ಬೆಂಗಳೂರು : ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಕಾರ್ತಿಕ ಮಾಸವು ತುಂಬಾ ವಿಶೇಷವಾಗಿರುತ್ತದೆ. ಹಿಂದೂ ಧರ್ಮದ ಅತಿದೊಡ್ಡ ಹಬ್ಬವಾದ ದೀಪಾವಳಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಹುಣ್ಣಿಮೆಯಂದು  ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ಬಾರಿ ದೀಪಾವಳಿ ಮತ್ತು ತುಳಸಿ ಪೂಜೆ ಎರಡೂ ದಿನ ಗ್ರಹಣಗಳು ಗೋಚರಿಸಲಿದೆ. ದೀಪಾವಳಿಯಂದು ಸೂರ್ಯಗ್ರಹಣ, ತುಳಸಿ ಪೂಜೆಯಂದು ಚಂದ್ರಗ್ರಹಣ  ಗೋಚರಿಸಲಿದೆ. ಕೇವಲ 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು ಗೋಚರಿಸಲಿವೆ. 


COMMERCIAL BREAK
SCROLL TO CONTINUE READING

ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿ ಲಕ್ಷ್ಮೀ ಪೂಜೆ ಆಚರಿಸಲಾಗುತ್ತದೆ. ಈ ಬಾರಿ ಇದೇ  ದಿನ ಸೂರ್ಯಗ್ರಹಣ ಸಂಭವಿಸಲಿದೆ. ಈ ವರ್ಷ, ಕಾರ್ತಿಕ ಮಾಸದ ಅಮಾವಾಸ್ಯೆ ಅಕ್ಟೋಬರ್ 24 ರ ಸಂಜೆಯಿಂದ ಪ್ರಾರಂಭವಾಗುತ್ತದೆ. ಮಾರನೇ ದಿನ ಅಂದರೆ ಅಕ್ಟೋಬರ್ 25 ರ ಸಂಜೆ 04.23 ರಿಂದ ಸೂರ್ಯ ಗ್ರಹಣ ಪ್ರಾರಂಭವಾಗುತ್ತದೆ. ಇದು 06.25 ರವರೆಗೆ ಇರುತ್ತದೆ.  ಈ ದಿನ ಸೂತಕದ ಅವಧಿಯು ಅಕ್ಟೋಬರ್ 24 ರ ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ.  ಆದರೆ ಭಾರತದಲ್ಲಿ ಸೂರ್ಯಗ್ರಹಣ  ಗೋಚರಿಸುವುದಿಲ್ಲವಾದ್ದರಿಂದ ಇದು ಮಾನ್ಯವಾಗಿರುವುದಿಲ್ಲ. 


ಇದನ್ನೂ ಓದಿ : ಅಂಗೈಯಲ್ಲಿ ಈ ಗುರುತಿದ್ದವರು 35ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ.!


ಮತ್ತೊಂದೆಡೆ, ಈ ವರ್ಷ ನವೆಂಬರ್ 8 ರಂದು ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಈ ದಿನ ತುಳಸಿ ಪೂಜೆ ಮಾಡಲಾಗುತ್ತದೆ. ಆದರೆ, ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ ಮತ್ತು ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುತ್ತದೆ. ಆದ್ದರಿಂದ  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ದಿನ ಮುಂಚಿತವಾಗಿ ತುಳಸಿ ಪೂಜೆ ಮಾಡುವಂತೆ ಸೂಚಿಸಲಾಗುತ್ತದೆ.  


ರಾಶಿಚಕ್ರದ ಚಿಹ್ನೆಗಳ ಮೇಲೆ ಸೂರ್ಯಗ್ರಹಣದ ಪರಿಣಾಮ :
4 ರಾಶಿಯವರಿಗೆ ಸೂರ್ಯಗ್ರಹಣ ಒಳ್ಳೆಯದಲ್ಲ. ವೃಷಭ, ಮಿಥುನ, ಕನ್ಯಾ ಮತ್ತು ತುಲಾ ರಾಶಿಯ ಜನರು ದೀಪಾವಳಿಯ ಈ ಸೂರ್ಯಗ್ರಹಣದ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು. 


ವೃಷಭ ರಾಶಿ - ಈ ಸೂರ್ಯಗ್ರಹಣವು ವೃಷಭ ರಾಶಿಯವರ ಮಾನಸಿಕ  ಒತ್ತಡ ಹೆಚ್ಚಾಗಬಹುದು. 
ಮಿಥುನ ರಾಶಿ - ಮಿಥುನ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಸಮಸ್ಯೆಗಳನ್ನು  ಎದುರಿಸಬಹುದು.
ಕನ್ಯಾ ರಾಶಿ- ಕನ್ಯಾ ರಾಶಿಯ ಜನರು ಸೂರ್ಯಗ್ರಹಣದಿಂದ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. 
ತುಲಾ ರಾಶಿ -  ತುಲಾ ರಾಶಿಯ ಜನರು ಈ ಸೂರ್ಯಗ್ರಹಣದಿಂದ ತಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.  


ಇದನ್ನೂ ಓದಿ :  Swapna Shastra: ಮದುವೆಯ ಕನಸು ಇಂತಹ ಘಟನೆಯ ಮುನ್ನೆಚ್ಚರಿಕೆ ನೀಡುತ್ತೆ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.