ತಲೆಹೊಟ್ಟು ಮತ್ತು ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಾಫಿ ಪುಡಿ..! ಆದರೆ ಹೀಗೆ ಬಳಸಿ
Coffee Mask for Hair Problems: ಹೆಚ್ಚಿನ ಜನರು ಪ್ರತಿದಿನ ಬೆಳಿಗ್ಗೆ ಕುಡಿಯುವ ಕಾಫಿ ನಿಮ್ಮ ಕೂದಲಿಗೆ ಅಗಾಧವಾದ ಪ್ರಯೋಜನಗಳನ್ನು ಉಂಟುಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು, ಕಾಫಿಯು ತಲೆಹೊಟ್ಟು ಮತ್ತು ಬಿಳಿ ಕೂದಲಿನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
Hair Care Tips: ಸುಂದರವಾದ ಕೂದಲನ್ನು ಹೊಂದಲು ನೀವು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ, ನಿಮಗಾಗಿ ಕೆಲವು ಕಾಫಿ ಮಾಸ್ಕ್‌ಗಳಿವೆ. ಇವು ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಹಾಗಾದರೆ ಆ ಕಾಫಿ ಮಾಸ್ಕ್‌ಗಳ ಬಗ್ಗೆ ತಿಳಿದುಕೊಳ್ಳೋಣ.
ಕಾಫಿ ಪುಡಿಯಿಂದ ತಲೆತೊಳೆದುಕೊಳ್ಳುವುದು ಉತ್ತಮ
ಕಾಫಿ ಮಾಸ್ಕ್ ಕಾಲು ಕಪ್ ಕಾಫಿ ಪುಡಿಗೆ ಬಿಸಿ ನೀರು ಸೇರಿಸಿ ಮಿಶ್ರಣ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಟ್ಟು ನಿಮ್ಮ ನೆತ್ತಿಯ ಮೇಲೆ ಹಾಕಿಕೊಳ್ಳಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. ಬೇರುಗಳಿಂದ ಹಿಡಿದು ತುದಿಗಳವರೆಗೆ ಚೆನ್ನಾಗಿ ಹಚ್ಚಿಕೊಳ್ಳಿ, ಸುಮಾರು 10-15 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.
ಇದನ್ನೂ ಓದಿ-ವಾರದಲ್ಲಿ 2 ಬಾರಿ ಈ ಹಣ್ಣನ್ನು ತಿಂದರೆ ಶಾಶ್ವತವಾಗಿ ಬುಡದಿಂದಲೇ ಕಪ್ಪಾಗುತ್ತೆ ಬಿಳಿಕೂದಲು
ಡ್ಯಾಂಡ್ರಫ್ ಸಮಸ್ಯೆಗೆ ಕಾಫಿ
ನೀವು ಮೊದಲೇ ಕೂದಲನ್ನು ಶಾಂಪೂ ಬಳಸಿ ತೊಳೆದಿರಬೇಕು. ನಂತರ ಕಾಫಿಯನ್ನು ಕುದಿಸಿ ಮತ್ತು ತಣ್ಣಗಾಗಲು ಬಿಟ್ಟು ತಲೆಯ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಇದನ್ನು ಮಾಡಿದ ನಂತರ ಕೂದಲನ್ನು ತೊಳೆಯುವ ಅಗತ್ಯವಿಲ್ಲ.
ಇದನ್ನೂ ಓದಿ-ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ದಿನಾಲೂ ಈ ಎಲೆ ತಿಂದರೆ ಸಾಕು!!
ಕಾಫಿ ಹೇರ್ ಮಾಸ್ಕ್ ತಯಾರಿಸುವ ವಿಧಾನ
*2 ಟೇಬಲ್ ಚಮಚ ಕಾಫಿ ಪುಡಿ,
*1 ಚಮಚ ಜೇನುತುಪ್ಪ
*1 ಚಮಚ ತೆಂಗಿನ ಎಣ್ಣೆ
ಈ ಮೂರು ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಬೇರುಗಳಿಂದ ತುದಿಯವರೆಗೆ ಹಚ್ಚಿ, 20-30 ನಿಮಿಷಗಳ ಕಾಲ ಅದನ್ನು ಬಿಡಿ. ನಂತರ ಕೂದನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೀವು ರೇಷ್ಮೆಯಂತಹ ಕೂದಲನ್ನು ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.