜೆ ನಡೆಸಿದರು ಕೂಡ ಅದನ್ನು ಯಾವಾಗ ನಡೆಸಬೇಕು? ಎಂಬಿತ್ಯಾತಿ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಈ ಎಲ್ಲಾ ಪ್ರಶ್ನೆಗಳು ಹಾಗೂ ಅನುಮಾನಗಳಿಗೆ ಉತ್ತರವನ್ನು ಕದುಕೊಳ್ಳುವ ಪ್ರಯತ್ನ ನಡೆಸುನ ಬನ್ನಿ. ಈ ಲೇಖನದಲ್ಲಿ, ಸೂರ್ಯಗ್ರಹಣದ ದಿನಾಂಕ ಮತ್ತು ಸಮಯದ ಜೊತೆಗೆ, ಈ ಅವಧಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಸಹ ನಾವು ನಿಮಗೆ ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 24 ರಂದು ದೀಪಾವಳಿ ಆಚರಿಸಲಾಗುತ್ತದೆ
ಈ ಬಾರಿ ನೀವು ದೀಪಾವಳಿಯನ್ನು ಆಚರಿಸುವಿರಿ ಮತ್ತು  ನಿಮ್ಮ ಮನೆಯನ್ನು ಕೂಡ ದೀಪಗಳಿಂದ ಅಲಂಕರಿಸುವಿರಿ, ಅಷ್ಟೇ ಅಲ್ಲ ಪ್ರಥಮ ಪೂಜ್ಯ ಗಣೇಶ ಹಾಗೂ ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಕೂಡ ಪೂಜಿಸಿ, ಸುಖ, ಶಾಂತಿ, ಸಂಪತ್ತು ಇತ್ಯಾದಿಗಳಿಗೆ ಪ್ರಾರ್ಥನೆ ಕೂಡ ಸಲ್ಲಿಸುವಿರಿ. ಹೌದು, ದೀಪಾವಳಿ ಹಬ್ಬವು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಬರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಈ ಬಾರಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯು ಅಕ್ಟೋಬರ್ 24 ರಂದು ಸಂಜೆ 4.44 ರವರೆಗೆ ಇದ್ದು ನಂತರ ಅಮವಾಸ್ಯೆ ಬರುತ್ತಿದೆ. ಈ ರೀತಿಯಾಗಿ ನೀವು ಅಕ್ಟೋಬರ್ 24 ರಂದು ದೀಪಾವಳಿಯನ್ನು ಆಚರಿಸಲು ಸಾಧ್ಯವಾಗುತ್ತದೆ ಮತ್ತು ನರಕ ಚತುರ್ದಶಿಯನ್ನು ಸಹ ಆಚರಿಸಬಹುದು.


ಇದನ್ನೂ ಓದಿ-Ratna: ಈ 2 ರಾಶಿಗಳ ಜನರಿಗೆ ಈ ರತ್ನ ಅತ್ಯಂತ ಶುಭ, ರಾತ್ರೋರಾತ್ರಿ ಬದಲಾಗುತ್ತೆ ಭಾಗ್ಯ


ಅಕ್ಟೋಬರ್ 25 ರಂದು ಖಂಡಗ್ರಾಸ್ ಸೂರ್ಯಗ್ರಹಣ ಸಂಭವಿಸಲಿದೆ
ಖಂಡಗ್ರಾಸ ಸೂರ್ಯಗ್ರಹಣವು ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಅಂದರೆ ಮಂಗಳವಾರ, ಅಕ್ಟೋಬರ್ 25, 2022 ರಂದು ಸಂಭವಿಸಲಿದೆ. ಗ್ರಹಣ ಹೇಗೇ ಇರಲಿ ಅದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂಬ ವಿಷಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ದೀಪಾವಳಿಯನ್ನು ಸಿದ್ಧಿಗಳ ಮಹಾಪರ್ವವೆಂದು ಪರಿಗಣಿಸಲಾಗಿದೆ, ಆದ್ದರಿಂದ ಋಷಿಗಳು ಇದನ್ನು ಸಿದ್ಧಿಕಲ್ ಎಂದು ಕರೆಯುತ್ತಾರೆ. ಗ್ರಹಣ ಕಾಲದಲ್ಲಿಯೇ ಶ್ರೀರಾಮನು ಗುರು ವಶಿಷ್ಠರಿಂದ ಮತ್ತು ಶ್ರೀ ಕೃಷ್ಣನು ಸಾಂದೀಪನಿ ಗುರುಗಳಿಂದ ದೀಕ್ಷೆಯನ್ನು ಪಡೆದರು ಎನ್ನಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಸೂರ್ಯಾಸ್ತದ ನಂತರ ಸಂಭವಿಸುವ ಸೂರ್ಯಗ್ರಹಣವು ಹೆಚ್ಚು ಪ್ರಭಾವಶಾಲಿಯಾಗಿರುವುದಿಲ್ಲ.


ಇದನ್ನೂ ಓದಿ-Planet Transit: ಮುಂದಿನ 4 ತಿಂಗಳು ಈ ರಾಶಿಗಳ ಜಾತಕದವರಿಗೆ ಬಂಬಾಟಾಗಿರಲಿವೆ


ಭಾರತ ಸೇರಿದಂತೆ ಈ ದೇಶಗಳಲ್ಲಿ ಗೋಚರಿಸಲಿದೆ
ಭಾರತೀಯ ಕಾಲಮಾನದ ಪ್ರಕಾರ, ಗ್ರಹಣದ ಆರಂಭ ಸಂಜೆ 4:31 ಕ್ಕೆ ಇರಲಿದೆ, ಗ್ರಹಣದ ಮಧ್ಯ ಕಾಲ 5:14 ಕ್ಕೆ ಮತ್ತು ಮೋಕ್ಷವು 5:57 ಕ್ಕೆ ಇರಲಿದೆ. ಇದರ ಸೂತಕ ಕಾಲ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 4:31 ರಿಂದ ಪ್ರಾರಂಭವಾಗುತ್ತದೆ. ಗ್ರಹಣವು ಸ್ವಾತಿ ನಕ್ಷತ್ರ ಮತ್ತು ತುಲಾ ರಾಶಿಯಯಲ್ಲಿ ಸಂಭವಿಸುತ್ತಿದೆ, ಆದ್ದರಿಂದ ಈ ರಾಶಿಯ ಜನರು ಅನಾರೋಗ್ಯ, ನೋವು ಮತ್ತು ಸಂಕಟಗಳಿಂದ ಬಳಲುವ ಸಾಧ್ಯತೆ ಇದೆ. ಈ ರಾಶಿ ಮತ್ತು ರಾಶಿಯ ಜನರು ಗ್ರಹಣವನ್ನು ನೋಡಬಾರದು. ಈ ಗ್ರಹಣವು ಭಾರತ, ಗ್ರೀನ್‌ಲ್ಯಾಂಡ್, ಸ್ವೀಡನ್, ನಾರ್ವೆ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ಸ್ಪೇನ್, ಯೆಮೆನ್, ಓಮನ್, ಸೌದಿ ಅರೇಬಿಯಾ, ಈಜಿಪ್ಟ್, ಇಟಲಿ, ಪೋಲೆಂಡ್, ರೊಮೇನಿಯಾ, ಆಸ್ಟ್ರಿಯಾ, ಗ್ರೀಸ್, ಟರ್ಕಿ, ಇರಾಕ್, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ, ಪಶ್ಚಿಮ ಶ್ರೀಲಂಕಾ, ಮಾಸ್ಕೋ, ಪಶ್ಚಿಮ ರಷ್ಯಾ, ನೇಪಾಳ ಮತ್ತು ಭೂತಾನ್ ಗಳಲ್ಲಿ ಗೋಚರಿಸಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.