ನವದೆಹಲಿ :  ಜ್ಯೋತಿಷ್ಯದಲ್ಲಿ (Astrology) 2 ರಾಶಿಗಳನ್ನು ಹೇಳಲಾಗಿದೆ. ಈ ಎಲ್ಲಾ ರಾಶಿಚಕ್ರ ಚಿಹ್ನೆಗಳು ತನ್ನದೇ ಆದ ಗುಣ ಸ್ವರೂಪವನ್ನು ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ (Zodiac sign) ಬಹಳ ಬೇಗನೆ ಕೋಪ ಬರುತ್ತದೆಯಂತೆ. ಈ ಕೋಪದ ಕಾರಣ, ಕೆಲವೊಮ್ಮೆ ಈ ರಾಶಿಯ ಜನರು ತೊಂದರೆಗೂ ಸಿಲುಕುತ್ತಾರೆ. 


COMMERCIAL BREAK
SCROLL TO CONTINUE READING

ಮೇಷ (Aries) :  ಜ್ಯೋತಿಷ್ಯದಲ್ಲಿ (Astrology) ಮೇಷ ರಾಶಿಯನ್ನು ಮೊದಲ ರಾಶಿ ಎಂದು ಪರಿಗಣಿಸಲಾಗುತ್ತದೆ. ಮಂಗಳ ಮೇಷ ರಾಶಿಯ ಅಧಿಪತಿ.  ಜ್ಯೋತಿಷ್ಯದಲ್ಲಿ ಮಂಗಳನನ್ನು ಧೈರ್ಯ, ಸೇನೆ ಮತ್ತು ಪೊಲೀಸ್ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಈ ರಾಶಿಯಲ್ಲಿ ಮಂಗಳನ ಸ್ವಭಾವ ಹೆಚ್ಚು ಗೋಚರಿಸುತ್ತದೆ. ಮಂಗಳನನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ಮೇಷ ರಾಶಿಯ (Aries) ಜನರಿಗೆ ಬಹಳ ಬೇಗ ಕೋಪ ಬರುತ್ತದೆ. ಇವರಿಗೆ ಕೋಪ ಬಂದರೆ ಬೇಗನೆ ನಿಯಂತ್ರಣಕ್ಕೆ ಬರುವುದೂ ಇಲ್ಲವಂತೆ. ಈ ಕೋಪದ ಕಾರಣದಿಂದಾಗಿ, ಈ ರಾಶಿಯ ಜನರು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಇದನ್ನೂ ಓದಿ : Kartik Month 2021: ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಗೆ ಸಂಬಂಧಿಸಿದ ಈ ಕೆಲಸಗಳನ್ನು ಮಾಡಿದರೆ ಆಗಲಿದೆ ಅಭಿವೃದ್ದಿ


ಸಿಂಹ (Leo) : - ಈ ರಾಶಿಯ (Zodiac sign) ಜನರು ಕೂಡ ಬೇಗನೆ ಕೋಪಗೊಳ್ಳುತ್ತಾರೆ. ಸಿಂಹ ರಾಶಿಯವರು ಇತರರ ಅಡಿಯಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಯಾರಾದರೂ ಅವರ ಮೇಲೆ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸಿದರೆ, ಅವರು ಅದನ್ನು ಇಷ್ಟಪಡುವುದಿಲ್ಲ. ಅವರು ತಮ್ಮದೇ ನಿಯಮಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಯಾರಾದರೂ ತಮ್ಮ ಇಚ್ಛೆಗೆ ವಿರುದ್ಧವಾಗಿ ಹೋಗಲು ಪ್ರಯತ್ನಿಸಿದಾಗ ಕೋಪಗೊಳ್ಳುತ್ತಾರೆ. ಈ ರಾಶಿಚಕ್ರದ ಜನರು ಬೇಗನೆ ಕೋಪಗೊಳ್ಳುತ್ತಾರೆ. ಈ ಕಾರಣದಿಂದಾಗಿ ಅವರು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 


ಧನು (Sagittarius) : ಜ್ಯೋತಿಷ್ಯದ ಪ್ರಕಾರ, ಧನು ರಾಶಿಯನ್ನು ಅಗ್ನಿ ಅಂಶವಾಗಿಯೂ ಪರಿಗಣಿಸಲಾಗುತ್ತದೆ. ಧನು ರಾಶಿಯ ಜನರು ಸಣ್ಣ ಸಣ್ಣ ಕಾರಣಗಳಿಗೂ ಕೋಪಗೊಳ್ಳುತ್ತಾರೆ. ಇವರು ತಮ್ಮ ಗುರಿಗಳ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಇದರಿಂದಾಗಿ ಅವರು ವಿಫಲವಾದಾಗ ಕೆಲವೊಮ್ಮೆ ನಿರಾಶರಾಗುತ್ತಾರೆ. ಅವರು ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಅಲ್ಲದೆ ಅತೀ ಕಡಿಮೆ ಸ್ನೇಹಿತರನ್ನು ಹೊಂದಿರುತ್ತಾರೆ. ಧನು ರಾಶಿಯವರು ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಲು ಇಷ್ಟಪಡುತ್ತಾರೆ.  ತಪ್ಪುಗಳಾದಾಗ ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ. 


ಇದನ್ನೂ ಓದಿ : Astrology: ಈ 4 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ನವೆಂಬರ್ 2021


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ